AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಹೂವು ರಂಗೋಲಿಯಾಗಿ, ರಂಗೋಲಿ ಅದಿನ್ನೇನೋ ಬದಲಾಗಿ ತಲೆಕೆಡಿಸಿಕೊಳ್ಳುವಂತೆ ಮಾಡುವ ವಿಡಿಯೋ ವೈರಲ್

ಕಣ್ಣಿನಲ್ಲಿ ನಂಬಲು ಸಾಧ್ಯವಾಗದ, ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೂವಿನಿಂದ ರಂಗೋಲಿ, ರಂಗೋಲಿಯಿಂದ ಅದಿನ್ನೇನೋ ಆಗಿ ಬದಲಾಗುವ ವಿಡಿಯೋ ಇಲ್ಲಿದೆ ನೋಡಿ.

Optical Illusion: ಹೂವು ರಂಗೋಲಿಯಾಗಿ, ರಂಗೋಲಿ ಅದಿನ್ನೇನೋ ಬದಲಾಗಿ ತಲೆಕೆಡಿಸಿಕೊಳ್ಳುವಂತೆ ಮಾಡುವ ವಿಡಿಯೋ ವೈರಲ್
ಆಪ್ಟಿಕಲ್ ಭ್ರಮೆ ವಿಡಿಯೋ
TV9 Web
| Edited By: Rakesh Nayak Manchi|

Updated on: Jul 17, 2022 | 4:00 PM

Share

ವೈರಲ್ ವೀಡಿಯೋ: ಇಂಟರ್ ನೆಟ್ ಲೋಕದಲ್ಲಿ ಹಂಚಿಕೊಳ್ಳುವ ವೀಡಿಯೊಗಳು ಬೆಚ್ಚಿ ಬೀಳಿಸುವಂತಿದ್ದರೆ ಇನ್ನು ಕೆಲವು ವಿಡಿಯೋಗಳು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತವೆ. ಇನ್ನೂ ಕೆಲವು ವಿಡಿಯೋಗಳು ನಂಬಲು ಸಾಧ್ಯವಾಗದೇ ಇರುವಂತಹದ್ದಕ್ಕೆ. ಇದೀಗ ಇಂತಹ ಒಂದು ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ, ಈ ವಿಡಿಯೋ ನೋಡಿದ ನಂತರ ನಿಮ್ಮ ಮನಸ್ಸು ಒಂದು ನಿಮಿಷ ಕಂಗೆಡುವುದು ಖಚಿತ.

ವೈರಲ್ ಆಗುತ್ತಿರುವ ಈ ವಿಡಿಯೋದ ಆರಂಭದಲ್ಲಿ ವ್ಯಕ್ತಿಯೊಬ್ಬರ ಕೈಯಲ್ಲಿ ನೇರಳೆ ಬಣ್ಣದ ಹೂವು ಕಾಣಿಸುತ್ತಿದೆ. ನಂತರ ಆ ವ್ಯಕ್ತಿ ತನ್ನ ಕೈಯಿಂದ ಹೂವನ್ನು ಕೆಳಗೆ ಬಿಡುತ್ತಾನೆ ಮತ್ತು ತಕ್ಷಣ ಹೂವು ಅಲ್ಲೇ ಸ್ಟಕ್ ಆದ ಹಾಗೆ ಕಾಣುತ್ತದೆ. ನಂತರ ಜೂಮ್ ಆದಾಗ ಆ ವ್ಯಕ್ತಿ ಹೂವನ್ನು ಒರೆಸುತ್ತಾನೆ, ಆಗ ಅದು ರಂಗೋಲಿಯಾಗಿ ಬದಲಾಗಿರುವುದು ಗೊತ್ತಾಗುತ್ತದೆ. ಹೂವಿನ ರಂಗೋಲಿ ಒರಸಿದ ನಂತರ ಕೈಯನ್ನು ಮುಷ್ಠಿ ಮಾಡುತ್ತಾನೆ. ಈ ಮುಷ್ಟಿಯ ಮಧ್ಯದ ಬೆರಳು ಮರದ ಕಾಂಡವಾಗಿ ಬದಲಾಗುತ್ತದೆ.

ಇದರ ಮುಂದುವರಿದ ಭಾಗವಾಗಿ ಆ ಮರದ ಕಾಂಡ ಮಧ್ಯೆ ಸಣ್ಣ ರಂದ್ರ ಇದ್ದಂತೆ ಕಾಣುತ್ತದೆ. ನಂತರ ವಿಡಿಯೋ ಜೂಮ್ ಆದಾಗ ಅದು ಸಣ್ಣ ಚೆಂಡು ಆಗಿರುತ್ತದೆ. ಆ ಚೆಂಡನ್ನು ವ್ಯಕ್ತಿ ಮೇಲಕ್ಕೆ ಎಸೆಯುತ್ತಾನೆ ಮತ್ತು ಅದು ಇನ್ನೇನೋ ಆಗಿ ಹಲಗೆಯೊಂದು ಕಾಣಿಸುತ್ತದೆ. ಈ ಹಲಗೆಯಂತಿರುವ ವಸ್ತುವನ್ನು ಎಸೆದಾಗ ಅದು ಇಟ್ಟಿಗೆಯಾಗಿ ಮಾರ್ಪಾಡು ಆಗುತ್ತದೆ. ಜಾದು ರೀತಿಯಲ್ಲಿರುವ ಈ ವಿಡಿಯೋ ನೋಡಿದ ನಂತರ ಗೊಂದಲಗಳು ಏರ್ಪಟ್ಟು ನಿಮ್ಮ ತಲೆಯಲ್ಲಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿರುವುದು ಖಂಡಿತ.

ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ‘ನನ್ನ ಮೆದುಳು ಬುದ್ದಿಮತ್ತೆಯನ್ನು ನಿಲ್ಲಿಸಿದೆ’ ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ಲೈಕ್​ಗಳು ಬಂದಿದ್ದು, ನೆಟ್ಟಿಗರು ಇದು ಹೇಗೆ ಸಾಧ್ಯ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ