AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಚಲಿಸುತ್ತಿರುವ ಕಾರಿನ ಮೇಲೆ ಪುಷ್​-ಅಪ್ಸ್, ಮದ್ಯಪಾನ, ನೃತ್ಯ : ಪ್ರಕರಣ ದಾಖಲಿಸಿ ದಂಡ ವಿಧಿಸಿದ ಪೊಲೀಸರು

ಜನರು ಬೈಕ್​ನಲ್ಲಿ ವ್ಹೀಲಿಂಗ್, ವೇಗದಿಂದ ಕಾರು ಚಲಾಯಿಸುವುದು ಸೇರಿದಂತೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡುತ್ತಿರುತ್ತೀರಿ, ಆದರೆ ಈ ವ್ಯಕ್ತಿ ಕಾರಿನ ಮೇಲೆ ಪುಷ್​ ಅಪ್ಸ್​ ಮಾಡಿ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಕಾರಿನ ಮಾಲೀಕರಿಗೆ ದಂಡ ವಿಧಿಸಿದ್ದಾರೆ.

Video: ಚಲಿಸುತ್ತಿರುವ ಕಾರಿನ ಮೇಲೆ ಪುಷ್​-ಅಪ್ಸ್, ಮದ್ಯಪಾನ, ನೃತ್ಯ : ಪ್ರಕರಣ ದಾಖಲಿಸಿ ದಂಡ ವಿಧಿಸಿದ ಪೊಲೀಸರು
ವೈರಲ್ ವಿಡಿಯೋ
Follow us
ನಯನಾ ರಾಜೀವ್
|

Updated on: May 31, 2023 | 8:12 AM

ಜನರು ಬೈಕ್​ನಲ್ಲಿ ವ್ಹೀಲಿಂಗ್, ವೇಗದಿಂದ ಕಾರು ಚಲಾಯಿಸುವುದು ಸೇರಿದಂತೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡುತ್ತಿರುತ್ತೀರಿ, ಆದರೆ ಈ ವ್ಯಕ್ತಿ ಕಾರಿನ ಮೇಲೆ ಪುಷ್​ ಅಪ್ಸ್​ ಮಾಡಿ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಕಾರಿನ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಕೇವಲ ಪುಷ್​ ಅಪ್ಸ್​ ಮಾತ್ರವಲ್ಲ ಕೆಲವರು ಮಧ್ಯಪಾನ ಮಾಡುತ್ತಿದ್ದರು, ಕಾರಿನ ನಾಲ್ಕೂ ಬದಿಗಳಲ್ಲಿ ದೇಹವನ್ನು ಹೊರಹಾಕಿ ಕಿರುಚಾಡುತ್ತಿದ್ದರು, ನೃತ್ಯ ಮಾಡುತ್ತಿದ್ದರು ಹೀಗಾಗಿ ಪೊಲೀಸರು ದಂಡ ಹಾಕಿದ್ದಾರೆ. ಘಟನೆಯ ಎರಡು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು, ನಂತರ ನಗರ ಪೊಲೀಸರು ಕಾರಿನ ಮಾಲೀಕರಿಗೆ 6,500 ರಊ. ದಂಡವನ್ನು ವಿಧಿಸಿದ್ದಾರೆ.

ಕ್ಲಿಪ್ ಒಂದರಲ್ಲಿ, ಟ್ರಾಫಿಕ್ ನಡುವೆ ವ್ಯಕ್ತಿಯೊಬ್ಬ ಕಾರಿನ ಮೇಲೆ ಮದ್ಯಪಾನ ಮಾಡುತ್ತಿದ್ದ ಎಂದು ಹೇಳಲಾಗಿದೆ. ಕಾರು ಚಲಿಸುತ್ತಿರುವಾಗ ಅವರ ಇಬ್ಬರು ಸ್ನೇಹಿತರು ನಂತರ ತಮ್ಮ ದೇಹದ ಮೇಲ್ಭಾಗವನ್ನು ಕಾರಿನಿಂದ ಹೊರತೆಗೆದಿದ್ದಾರೆ, ವಾಹನದ ಮೇಲ್ಛಾವಣಿಯ ಮೇಲೆ ಕುಳಿತಿರುವ ವ್ಯಕ್ತಿಯು ಬಾಟಲಿಯನ್ನು ಹಿಡಿದಿರುವುದು ಕಂಡುಬರುತ್ತದೆ.

ಮತ್ತಷ್ಟು ಓದಿ: Viral Video: ಚಲಿಸುತ್ತಿದ್ದ ಮೆಟ್ರೋ ಬಾಗಿಲು ತೆರೆದು ಜಿಗಿದ ಯುವಕ, ಮುಂದೇನಾಯ್ತು ನೋಡಿ

ಅದೇ ಘಟನೆಯ ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ಪುಷ್-ಅಪ್ ಮಾಡುತ್ತಿರುವುದನ್ನು ತೋರಿಸುತ್ತದೆ. ನಂತರ, ಇತರ ಮೂವರು ಪುರುಷರು ಕಾರಿನ ಕಿಟಕಿಯ ಮೂಲಕ ತಲೆಯನ್ನು ಹೊರಗೆ ಹಾಕುತ್ತಿರುವುದು ಕಂಡುಬಂದಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ 6,500 ರೂ. ಮೊತ್ತದ ಚಲನ್ ಅನ್ನು ನೀಡಲಾಗಿದೆ.

ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಲೋಕೇಶ್ ಎಂಬಾತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಸ್ತೆಗಳಲ್ಲಿ ಈ ರೀತಿಯ ಕೃತ್ಯವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಸಂಚಾರ ವಿಭಾಗದ ಡಿಸಿಪಿ ವೀರೇಂದ್ರ ವಿಜ್ ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ