Viral Video: ಕೆಟ್ಟ ಅಭ್ಯಾಸಗಳಿಗೆ ಅಪ್ಪನ ಹಣವೆಲ್ಲಾ ಖರ್ಚು ಮಾಡಿ, ತಂದೆಯನ್ನೇ ನಿರ್ದಯಿಯಾಗಿ ಥಳಿಸಿದ ಮಗಳು

ಮಗಳೊಬ್ಬಳು ತನಗೆ ಜನ್ಮಕೊಟ್ಟ ತಂದೆಗೆ ಮನಬಂದಂತೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಿಲ್ಲ, ಆಕೆ ತನ್ನ ಕೆಟ್ಟ ಚಟಗಳಿಗಾಗಿ ಅಮ್ಮನ 18 ಲಕ್ಷ ರೂ. ಹಣವನ್ನು ನೀರಿನನಲ್ಲಿ ಹೋಮ ಮಾಡಿದಂತೆ ಖರ್ಚು ಮಾಡಿದ್ದಳು, ಅದನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಆಕೆ ಅಪ್ಪನ ಮೇಲೆಯೇ ಹಲ್ಲೆ ನಡೆಸಿದ್ದಾಳೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.

Viral Video: ಕೆಟ್ಟ ಅಭ್ಯಾಸಗಳಿಗೆ ಅಪ್ಪನ ಹಣವೆಲ್ಲಾ ಖರ್ಚು ಮಾಡಿ, ತಂದೆಯನ್ನೇ ನಿರ್ದಯಿಯಾಗಿ ಥಳಿಸಿದ ಮಗಳು
ಹಲ್ಲೆ ನಡೆಸಿದ ಮಗಳು

Updated on: Jan 08, 2026 | 9:48 AM

ತನ್ನೆಲ್ಲಾ ಕಷ್ಟ-ಸುಖಗಳೆರಡನ್ನೂ ಬದಿಗಿಟ್ಟು, ಮಗಳೇ ಸರ್ವಸ್ವವೆಂದು ಬದುಕಿದ ತಂದೆ(Father)ಗೆ ಇದೆಂಥಾ ಪರಿಸ್ಥಿತಿ ತಂದಿಟ್ಟಿದ್ದಾಳೆ ಈ ಪ್ರೀತಿಯ ಮಗಳು. ಸಂಸಾರದಲ್ಲಿ ಕೋಪ-ತಾಪ, ಪ್ರೀತಿ, ಜಗಳ ಎಲ್ಲವೂ ಸಾಮಾನ್ಯ ಆದರೆ ತಾನು ಮಾಡಿದ ತಪ್ಪಿಗೆ ತಂದೆಗೆ ಮನಸೋ ಇಚ್ಛೆ ಥಳಿಸುವುದೆಂದರೆ ಸಾಮಾನ್ಯನಾ, ಇಷ್ಟು ವರ್ಷ ಪ್ರೀತಿಯಿಂದ ಸಾಕಿದ ಮಗಳ ವರ್ತನೆ ನೋಡಿ ತಂದೆ ಹತಾಶರಾಗಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ.

ಆ ವಿಡಿಯೋದಲ್ಲಿ ಮಗಳೊಬ್ಬಳು ತಂದೆಯೊಂದಿಗೆ ಜಗಳವಾಡುತ್ತಿದ್ದಾಳೆ, ಅಷ್ಟೇ ಅಲ್ಲದೆ ಮಗಳು ಆವಾಚ್ಯ ಶಬ್ದಗಳಿಂದ ತಂದೆಯನ್ನು ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿರುವ ಮಾಡುತ್ತಿರುವ ಆಘಾತಕಾರಿ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

ತಂದೆ ಕಷ್ಟಪಟ್ಟು ದುಡಿದ 18 ಲಕ್ಷ ಹಣವನ್ನು ತನ್ನ ದರಭ್ಯಾಸಗಳಿಗೆ ಖರ್ಚು ಮಾಡಿದ್ದೂ ಅಲ್ಲದೆ, ತಂದೆಯನ್ನೇ ನಪುಂಸಕನೆಂದು ನಿಂದಿಸಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಂದೆ ಹತಾಶರಾಗಿ ಕೂತಲ್ಲೇ ಕುಳಿತಿರುವುದು ಕಣ್ಣಂಚಲ್ಲಿ ನೀರು ತರಿಸದೇ ಇರದು.

ಮತ್ತಷ್ಟು ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ: ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ

ಆಕೆಯ ನಿರ್ದಯ ಮಾತು, ಆಕ್ರೋಶ, ಕೋಪ, ಹಲ್ಲೆ ತಂದೆಯನ್ನು ಮಾನಸಿಕವಾಗಿ ಕುಗ್ಗಿಸಿದೆ.ಹಣದ ವಿವಾದದಿಂದ ಆರಂಭವಾದ ಜಗಳ ಅವಮಾನವಾಗಿ ಬದಲಾಯಿತು. ಈ ವಿಡಿಯೋ ಲಕ್ಷ ವೀಕ್ಷಣೆಗಳನ್ನು ಪಡೆದಿದೆ. ಹಲವರು ಈ ವಿಡಿಯೋ ಕುರಿತು ಕಮೆಂಟ್ ಮಾಡಿದ್ದಾರೆ.

ವಿಡಿಯೋ

ಮಹಿಳಾ ಸಬಲೀಕರಣ ಎಂದರೆ ಇದೇನಾ ಎಂದು ಒಬ್ಬರು ಮಾತನಾಡಿದರೆ, ಇನ್ನೊಬ್ಬರು ಇದನ್ನು ನೋಡಲಾಗುತ್ತಿಲ್ಲ ಎಂದಿದ್ದಾರೆ, ಮತ್ತೊಬ್ಬರು ಭವಿಷ್ಯದಲ್ಲಿ ಆಕೆಯ ಗಂಡನ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.ಇನ್ನೊಬ್ಬರು ಆಕೆ ಮದುವೆಯಾಗುವುದಕ್ಕಿಂತ ಒಂಟಿಯಾಗಿರುವುದೇ ಒಳಿತು ಎಂದಿದ್ದಾರೆ. ಆಕೆ ಕುಟುಂಬದವರ ಜತೆ ಬದುಕಲು ಅರ್ಹಳಲ್ಲ ಎಂದು ಕಮೆಂಟ್ ಮಾಡಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ