Surat : ಇಂಥದ್ದೆಲ್ಲ ನನಗೆ ಬೇಕೇಬೇಕು ಎಂದು ಬಾಲ್ಯದಲ್ಲಿ ಹಠ ಮಾಡಿ ಕೊಡಿಸಿಕೊಂಡ ಪಟ್ಟಿಯಲ್ಲಿ ಈ ಹುರಿದ ಕಡಲೆಕಾಳೂ (Roasted Chana) ಸೇರಿದೆ. ತಕ್ಕಮಟ್ಟಿಗೆ ಹಸಿವನ್ನು ರುಚಿಯನ್ನೂ ತಣಿಸುತ್ತಿದ್ದ ಈ ಹುರಿದ ಕಡಲೆಕಾಳನ್ನು ನಿಮ್ಮಲ್ಲಿ ಅನೇಕರು ಈಗಲೂ ತಿನ್ನುತ್ತೀರಿ. ಉಪ್ಪುಪ್ಪಾದ ಕಟಮ್ ಕುಟುಮ್ ಕಡಲೆಕಾಳನ್ನು ಹೇಗೆ ತಯಾರಿಸುತ್ತಾರೆ ಎನ್ನುವುದು ತಿಳಿದಿದೆಯೇ? ಈ ಹಿಂದೆ ಹಸಿರು ಬಟಾಣಿಯನ್ನು ತಯಾರಿಸುತ್ತಿದ್ದ ವಿಡಿಯೋ ನೋಡಿದ ನೆನಪು ಇನ್ನೂ ಹಸಿಯಾಗಿಯೇ ಇರಬೇಕಲ್ಲ/ ಹಾಗಿದ್ದರೆ ಇದೀಗ ಸೂರತ್ನ ಫ್ಯಾಕ್ಟರಿಯೊಂದಕ್ಕೆ ಹೋಗೋಣ. ನೆಟ್ಟಿಗರೆಲ್ಲ ಈ ವಿಡಿಯೋ ನೋಡಿ ಸ್ವಲ್ಪವೂ ಸ್ವಚ್ಛತೆಯನ್ನೇ ಕಾಪಾಡಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ಮಹಾರಾಷ್ಟ್ರ; 8 ವರ್ಷದ ಬಾಲಕನ ವಿರುದ್ಧ ಅತ್ಯಾಚಾರ, ಅಟ್ರಾಸಿಟಿ, ಪೋಕ್ಸೋ ಪ್ರಕರಣ ದಾಖಲು; ನೆಟ್ಟಿಗರ ಆಕ್ರೋಶ
ಈ ಹುರಿದ ಕಡಲೆ ತೂಕವನ್ನು ನಿರ್ವಹಿಸುವಲ್ಲಿ ಸಹಾಯಕಾರಿ ಎಂಬ ಕಾರಣಕ್ಕೆ ಮತ್ತು ಇನ್ನಿತರೇ ಆರೋಗ್ಯಕಾರಿ ಪ್ರಯೋಜನಗಳುಂಟು ಎಂಬ ಹಿನ್ನೆಲೆಯಲ್ಲಿ ದೊಡ್ಡವರೂ ಕೂಡ ಇವುಗಳನ್ನು ಬಾಯಾಡಿಸುತ್ತಿರುತ್ತಾರೆ. ಏಕೆಂದರೆ ಹುರಿದ ಕಡಲೆಕಾಳಿನಲ್ಲಿ ಉತ್ತಮ ಪ್ರಮಾಣದಲ್ಲಿ ಫೈಬರ್ ಮತ್ತು ಪ್ರೋಟೀನ್ ಅಂಶ ಇರುತ್ತದೆ. ಹೆಚ್ಚುಹೊತ್ತು ಹಸಿವನ್ನು ಇದು ತಡೆಗಟ್ಟುತ್ತದೆಯಾದ್ದರಿಂದ ಶರೀರದಲ್ಲಿ ಕ್ಯಾಲೊರಿಗಳ ಪ್ರಮಾಣವನ್ನೂ ಕಡಿಮೆ ಮಾಡುತ್ತದೆ. ಕಡಲೆಕಾಳಿನ ಮಹಿಮೆ ಇಷ್ಟೆಲ್ಲ ಇದ್ದರೂ ನೆಟ್ಟಿಗರು ಈ ವಿಡಿಯೋ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಎಂಥ ಅಶುಚಿಯಾದ ಕಾರ್ಖಾನೆ ಇದು. ಹುರಿದ ಕಡಲೆಯನ್ನು ಹೀಗೆ ಇಂಥ ಜಾಗದಲ್ಲಿ ತಯಾರಿಸುತ್ತಾರಾ? ಈ ಕಾರ್ಮಿಕರು ಸಮವಸ್ತ್ರ, ಕೈಗವಸುಗಳನ್ನು ಧರಿಸಿಲ್ಲ, ಯಂತ್ರೋಪಕರಣಗಳನ್ನು ನೋಡಲಾಗುತ್ತಿಲ್ಲ. ಇನ್ನು ಅದನ್ನು ತಯಾರಿಸುವ ಪರಿಕರಗಳೂ ಅಷ್ಟೇ ಕೊಳಕಾಗಿವೆ. ನಿಜಕ್ಕೂ ಈ ವಿಡಿಯೋ ನೋಡಿ ನಿರಾಶೆ ಉಂಟಾಗುತ್ತಿದೆ ಎಂದು ಅನೇಕರು ಹೇಳಿದ್ದಾರೆ. ಈ ಕಡಲೆಕಾಳಿಗೆ ಉಪ್ಪು ಬೆರೆಸುವ ಅಗತ್ಯವೇ ಇಲ್ಲ, ಅವರ ಬೆವರೇ ಚೆನ್ನಾಗಿ ಮಿಶ್ರಣಗೊಳ್ಳುತ್ತಿದೆ ಎಂದಿದ್ದಾರೆ ಒಬ್ಬರು. ಕಾರ್ಮಿಕರ ಕೈ ಮೈ ತುಂಬಾ ಕೊಳಕಾಗಿದೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?
ಈ ವಿಡಿಯೋ ಅನ್ನು ಈತನಕ 1,500 ಜನರು ಲೈಕ್ ಮಾಡಿದ್ದಾರೆ. ಇಷ್ಟು ದಿನ ಇಷ್ಟು ಕೊಳಕಾದ ಕಡಲೆಗಳನ್ನು ನಾನು ತಿಂದೆನೇ? ಎಂದಿದ್ದಾರೆ ಒಬ್ಬರು. ಶ್ರಮಿಕರ ಶ್ರಮವನ್ನು ಅವಮಾನಿಸಬೇಡಿ ಎಂದಿದ್ದಾರೆ ಇನ್ನೊಬ್ಬರು. ರಾಸಾಯನಿಕಗಳನ್ನು ಬಳಸಿದ ಖಾದ್ಯಗಳನ್ನು ತಿನ್ನುವುದಕ್ಕಿಂತ ಇದೇ ವಾಸಿ ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:20 pm, Fri, 18 August 23