ಹಾವು ಮತ್ತು ಮುಂಗುಸಿ ಕಾದಾಟದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಹಾವು ಮುಂಗುಸಿಯ ಕಾದಾಟದಲ್ಲಿ ಪ್ರತೀ ಬಾರಿ ಮುಂಗುಸಿಗೆ ಜಯ ಅನ್ನೋ ಮಾತಿಗೆ. ಆದರೆ ಈ ವಿಡಿಯೋದಲ್ಲಿ ಸಾಕಷ್ಟು ಹೊತ್ತಿನ ರಕ್ತಸಿಕ್ತ ಕಾದಾಟದ ನಂತರ ಹಾವು ಮುಂಗುಸಿಯನ್ನು ಸಾಯಿಸಿ ಬಿಟ್ಟಿದೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೊತೆಗೆ ಸಾಕಷ್ಟು ಕಾಮೆಂಟ್ ಹಾಗೂ ಶೇರ್ ಪಡೆದುಕೊಂಡಿದೆ.
ಹಾವಿನ ಹೆಸರು ಕೇಳಿದೊಡನೆ ಹೆದರುವವರೇ ಹೆಚ್ಚು. ಯಾಕೆಂದರೆ ಮನುಷ್ಯನ ಪ್ರಾಣವನ್ನೇ ತೆಗೆಯುವ ಶಕ್ತಿ ಇದಕ್ಕಿದೆ. ನೀವು ಈಗಾಗಲೇ ಹಾವು ಮುಂಗುಸಿ ಕಾದಾಟದ ಸಾಕಷ್ಟು ವಿಡಿಯೋ ಅಥವಾ ಪ್ರತ್ಯಕ್ಷವಾಗಿಯೂ ನೋಡಿರುತ್ತೀರಿ. ಈ ಕಾದಾಟದಲ್ಲಿ ಮುಂಗುಸಿ ಗೆಲ್ಲುವುದಂತೂ ಈಗಾಗಲೇ ತಿಳಿದಿರುವ ವಿಷಯ. ಮುಂಗುಸಿಯು ಕಾದಾಡುವುದಲ್ಲದೆ ಹಾವನ್ನು ಸೋಲಿಸುವ ಸಾಮರ್ಥ್ಯವುಳ್ಳದ್ದು ಎಂಬ ಮಾತಿದೆ. ಇದು ಸತ್ಯವೂ ಕೂಡ ಹೌದು. ಆದರೆ ಇಲ್ಲೊಂದು ವಿಡಿಯೋದಲ್ಲಿ ಕೆಲ ಹೊತ್ತಿನ ಕಾದಾಟದ ನಂತರ ಹಾವೊಂದು ಮುಂಗುಸಿಯನ್ನು ಕೊಂದು ಹಾಕಿದೆ. ಇಲ್ಲಿದೆ ನೋಡಿ ವಿಡಿಯೋ.
ಇದನ್ನೂ ಓದಿ: ಆಸ್ಕರ್ ಮುಡಿಗೇರಿಸಿಕೊಂಡ ರಘುವನ್ನು ನೋಡಲು ತೆಪ್ಪಕಾಡು ಆನೆ ಶಿಬಿರದಲ್ಲಿ ಜನಸಾಗರ
ವಿಡಿಯೋದಲ್ಲಿ ಮುಂಗುಸಿಯು ನಾಗರಹಾವಿನ ಕುತ್ತಿಗೆಯನ್ನು ಹಿಡಿದು ಬಲವಾಗಿ ಕಚ್ಚುತ್ತದೆ. ನಾಗರ ಹಾವು ಮತ್ತೆ ಮುಂಗುಸಿಯನ್ನು ಕಚ್ಚುವ ಮೂಲಕ ದಾಳಿ ಮಾಡುತ್ತದೆ. ಇವೆರಡು ರಕ್ತಸಿಕ್ತ ಕಾದಾಡಿ, ಸ್ವಲ್ಪ ಸಮಯದ ನಂತರ, ಹಾವು ಮುಂಗುಸಿಯನ್ನು ಗಾಯಗೊಳಿಸುತ್ತದೆ. ಕೊನೆಯಲ್ಲಿ ಮುಂಗುಸಿಯನ್ನು ಹಾವು ಕೊಂದು ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:00 pm, Wed, 15 March 23