ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!
ರಾಜಸ್ಥಾನದಲ್ಲಿ ವಿಚಿತ್ರವಾದ ಘಟನೆಯೊಂದು ಬೆಳಕಿಗೆ ಬಂದಿದೆ. ನೆಂಟರ ಮನೆಗೆ ಹೋಗಿದ್ದ ದಂಪತಿ ಮನೆಗೆ ಬಂದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಅಡುಗೆಮನೆಯ ಎಕ್ಸಾಸ್ಟ್ ಫ್ಯಾನ್‌ನ ರಂಧ್ರದಲ್ಲಿ ಕಳ್ಳ ನೇತಾಡುತ್ತಿರುವುದು ಕಂಡುಬಂದಿದೆ. ಒಬ್ಬ ಕಳ್ಳ ಎಕ್ಸಾಸ್ಟ್ ಫ್ಯಾನ್ ರಂಧ್ರದ ಮೂಲಕ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಆದರೆ ಅದರಿಂದ ಹೊರಬರಲಾಗದೆ ಆತ ಗೋಡೆಯಲ್ಲೇ ಸಿಕ್ಕಿಹಾಕಿಕೊಂಡ. ಅಷ್ಟರಲ್ಲಿ ಮನೆಗೆ ಬಂದ ದಂಪತಿಗೆ ಗೋಡೆಯಲ್ಲಿ ಕಳ್ಳನ ಅರ್ಧ ದೇಹ ಕಂಡು ಶಾಕ್ ಆಯಿತು. ಆಮೇಲೇನಾಯ್ತು? ಎಂಬುದಕ್ಕೆ ಈ ವಿಡಿಯೋ ನೋಡಿ.
ಜೈಪುರ, ಜನವರಿ 7: ರಾಜಸ್ಥಾನದ (Rajasthan) ಕೋಟಾದಲ್ಲಿ ದಂಪತಿಗಳು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಅವರು ಅಲ್ಲಿಂದ ಹಿಂದಿರುಗುವಾಗ ಒಂದು ವಿಚಿತ್ರ ಸಂಭವಿಸಿತ್ತು. ಒಬ್ಬ ಕಳ್ಳ ಎಕ್ಸಾಸ್ಟ್ ಫ್ಯಾನ್ ರಂಧ್ರದ ಮೂಲಕ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಆದರೆ ಅದರಿಂದ ಹೊರಬರಲಾಗದೆ ಆತ ಗೋಡೆಯಲ್ಲೇ ಸಿಕ್ಕಿಹಾಕಿಕೊಂಡ. ಅಷ್ಟರಲ್ಲಿ ಮನೆಗೆ ಬಂದ ದಂಪತಿಗೆ ಗೋಡೆಯಲ್ಲಿ ಕಳ್ಳನ ಅರ್ಧ ದೇಹ ಕಂಡು ಶಾಕ್ ಆಯಿತು. ಕೊನೆಗೆ ಅವರೇ ಆ ಕಳ್ಳನನ್ನು ಎಳೆದು ಕೆಳಕ್ಕೆ ತಂದು ಕಾಪಾಡಿದರು. ಇದರಿಂದ ಕಳ್ಳ ತಾನು ಬೀಸಿದ ಬಲೆಗೆ ತಾನೇ ಬಿದ್ದಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

