
Viral Video : ಗಾಯಕಿ, ಸಾಮಾಜಿಕ ಕಾರ್ಯಕರ್ತೆ, ಬ್ಯಾಂಕರ್ ಅಮೃತಾ ಫಡ್ನವೀಸ್ ಅವರ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಹೆಂಡತಿಯೂ ಆಗಿರುವ ಇವರು ‘ಮೂಡ್ ಬನಾಲಿಯಾ’ ವಿಡಿಯೋ ಅನ್ನು ಯೂ ಟ್ಯೂಬ್ನಲ್ಲಿ ನೋಡಬಹುದಾಗಿದೆ. ಇದೀಗ ಕಪ್ಪು ದಿರಿಸಿನಲ್ಲಿ ಅದೇ ಹಾಡಿಗೆ ಅತ್ಯಾಕರ್ಷವಾಗಿ ಹೆಜ್ಜೆ ಹಾಕಿದ್ಧಾರೆ. ಅಮೃತಾರ ವಿಡಿಯೋ ನೆಟ್ಟಿಗರಲ್ಲಿ ಸಂಚಲನ ಮೂಡಿಸಿದೆ.
ಈ ವಿಡಿಯೋ ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. 600 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. 2,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಿಜಕ್ಕೂ ಅದ್ಭುತವಾಗಿದೆ. ನಿಮ್ಮಿಂದ ಬಾಲಿವುಡ್ ಈ ಹೊಸ ಸ್ಟೆಪ್ಸ್ ಕಲಿಯಬೇಕಿದೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : ರಾಮೆನ್ ಥಣ್ಣಗಾಗಿದ್ದಾನೆ! ಚಮಚ ಸಮೇತ ಹಿಮಗಟ್ಟಿದ ನೂಡಲ್ಸ್ ವಿಡಿಯೊ ವೈರಲ್
ಮೀತ್ ಬ್ರೋಸ್ ಮತ್ತು ಅಮೃತಾ ಫಡ್ನವೀಸ್ ರೂಪಿಸಿದ ಈ ವಿಡಿಯೋ ಮೂಡ್ ಬನಾಲಿಯಾ ವಿಡಿಯೋ ಈಗಾಗಲೇ ಯೂಟ್ಯೂಬ್ನಲ್ಲಿ ಲಭ್ಯವಿದ್ದು ಈತನಕ 22 ಮಿಲಿಯನ್ ಜನರನ್ನು ತಲುಪಿದೆ. ಐಶ್ವರ್ಯಾ ತ್ರಿಪಾಠಿ ಇದನ್ನು ನಿರ್ಮಿಸಿದ್ದಾರೆ. ಈ ಹಾಡು ಈ ವರ್ಷದ ಅತೀ ಹೆಚ್ಚು ಕೇಳುಗರನ್ನು ಹೊಂದಿದ ಬ್ಯಾಚಲೊರೇಟ್ ಗೀತೆಯಾಗಿದೆ. ಅಂದಹಾಗೆ ಗಾಯಕಿ ಅಮೃತಾ ‘ದಿ ಮೋಸ್ಟ್ ಸ್ಟೈಲಿಶ್ ಚೇಂಜ್ ಮೇಕರ್ ಪ್ರಶಸ್ತಿ ಪಡೆದಿದ್ಧಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ