AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪ್ರತಿಸ್ಪರ್ಧಿ ಝೋಮ್ಯಾಟೋ ಡೆಲಿವರಿ ಬಾಯ್ ಕೈ ಹಿಡಿದುಕೊಂಡು ಹೋದ ಸ್ವಿಗ್ಗಿ ಆಹಾರ ವಿತರಕ; ವೈರಲ್ ವಿಡಿಯೋ ಇಲ್ಲಿದೆ

ಬೈಕ್​ನಲ್ಲಿ ಹೋಗುತ್ತಿರುವ ಸ್ವಿಗ್ಗಿ ಆಹಾರ ವಿತರಕನೊಬ್ಬ ಸೈಕಲ್​ನಲ್ಲಿ ಹೋಗುತ್ತಿರುವ ಝೋಮ್ಯಾಟೋ ಆಹಾರ ವಿತರಕನ ಕೈಯನ್ನು ಹಿಡಿದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ರೀತಿ ಪರಸ್ಪರ ಸಹಾಯ ಮಾಡಿದ್ದು ಇದೇ ಮೊದಲಲ್ಲ. ಈ ಬಗ್ಗೆ ವರದಿ ಇಲ್ಲಿದೆ.

Viral Video: ಪ್ರತಿಸ್ಪರ್ಧಿ ಝೋಮ್ಯಾಟೋ ಡೆಲಿವರಿ ಬಾಯ್ ಕೈ ಹಿಡಿದುಕೊಂಡು ಹೋದ ಸ್ವಿಗ್ಗಿ ಆಹಾರ ವಿತರಕ; ವೈರಲ್ ವಿಡಿಯೋ ಇಲ್ಲಿದೆ
ಪ್ರತಿಸ್ಪರ್ಧಿಗಳಿಗೆ ಸಹಾಯ ಮಾಡಿದ ದೃಶ್ಯಾವಳಿ ಸೆರೆ
TV9 Web
| Updated By: Rakesh Nayak Manchi|

Updated on:Jul 18, 2022 | 10:29 AM

Share

ಒಬ್ಬರ ಕಷ್ಟವನ್ನು ಅರ್ಥಮಾಡಿಕೊಂಡು ಸಹಾಯ ಮಾಡುವುದರಲ್ಲಿ ಸಿಗುವ ಸಂತೋಷ ಬೇರೆ ಎಲ್ಲೂ ಸಿಗಲಾರದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ಆಹಾರ ವಿತರಣಾ ಪ್ರತಿಸ್ಪರ್ಧಿಗಳದ್ದಾಗಿದೆ. ನಮಗೂ ನಿಮಗೂ ತಿಳಿದಿರುವಂತೆ ಆಹಾರ ವಿತರಕರು ನಾವು ಯಾವುದೇ ಸಂದರ್ಭದಲ್ಲಿ ಆಹಾರ ಆರ್ಡರ್ ಮಾಡಿದರೆ ಡೆಡ್​ಲೈನ್​ಗೆ ಸರಿಯಾಗಿ ಆಹಾರ ಡೆಲಿವೆರಿ ಮಾಡುತ್ತಾರೆ. ಆದರೂ ಕೆಲವೊಮ್ಮೆ ಕೆಲವು ವಿತರಕರು ಸೈಕಲ್​ನಂತಹ ವಾಹನಗಳನ್ನು ಬಳಸುವುದರಿಂದ ಆಹಾರ ಡೆಲಿವರಿ ಸಮಯದಲ್ಲಿ ಏರುಪೇರು ಆಗುತ್ತವೆ. ಹೀಗಾಗಬಾರದು ಎಂಬ ಕಾರಣಕ್ಕೆ ಸೈಕಲ್​ನಲ್ಲಿ ಹೋಗುತ್ತಿದ್ದ ಝೋಮ್ಯಾಟೋ (Zomato) ಆಹಾರ ವಿತರಕನನ್ನು ಬೈಕ್​ನಲ್ಲಿ ಹೋಗುತ್ತಿರುವ ಸ್ವಿಗ್ಗಿ (Swiggy) ಆಹಾರ ವಿತರಕ ಕೈ ಹಿಡಿದುಕೊಂಡು ರಸ್ತೆಯಲ್ಲಿ ಸಾಗಿದ್ದಾರೆ.

ಕಾರು ಚಾಲಕರೊಬ್ಬರು ಮೊಬೈಲ್ ಮೂಲಕ ಅದ್ಭುತ ಸ್ನೇಹದ ದೃಶ್ಯಾವಳಿಯನ್ನು ಸೆರೆಹಿಡಿದ್ದಾರೆ. ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಬೈಕ್​ನಲ್ಲಿ ಹೋಗುತ್ತಿರುವ ಸ್ವಿಗ್ಗಿ ಆಹಾರ ವಿತರಕನೊಬ್ಬ ಸೈಕಲ್​ನಲ್ಲಿ ಹೋಗುತ್ತಿರುವ ಝೋಮ್ಯಾಟೋ ಆಹಾರ ವಿತರಕನ ಕೈಯನ್ನು ಹಿಡಿದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಪ್ರತಿಸ್ಪರ್ಧಿ ಕಂಪನಿಯಾಗಿದ್ದರೂ ಕಷ್ಟಕ್ಕೆ ನೆರವಾಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಸನ್ನಾ ಅರೋರಾ ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಜುಲೈ 9 ರಂದು ಹಂಚಿಕೊಂಡಿದ್ದು, “ದೆಹಲಿಯಲ್ಲಿ ಈ ಅತ್ಯಂತ ಬಿಸಿ ಮತ್ತು ಅಸಹನೀಯ ದಿನಗಳಲ್ಲಿ ಕಂಡ ನಿಜವಾದ ಸ್ನೇಹ” ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ವೈರಲ್ ಪಡೆದು ಈವರೆಗೆ 4.66 ಲಕ್ಷ ಲೈಕ್​ಗಳು ಬಂದಿದ್ದು, ಸ್ನೇಹವನ್ನು ಹೊಗಳುವ ಸಾಕಷ್ಟು ಕಾಂಮೆಂಟ್​ಗಳು ಬಂದಿವೆ.

View this post on Instagram

A post shared by Sannah Arora (@sannaharora)

Published On - 10:29 am, Mon, 18 July 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ