ಕೋತಿಗಳು ಅತ್ಯಂತ ಬುದ್ಧಿವಂತ ಜೀವಿಗಳು. ಸದಾಕಾಲ ಚೇಷ್ಟೆ, ಆಟಗಳಿಂದ ನೋಡುಗರ ಮುಖದಲ್ಲಿ ನಗೆ ತರಿಸುತ್ತವೆ. ಕೆಲವೊಮ್ಮೆ ಕೋತಿಗಳ ಚೇಷ್ಟೆ ಮಾನವನಿಗೆ ಅಪಾಯ ತಂದೊಟ್ಟುತ್ತವೆ. ಕೋತಿಗಳ ಕದಿಯುವ ಗುಣದಿಂದ ಪ್ರವಾಸಿ ಸ್ಥಳಗಳಲ್ಲಿ ವಸ್ತುವನ್ನು ಜೋಪಾನವಾಗಿಟ್ಟುಕೊಳ್ಳುವುದೇ ಕಷ್ಟದ ಕೆಲಸ. ಕೆಲವೊಂದು ಕೋತಿಗಳ ಚೇಷ್ಟೆಯ ಕೆಲಸಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತಲೇ ಇರುತ್ತವೆ. ಈಗ ಕೋತಿಯೊಂದು ಉದ್ದದ ಕೋಲನ್ನು ಬಳಸಿಕೊಂಡು ಕೊಕಾ ಕೋಲಾ ಬಾಟಲಿಯನ್ನು ಹೊರಗೆಳೆದುಕೊಂಡು ಕುಡಿಯುವ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಈ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಯಿಸಿದ್ದಾರೆ.
ಈ ಕಿರು ವೀಡಿಯೋದಲ್ಲಿ ತಂತಿಬೇಲಿಯ ಒಳಗಿದ್ದ ಕೊಕೊ ಕೋಲಾ ಬಾಟಲಿಯನ್ನು ಕೋಲಿನಿಂದ ಬಡಿದು ಬೀಳಿಸಿಕೊಂಡ ಕೋತಿ ಬಳಿಕ ಅದನ್ನು ತನ್ನೆಡೆಗೆ ಎಳೆದುಕೊಂಡು ಸರಾಗವಾಗಿ ಮುಚ್ಚಳ ತೆಗೆದು ಕುಡಿಯುತ್ತದೆ. ಈ ವೀಡಿಯೋ ಇಂಟರ್ನೆಟ್ನಲ್ಲಿ ಈಗ ಸಖತ್ ವೈರಲ್ ಆಗಿದೆ. ಕೋತಿಯ ಜಾಣ್ಮೆಗೆ ನೋಡುಗರು ಶಭಾಸ್ ಎಂದಿದ್ದಾರೆ. ಹೆಲಿಕಾಪ್ಟರ್ ಯಾತ್ರಾ ಎನ್ನುವ ಇನ್ಸ್ಟಾಗ್ರಾಮ್ ಬಕೆದಾರರೊಬ್ಬರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ವೀಡಿಯೋ 15 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 9 ಸಾವಿರಕ್ಕೂ ಅಧಿಕ ಲೈಕ್ಗಳನ್ನು ಪಡೆದಿದೆ.
ಪ್ರಾಣಿಗಳ ವೀಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲೇನಲ್ಲ. ಬೆಕ್ಕು, ನಾಯಿಗಳ ತುಂಟಾಟದ ಸಾಕಷ್ಟು ವೀಡಿಯೋ ಈ ಹಿಂದೆಯೂ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಬೆಕ್ಕೊಂದು ಜಿಮ್ನಲ್ಲಿ ವರ್ಕೌಟ್ ಮಾಡುವ ವೀಡಿಯೋ ಕಾಣಿಸಿಕೊಂಡಿತ್ತು. ಇದು ಮನೆಯಲ್ಲಿ ವ್ಯಾಯಾಮ ಮಾಡದೆ ಆಲಸ್ಯ ಆವರಿಸಕೊಂಡುಕ ಕುಳಿತಿರುವವರಿಗೆ ಸ್ಪೂರ್ತಿ ತುಂಬಿದ ವೀಡಿಯೋದಂತಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಇದೀಗ ಕೋತಿಯ ಬುದ್ಧಿವಂತಿಯ, ಸ್ಮಾರ್ಟ್ ವರ್ಕ್ ನ ವೀಡಿಯೋ ನೋಡುಗರ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ:
Viral Video: ಕೋಪಗೊಂಡ ಮಗನನ್ನು ಸಂತೈಸಿದ ತಾಯಿ; ನೆಟ್ಟಿಗರು ಮೆಚ್ಚಿಕೊಂಡ ಹೃದಯಸ್ಪರ್ಶಿ ವಿಡಿಯೋ ನೋಡಿ
Viral Video: ಬಾಯಾರಿದ ನಾಯಿಮರಿಗೆ ಬೋರ್ವೆಲ್ ಪಂಪ್ ಹೊಡೆದು ನೀರು ಕುಡಿಸಿದ ಬಾಲಕ; ವಿಡಿಯೋ ವೈರಲ್
Published On - 10:56 am, Fri, 10 December 21