ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಅದರಲ್ಲೂ ಕೋತಿ, ನಾಯಿ, ಬೆಕ್ಕಿನಂತಹ ಪ್ರಾಣಿಗಳು ಜನರಿಗೆ ಇಷ್ಟವಾಗಲು ಕಾರಣ ಅವುಗಳ ವರ್ತನೆಗಳು. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಪಾಠ ಕೇಳಲು ಕೋತಿಯೊಂದು ತರಗತಿಯೊಳಗೆ ಬಂದು ಬೆಂಚ್ ಮೇಲೆ ಕುಳಿತುಕೊಳ್ಳುವುದನ್ನು ಕಾಣಬಹುದು.
ಜಾರ್ಖಂಡ್‌ನ ಹಜಾರಿಬಾಗ್‌ನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಈ ವೇಳೆ ಕೋತಿಯೊಂದು ತರಗತಿಗೆ ಎಂಟ್ರಿ ಕೊಟ್ಟಿದೆ. ಆದರೆ ನಮ್ಮ ಜೊತೆ ಆತನೂ ಒಬ್ಬ ಎಂಬ ಮನಸ್ಥಿತಿಯಿಂದಲೇನೋ ಇದನ್ನು ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಹೊರಗೆ ಓಡಿಸದೆ ಸುಮ್ಮನಿದ್ದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದನ್ನು ಮುಂದುವರಿಸಿದರು. ಅಷ್ಟೇ ಅಲ್ಲದೆ ಶಿಕ್ಷಕರು ಕುಳಿತುಕೊಳ್ಳುವ ಕಚೇರಿಗೂ ತೆರಳಿದ ಕೋತಿ ಮೇಜಿನ ಮೇಲೂ ಕುಳಿತುಕೊಂಡು ಶಾಂತವಾಗಿ ವರ್ತಿಸಿದೆ.
In #Jharkhand's #Hazaribagh a #wild langoor attends a government school along with other students. pic.twitter.com/nTInwSfwMv
— Deepak Mahato (@deepakmahato) September 15, 2022
ಇದರ ವಿಡಿಯೋವನ್ನು ಗುರುವಾರದಂದು ದೀಪಕ್ ಮಹತೋ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಮಂಗ ಕೂಡ ಹೋಗುತ್ತದೆ” ಎಂದು ಶೀರ್ಷಿಕೆ ನೀಡಿದ್ದಾರೆ ತರಗತಿಯೊಂದರ ಮುಂದಿನ ಸಾಲಿನಲ್ಲಿ ಮಂಗ ಕುಳಿತಿರುವ ಫೋಟೋ ಕೂಡ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. “ಶಾಲೆಯಲ್ಲಿ ಹೊಸ ವಿದ್ಯಾರ್ಥಿ” ಎಂದು ಟ್ವಿಟರ್ ಪೋಸ್ಟ್ಗೆ ಶೀರ್ಷಿಕೆ ನೀಡಲಾಗಿದೆ.
The new #student in the #school. pic.twitter.com/Cr0hPwonZK
— Deepak Mahato (@deepakmahato) September 15, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 11:53 am, Sun, 18 September 22