Viral Video: ಆಟೋ-ಕಾರು ಡಿಕ್ಕಿ; ಕೆರಳಿದ ಮಹಿಳೆ ಬಡಪಾಯಿ ಆಟೋ ಚಾಲಕನಿಗೆ ಮಾಡಿದ್ದೇನು? ನೀವೇ ನೋಡಿ

ಮಾತಿನಲ್ಲೇ ಬಗೆಹರಿಸಿಕೊಳ್ಳಬಹುದಾಗಿದ್ದ ಘಟನೆಯನ್ನು ಏಟಿನ ಮೂಲಕ ಪರಿಹರಿಸಲು ಹೋದ ಮಹಿಳೆಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ. ಘಟನೆಯ ವಿಡಿಯೋ ಇಲ್ಲಿದೆ ನೋಡಿ...

Viral Video: ಆಟೋ-ಕಾರು ಡಿಕ್ಕಿ; ಕೆರಳಿದ ಮಹಿಳೆ ಬಡಪಾಯಿ ಆಟೋ ಚಾಲಕನಿಗೆ ಮಾಡಿದ್ದೇನು? ನೀವೇ ನೋಡಿ
ಆಟೋ ಚಾಲಕನಿಗೆ ಥಳಿಸಿದ ಮಹಿಳೆ
Edited By:

Updated on: Aug 15, 2022 | 4:14 PM

ಆಟೋ ಚಾಲಕನಿಗೆ ಮಹಿಳೆಯೊಬ್ಬಳು ಸಾರ್ವಜನಿಕವಾಗಿ ಅಮಾನುಷವಾಗಿ ಎಳೆದಾಡಿದ್ದಲ್ಲದೆ ಹಲವು ಬಾರಿ ಥಳಿಸಿದ್ದಾಳೆ. ಮಹಿಳೆಯ ಕ್ರೌರ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆ ಉತ್ತರಪ್ರದೇಶದ ನೋಯ್ಡಾದ 2ನೇ ಹಂತದ ಪ್ರದೇಶದ ಸೆಕ್ಟರ್ 110 ರ ಮಾರುಕಟ್ಟೆಯಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಈ ಪ್ರಕಾರ, ಆಗ್ರಾ ಮೂಲದ ಕಿರಣ್ ಸಿಂಗ್ ಎಂಬ ಮಹಿಳೆ ಇದ್ದ ಕಾರು ಮತ್ತು ಇ-ಆಟೋ ರಿಕ್ಷಾದ ನಡುವೆ ಸಣ್ಣ ಅಪಘಾತ ನಡೆದಿದೆ. ಇದರಿಂದ ಕೆರಳಿದ ಮಹಿಳೆ ಕಿರಣ್ ಸಿಂಗ್, ಆಟೋ ಚಾಲಕನನ್ನು ಪ್ರಶ್ನಿಸಿ ಅಟ್ಟಹಾಸ ಮೆರೆದಿದ್ದಾಳೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಕಿರಣ್ ಸಿಂಗ್ ಮಹಿಳೆ, ಸಾರ್ವಜನಿಕವಾಗಿ ಆಟೋ ಚಾಲಕನ ಕಾಲರ್ ಪಟ್ಟಿ ಹಿಡಿದು ಎಳೆದಾಡಿದ್ದಲ್ಲದೆ ಅವಾಚ್ಯವಾಗಿ ನಿಂದಿಸುತ್ತಾ ಸುಮಾರು ಒಂದೂವರೆ ನಿಮಿಷಗಳಲ್ಲಿ 17 ಬಾರಿ ಮನಬಂದಂತೆ ಥಳಿಸಿದ್ದಾಳೆ. ಆಟೋ ಚಾಲಕ ಎಷ್ಟೇ ಕೈ ಮುಗಿದು ಬೇಡಿಕೊಂಡರೂ ತಣ್ಣಗಾಗದ ಮಹಿಳೆ, ಈ ಕಾರು ನಿಮ್ಮ ಅಪ್ಪಂದಾ ಎಂದು ಪ್ರಶ್ನಿಸಿ ಮತ್ತೆಮತ್ತೆ ಥಳಿಸುವುದನ್ನು ಕಾಣಬಹುದು.

ಥಳಿಸಿದ ನಂತರವೂ ಸುಮ್ಮನಾಗದ ಮಹಿಳೆ, ಆಟೋ ಚಾಲಕನ ಕೊರಳಲ್ಲಿದ್ದ ಬ್ಲೂಟೂತ್ ಅನ್ನು ಬಲವಂತವಾಗಿ ತೆಗೆದಿದ್ದು, ಜೇಬಿನಲ್ಲಿದ್ದ ಹಣವನ್ನು ಕಿತ್ತುಕೊಳ್ಳುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು. ನಂತರ ಆತನ ಅಂಗಿಯನ್ನು ಹಿಡಿದು ತನ್ನ ವಾಹನಕ್ಕೆ ಎಳೆದೊಯ್ದು ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ. ಸುಮಾರು 90 ಸೆಕೆಂಡುಗಳ ಅವಧಿಯಲ್ಲಿ, ಸಿಂಗ್ ಇ-ರಿಕ್ಷಾ ಚಾಲಕನಿಗೆ ಸುಮಾರು 17 ಸ್ಲ್ಯಾಪ್‌ಗಳನ್ನು ವಿತರಿಸಿದರು. ವಾಗ್ವಾದದ ಸಂದರ್ಭದಲ್ಲಿ, ಮಹಿಳೆ ಇ-ರಿಕ್ಷಾ ಆಪರೇಟರ್‌ನ ಶರ್ಟ್ ಅನ್ನು ಕಿತ್ತುಹಾಕುವ ಪ್ರಯತ್ನವನ್ನೂ ಮಾಡಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. Barkha Trehan ಎಂಬ ಟ್ವಿಟರ್ ಖಾತೆಯಲ್ಲಿ ಎರಡು ದಿನಗಳ ಹಿಂದೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಪಡೆದುಕೊಂಡಿದೆ. ಮಹಿಳೆಯಿಂದ ಥಳಿತಕ್ಕೊಳಗಾದ ಸಂತ್ರಸ್ತ ವ್ಯಕ್ತಿಯು ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ನೋಯ್ಡಾ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಅಲ್ಲದೆ ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ಟ್ರೆಂಡಿಂಗ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 4:14 pm, Mon, 15 August 22