Viral Video: ರಕ್ತ ಪರೀಕ್ಷೆ ವೇಳೆ ಸೂಜಿ ಚುಚ್ಚುವಾಗ ಚಿಕ್ಕ ಮಗುವಿನಂತೆ ಜೋರಾಗಿ ಕೂಗಿದ ಪೊಲೀಸ್; ವೈರಲ್ ವಿಡಿಯೋ ಇಲ್ಲಿದೆ
ಪೊಲೀಸ್ ಸಿಬ್ಬಂದಿಯೊಬ್ಬರು ರಕ್ತಪರೀಕ್ಷೆ ಮಾಡುವ ವೇಳೆ ಚಿಕ್ಕ ಮಕ್ಕಳಂತೆ ಜೋರಾಗಿ ಕೂಗುತ್ತಾ, ಕಿರುಚಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
ವೈದ್ಯರ ಬಳಿ ಚುಚ್ಚುಮದ್ದು ಪಡೆದುಕೊಳ್ಳಲು ಒಂದಷ್ಟು ಮಂದಿ ಭಯಪಟ್ಟು ಮತ್ತೊಂದಷ್ಟು ಮಂದಿ ನೋವಾಗುತ್ತದೆ ಎಂದು ಹಿಂದೇಟು ಹಾಕುವುದನ್ನು ನಾವು ನೋಡಿರುತ್ತೇವೆ. ಇಂತಹ ವ್ಯಕ್ತಿಗಳಿಗೆ ಕೆಲವೊಮ್ಮೆ ಚುಚ್ಚುಮದ್ದಿನ ಮಾತ್ರೆಯನ್ನು ನೀಡುವುದು ಕೂಡ ಇದೆ. ಆದರೆ ರಕ್ತ ಪರೀಕ್ಷೆಗೆ ಸೂಜಿ ಚುಚ್ಚಿಸಿಕೊಳ್ಳದೆ ಉಪಾಯವೇ ಇಲ್ಲ. ಹೀಗಾಗಿ ಸೂಜಿ ನೋಡುವಾಗ ಓಡುವವರು ವಿಧಿಯಿಲ್ಲದೆ ಸೂಜಿ ಚುಚ್ಚಿಸಿಕೊಳ್ಳಬೇಕಾಗುತ್ತದೆ. ಈ ವೇಳೆ ಒಂದಷ್ಟು ಮಕ್ಕಳು ಕೂಗುತ್ತಾರೆ, ಕಿರುಚಾಡುತ್ತಾರೆ. ಇದರಿಂದ ಹಿರಿಯರು ಹೊರತಾಗಿಲ್ಲ ಎಂಬುದಕ್ಕೆ ಈ ಪೊಲೀಸಪ್ಪನೇ ಸಾಕ್ಷಿ. ಹೌದು, ರಕ್ತಪರೀಕ್ಷೆ ಮಾಡುವ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಚಿಕ್ಕ ಮಕ್ಕಳಂತೆ ಜೋರಾಗಿ ಕೂಗುತ್ತಾ ಕಿರುಚಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ.
ಈ ವೈರಲ್ ವಿಡಿಯೋ ಉತ್ತರ ಪ್ರದೇಶದ ಉನ್ನಾವೋದ ಪೊಲೀಸ್ ತರಬೇತಿ ಶಿಬಿರದ್ದು ಎಂದು ಹೇಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಪೊಲೀಸ್ ಅಧಿಕಾರಿಯ ಸೂಚನೆಯ ಮೇರೆಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ನಂತರ ತರಬೇತಿಗಾಗಿ ಸಿಬ್ಬಂದಿಗಳ ರಕ್ತ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಇದರಲ್ಲಿ ಹೆಡ್ ಕಾನ್ಸ್ಟೇಬಲ್ ಅಫ್ತಾಬ್ ರಕ್ತದ ಮಾದರಿ ನೀಡಲು ಮುಂದಾದಾಗ ವೈದ್ಯರ ಕೈಯಲ್ಲಿ ಸೂಜಿಯನ್ನು ನೋಡಿದ ಕೂಡಲೇ ನಿಧಾನವಾಗಿ ಸೂಜಿ ಚುಚ್ಚುವಂತೆ ಕೈಮುಗಿದ ಪ್ರಾರ್ಥಿಸಲು ಪ್ರಾರಂಭಿಸಿದರು. ಅದಾಗ್ಯೂ ಸೂಜಿಯುಳ್ಳ ಚುಚ್ಚುಮದ್ದನ್ನು ವೈದ್ಯರು ಕೈಗೆತ್ತಿಕೊಂಡಾಗ ಪೊಲೀಸ್ ಸಿಬ್ಬಂದಿ ಜೋರಾಗಿ ಅಳಲು ಪ್ರಾರಂಭಿಸುತ್ತಾರೆ. ಈ ವೇಳೆ ವೈದ್ಯರ ಸೂಚನೆಯಂತೆ ಉಳಿದ ಮೂರ್ನಾಲ್ಕು ಮಂದಿ ಸಿಬ್ಬಂದಿಗಳು ಅವರನ್ನು ಹಿಡಿದುಕೊಂಡಿದ್ದಾರೆ. ಸೂಜಿ ಚುಚ್ಚುವಾಗ ಭಿನ್ನ ವಿಭಿನ್ನ ಧ್ವನಿಗಳ ಮೂಲಕ ಕಿರುಚಾಡಿದ್ದಾರೆ.
ಧೈರ್ಯಶಾಲಿ ಕ್ಷೇತ್ರಗಳಲ್ಲಿ ಒಂದಾದ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುತ್ತಿರುವವರು ಒಂದು ಸಣ್ಣ ಸೂಜಿಗೆ ಭಯಪಡುವುದು ಎಂದರೆ ಏನರ್ಥ? ಅಫ್ತಾಬ್ ಅವರು ಸೂಜಿ ಚುಚ್ಚಿಸಿಕೊಳ್ಳುವಾಗ ಚಿಕ್ಕ ಮಗುವಿನಂತೆ ಅಳುತ್ತಾ, ವಿವಿಧ ರೀತಿಯಲ್ಲಿ ಚೀರಾಡುವ ವಿಡಿಯೋ ನೋಡಿದರೆ ನಿಮ್ಮ ಮುಖದಲ್ಲಿ ನಾನ್ಸ್ಟಾಪ್ ನಗು ಬರುವುದು ಖಂಡಿತ. ವಿಡಿಯೋ ಇಲ್ಲಿದೆ ನೋಡಿ:
View this post on Instagram
ವರ್ಷಗಳ ಹಿಂದೆ ಸಣ್ಣ ಬಾಲಕನೊಬ್ಬ ವೈದ್ಯರಿಂದ ಸೂಜಿ ಚುಚ್ಚಿಸಿಕೊಳ್ಳುವಾಗ ನೀಡಿದ ಪ್ರತಿಕ್ರಿಯೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಎದ್ದುಬಿದ್ದು ನಗುವಂತೆ ಮಾಡಿಸಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಬಾಲಕ ಚುಚ್ಚುಮದ್ದು ಪಡೆಯುವಾಗ ಭಯಪಟ್ಟುಕೊಳ್ಳುತ್ತಾಮೆ. ವೈದ್ಯರು ಮತ್ತು ಅವರ ತಾಯಿ ಅವನಿಗೆ ಭಯಪಡದಂತೆ ವಿವರಿಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ಚುಚ್ಚುಮದ್ದು ಹಾಕಿಸಿಕೊಂಡಾಗ ಆತನ ಪ್ರತಿಕ್ರಿಯೆ ಹೇಗಿದೆ ಎಂದರೆ ನೋಡಿದ ನಂತರ ನೆಟ್ಟಿಗರು ಎದ್ದುಬಿದ್ದು ನಗಾಡಿದ್ದರು.
Published On - 5:37 pm, Sun, 17 July 22