Viral Video: ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರ ಮೇಲೆ ಅಚಾನಕ್ಕಾಗಿ ಬಿತ್ತು ಮರದ ರೆಂಬೆ

ಆಗಾಗ ರಸ್ತೆ ಅಪಘಾತಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಇಂತಹ ಅಪಘಾತಗಳನ್ನು ನೋಡಿದಾಗ ತಮ್ಮ ಸುರಕ್ಷತೆಯನ್ನು  ಹೇಗೆ ಮಾಡಿಕೊಳ್ಳಬೇಕೆಂಬ ಕಿವಿಮಾತು ಸಿಕ್ಕಂತಾಗುತ್ತದೆ.

Viral Video: ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮೂವರ ಮೇಲೆ ಅಚಾನಕ್ಕಾಗಿ ಬಿತ್ತು ಮರದ ರೆಂಬೆ
ಮರ

Updated on: May 31, 2023 | 12:47 PM

ಆಗಾಗ ರಸ್ತೆ ಅಪಘಾತಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಇಂತಹ ಅಪಘಾತಗಳನ್ನು ನೋಡಿದಾಗ ತಮ್ಮ ಸುರಕ್ಷತೆಯನ್ನು  ಹೇಗೆ ಮಾಡಿಕೊಳ್ಳಬೇಕೆಂಬ ಕಿವಿಮಾತು ಸಿಕ್ಕಂತಾಗುತ್ತದೆ. ಇನ್ನೇನು ಮಳೆಗಾಲ ಶುರುವಾಗುತ್ತಿದೆ, ಪ್ರತಿ ನಗರಗಳಲ್ಲೂ ಸಡಿಲಗೊಂಡಿರುವ ಮರಗಳು ಇದ್ದೇ ಇರುತ್ತವೆ, ಹಾಗಾಗಿ ಜನರು ತಮ್ಮ ಸುರಕ್ಷತೆಯಲ್ಲಿ ತಾವಿರಬೇಕು ಎನ್ನುವ ಸಂದೇಶವನ್ನು ಈ ವಿಡಿಯೋ ನೀಡುತ್ತದೆ.

ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸ್ಕೂಟಿಯಲ್ಲಿ ಹೋಗುತ್ತಿದ್ದ ಮೂವರು ಯುವಕರು ಹಠಾತ್ ಅಪಘಾತಕ್ಕೆ ಬಲಿಯಾಗಿರುವುದನ್ನು ಕಾಣಬಹುದು. ಎಲ್ಲರನ್ನೂ ಅಚ್ಚರಿಗೊಳಿಸುವ ಈ ವಿಡಿಯೋ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ.

ಇದರಲ್ಲಿ ರಸ್ತೆ ಬದಿಯಲ್ಲಿದ್ದ ಮರದಿಂದ ಅದರ ಕೊಂಬೆ ಇದ್ದಕ್ಕಿದ್ದಂತೆ ಬೀಳುತ್ತಿರುವುದು ಕಂಡು ಬಂದಿದೆ. ಆ ಸಮಯದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಮೂವರ ತಲೆಯ ಮೇಲೆ ಬೀಳುತ್ತದೆ. ಇದರಿಂದ ಸ್ಕೂಟಿ ಸವಾರಿ ಮಾಡುತ್ತಿದ್ದ ಮೂವರು ಯುವಕರು ಕೆಳಗೆ ಬಿದ್ದಿದ್ದಾರೆ, ಇದನ್ನು ನೋಡಿದ ಸ್ಥಳೀಯರು ತಕ್ಷಣ ಮುಂದೆ ಓಡಿ ಬಂದು ಮರದ ಕೊಂಬೆಯಿಂದ ಅವರನ್ನು ಹೊರತೆಗೆಯುತ್ತಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: Video: ಚಲಿಸುತ್ತಿರುವ ಕಾರಿನ ಮೇಲೆ ಪುಷ್​-ಅಪ್ಸ್, ಮದ್ಯಪಾನ, ನೃತ್ಯ : ಪ್ರಕರಣ ದಾಖಲಿಸಿ ದಂಡ ವಿಧಿಸಿದ ಪೊಲೀಸರು

ಮರದ ಕೊಂಬೆ ಬಿದ್ದು ಅವಘಡ
ಪೊಲೀಸರು ಸದಾ ಟ್ರಾಫಿಕ್ ನಿಯಮ ಪಾಲಿಸುವಂತೆ ಸಲಹೆ ನೀಡುತ್ತಾರೆ, ಇದೇ ವೇಳೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಮೂವರು ಯುವಕರು ಹೆಲ್ಮೆಟ್ ಧರಿಸದೇ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದು ಸಾಕಷ್ಟು ಅಪಾಯಕಾರಿಯಾಗಬಹುದು. ಮಳೆಗಾಲದ ಆರಂಭವಾಗುತ್ತಿದ್ದು,   ಬೀಸುತ್ತಿರುವ ಬಿರುಗಾಳಿಯಿಂದಾಗಿ ಏಕಾಏಕಿ ಮರದ ರೆಂಬೆಗಳು ತುಂಡಾಗಿ ಬೀಳುವ ಘಟನೆಗಳು ಹೆಚ್ಚಾಗುತ್ತಿವೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸುವಾಗ ಸಂಚಾರ ನಿಯಮಗಳನ್ನು ಪಾಲಿಸುವ ಮಹತ್ವದ ಬಗ್ಗೆ ಜನರು ಚರ್ಚೆ ನಡೆಸಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us