Viral Video: ಆಟೋ ಡ್ರೈವರ್ ಡ್ಯಾನ್ಸ್ ನೋಡಿ ನೆಟ್ಟಿಗರು ಫುಲ್ ಖುಷ್

| Updated By: ganapathi bhat

Updated on: Apr 05, 2022 | 12:53 PM

ತನ್ನ ಖುಷಿಗೆ, ಮುಚ್ಚುಮರೆ ಇಲ್ಲದೆ, ಖುಷಿಯಾಗಿ ನೃತ್ಯ ಮಾಡುವ ಇವರು ಒಬ್ಬ ಆಟೋ ಡ್ರೈವರ್. ಬಾಬಾಜಿ ಕಾಂಬ್ಳೆ ಎಂದು ಇವರ ಹೆಸರಂತೆ. ಟ್ವಿಟರ್​ನಲ್ಲಿ ತನ್ನ ನೃತ್ಯಕ್ಕೆ ಭಾರೀ ಫೇಮಸ್ ಆಗಿದ್ದಾರೆ.

Viral Video: ಆಟೋ ಡ್ರೈವರ್ ಡ್ಯಾನ್ಸ್ ನೋಡಿ ನೆಟ್ಟಿಗರು ಫುಲ್ ಖುಷ್
ಆಟೋ ಡ್ರೈವರ್ ಡ್ಯಾನ್ಸ್ ವೈರಲ್
Follow us on

ಪುಣೆ: ಇಂತಿಥವರು ಇಷ್ಟಕ್ಕೇ ಸೀಮಿತ ಎಂದು ಹೇಳುವುದು ಅಸಾಧ್ಯ. ಕೆಲವರಲ್ಲಿ ಊಹೆಗೂ ಮೀರಿದ ಪ್ರತಿಭೆ ಇರುತ್ತದೆ. ಆದರೆ ಅವರ ವೃತ್ತಿಗೂ, ಬದುಕಿಗೂ ಅದು ಕಾರಣಾಂತರಗಳಿಂದ ಹೊಂದಾಣಿಕೆ ಆಗದೇ ಉಳಿದು ಹೋಗಿರುತ್ತದೆ. ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವೇದಿಕೆ ಸಿಕ್ಕಿರುವುದಿಲ್ಲ. ನಮ್ಮಲ್ಲಿ ಹಲವರು ಹಾಗೇ. ಇಷ್ಟ, ಆಸೆ ಎಲ್ಲಾ ಒಂದು. ಆದರೆ ಅನಿವಾರ್ಯವಾಗಿ ಮಾಡುವ ಕೆಲಸ ಮತ್ತೇನೋ ಆಗಿರುತ್ತದೆ. ಎಲ್ಲವನ್ನೂ ಮೀರಿ ತಮ್ಮ ನಿಜವಾದ ಆಸಕ್ತಿಯನ್ನು, ಪ್ರತಿಭೆಯನ್ನು ತೋರಿಸುವು ಅವಕಾಶ ಕೆಲವು ಜನರಿಗೆ ಸಿಗುತ್ತದೆ. ಮತ್ತೆ ಕೆಲವರು ಅಂಥ ಅವಕಾಶಗಳನ್ನು ತಾವೇ ಸೃಷ್ಟಿಮಾಡಿಕೊಳ್ಳುತ್ತಾರೆ. ಮುಜುಗರ ಇಲ್ಲದೆ ತಮಗೆ ಇಷ್ಟವಾದದ್ದನ್ನು ಪಡೆದುಕೊಳ್ಳುತ್ತಾರೆ.

ಸಾಮಾಜಿಕ ಜಾಲತಾಣ ಬಂದ ಮೇಲಂತೂ ಜನರಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ಇಲ್ಲ ಎಂದು ಆಗಲಿಲ್ಲ. ಎಲ್ಲರಿಗೂ ಸಾಮಾಜಿಕ ಜಾಲತಾಣವೆಂಬ ವೇದಿಕೆ ಇದ್ದೇ ಇದೆ. ಜಾಲತಾಣಗಳ ಮೂಲಕವೇ ಖ್ಯಾತಿ ಪಡೆದ ನೂರಾರು ಜನರ ಪಟ್ಟಿಯೂ ನಮ್ಮ ಮುಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಹಾಡು ಹಾಡಿ ಗಾಯಕರಾದವರು, ನೃತ್ಯ ಮಾಡಿ ಹೆಸರು ಗಳಿಸಿದವರು, ಕರಕುಶಲ ಕಲೆ, ಚಿತ್ರಕಲೆ, ಆಟೋಟ, ಅಡುಗೆ, ಛಾಯಾಗ್ರಹಣ.. ಹೀಗೇ ಒಂದೆರಡು ವಿಭಾಗ ಎಂದಿಲ್ಲ. ಬಹುತೇಕ ಎಲ್ಲಾ ವಿಭಾಗದ ಪ್ರತಿಭೆಗೂ ಸಾಮಾಜಿಕ ಜಾಲತಾಣ ಪ್ರೋತ್ಸಾಹವನ್ನೇ ನೀಡಿದೆ. ಅಂಥ ಒಂದು ನಿದರ್ಶನ ಇಲ್ಲಿದೆ.

ಬಗೆಬಗೆಯ ಹವ್ಯಾಸ ಇಟ್ಟುಕೊಂಡ ರಿಕ್ಷಾ ಚಾಲಕರನ್ನು ನೀವು ಕಂಡಿರಬಹುದು. ಹಾಗೇ ತನ್ನ ಖುಷಿಗೆ, ಮುಚ್ಚುಮರೆ ಇಲ್ಲದೆ, ಖುಷಿಯಾಗಿ ನೃತ್ಯ ಮಾಡುವ ಇವರು ಒಬ್ಬ ಆಟೋ ಡ್ರೈವರ್. ಬಾಬಾಜಿ ಕಾಂಬ್ಳೆ ಎಂದು ಇವರ ಹೆಸರಂತೆ. ಟ್ವಿಟರ್​ನಲ್ಲಿ ತನ್ನ ನೃತ್ಯಕ್ಕೆ ಭಾರೀ ಫೇಮಸ್ ಆಗಿದ್ದಾರೆ. ಪುಣೆ, ಬಾರಮತಿ ಎಂಬ ಪಟ್ಟಣದ ಇವರ ನೃತ್ಯದ ವಿಡಿಯೋವನ್ನು ಬಹಳಷ್ಟು ಜನರು ಹಂಚಿಕೊಂಡಿದ್ದಾರೆ. ಅವರನ್ನು ಫೇಮಸ್ ಮಾಡೋಣ ಎಂದು ಕ್ಯಾಪ್ಶನ್ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

ರಿಕ್ಷಾ ಚಾಲಕ, ತನ್ನ ಆಟೋಗೆ ಗ್ಯಾಸ್ ತುಂಬಿಸಿಕೊಳ್ಳಲು ಹೋದಲ್ಲಿ ಹೀಗೆ ನೃತ್ಯ ಮಾಡಿದ್ದಾನಂತೆ. ಈತನ ಖುಷಿಗೆ ನೋಡುಗರ ಮನಸ್ಸೂ ಅರಳದೇ ಇರದು. ಆಟೋ ಚಾಲಕನ ಪ್ರತಿಭೆಗೆ, ಖುಷಿ ಖುಷಿಯ ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ: Viral Video: ಹೆಬ್ಬಾವನ್ನೇ‌ ನುಂಗಿದ ಬೃಹತ್ ಕಾಳಿಂಗ ಸರ್ಪ! ಬೆಳ್ತಂಗಡಿ ತಾಲೂಕಿನ ಸೋಮಂತಡ್ಕದಲ್ಲಿ ಘಟನೆ

ಇದನ್ನೂ ಓದಿ: Viral Video: ಹಿಮಪಾತವನ್ನು ಕಂಡು ಬೆರಗಾದ ಬೆಕ್ಕುಗಳು; ಪುಟಾಣಿ ಮಾರ್ಜಾಲಗಳ ಮುಗ್ಧತೆಗೆ ಮಾರುಹೋದ ಜನರು

Published On - 3:49 pm, Sun, 4 April 21