ಮದುವೆ ಮಂಟಪದ ಮುಂಭಾಗದಲ್ಲಿ ಹುಡುಗಿಯರ ಗುಂಪೊಂದು ತಾಳಕ್ಕೆ ತಕ್ಕ ಹಾಗೆ ಕುಣಿಯುತ್ತಿದ್ದರೆ, ಇದೇ ಹಾಡಿಗೆ ಹಿಂಭಾಗದಲ್ಲಿ ನಿಂತಿದ್ದ ಯುವಕರ ಗುಂಪೊಂದು ಡಾನ್ಸ್ ಮಾಡುವ ವೀಡಿಯೋ ವೈರಲ್ ಆಗುವುದರ ಜೊತೆಗೆ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಮದುವೆ ಅಂದ್ರೆ ಅದೊಂದು ಸಂಭ್ರಮ. ಹಾಡು, ಕುಣಿತ, ಸಂಗೀತ ಎಲ್ಲಾ ರೀತಿಯ ಮನರಂಜನೆಗಳು ಮದುವೆ ಮನೆಯಲ್ಲಿ ಇದ್ದೇ ಇರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರ ವರೆಗೆ ಮದುವೆಯ ಸಂಭ್ರಮದಲ್ಲಿ ತೇಳಾಡಿತ್ತಿರುತ್ತಾರೆ. ಮದುವೆ ಮಂಟಪಗಳಲ್ಲೂ ಗ್ರೂಪ್ ಡ್ಯಾನ್ಸ್ ಮಾಡುವ ಟ್ರೆಂಡ್ ಕೂಡಾ ಇದೆ.
ಮದುಮಗನ ಅಥವಾ ಮದುಮಗಳ ಕಜಿನ್ಸ್, ಸ್ನೇಹಿತರು ಜೊತೆಗೂಡಿ ನೃತ್ಯ ಮಾಡುತ್ತಾರೆ, ಹಾಡುತ್ತಾ ಮದುವೆ ದಿನ ಮೋಜು ಮಸ್ತಿಯಿಂದ ಕಳೆಯುತ್ತಾರೆ. ಇನ್ನೂ ಕೆಲವು ತರ್ಲೆ ಯುವಕರ ಗುಂಪು ಹಾಲ್‌ನಲ್ಲಿ ಹಿಂಭಾಗದಲ್ಲಿ ನಿಂತುಕೊಂಡು ಕೇಕೆ ಹಾಕುತ್ತಾ ಕುಣಿಯುತ್ತಿರುತ್ತಾರೆ. ಮದುವೆ ಮಾತ್ರವಲ್ಲ ಅದು ಕಾಲೇಜ್ ಕಾರ್ಯಕ್ರಮವಾಗಿರಲಿ ಅಥವಾ ಯಾವುದೇ ಸಭೆ ಸಮಾರಂಭವಾಗಿರಲಿ ಸ್ಟೇಜ್ ಮುಂದೆ ಯಾರಾದರೂ ಹಾಡುತ್ತಿದ್ದರೆ ಅಥವಾ ನೃತ್ಯ ಮಾಡುತ್ತಿದ್ದರೆ, ಹಿಂಭಾಗದಿಂದ ಯುವಕರ ಗುಂಪು ತಮ್ಮದೇ ಶೈಲಿಯಲ್ಲಿ ಹಾಡುತ್ತಲೋ ಅಥವಾ ಕುಣಿಯುತ್ತಲೋ ತಮಾಷೆ ಮಾಡುತ್ತಿರುತ್ತಾರೆ.
ಮದುವೆ ಹಾಲ್‌ನಲ್ಲಿ ಯುವಕರ ಗುಂಪೊಂದು ಡಾನ್ಸ್ ಮಾಡುವ ವೀಡಿಯೊವೊಂದು ವೈರಲ್ ಆಗಿದೆ. ಇನ್ಟಾಗ್ರಾಮ್‌ನಲ್ಲಿ ದಿ ಬಾಯ್ಸ್ ಎಂದು ಶೀರ್ಷಿಕೆಯಡಿಯಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಮದುವೆ ಹಾಲ್‌ನಲ್ಲಿ ಮುಂದುಗಡೆ ಯುವತಿಯರ ಗುಂಪೊಂದು ಮಾಲ ಟಂಟಂ ಮಂಗಲ ಟಂಟಂ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಅಲ್ಲಿದ್ದ ಸಭಿಕರೆಲ್ಲ ಆ ಯುವತಿಯರ ನೃತ್ಯ ನೋಡುವುದರಲ್ಲಿ ಮಗ್ನರಾಗಿರುತ್ತಾರೆ, ಆ ಸಂದರ್ಭದಲ್ಲಿ ಅಲ್ಲೇ ಹಾಲ್ನ ಹಿಂಭಾಗ ನಿಂತಿದ್ದ ಯುವಕರ ಗುಂಪೊಂದು ಅದೇ ಹಾಡಿಗೆ ಸಖತ್ ಸ್ಟೆಪ್ ಹಾಕುತ್ತಾರೆ. ಈ ಯುವಕರ ಡಾನ್ಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಇದನ್ನೂ ಓದಿ:Viral Video: ಈ ಶ್ವಾನದ ದೇಶಪ್ರೇಮ ನೋಡಿ, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ
ವೈರಲ್ ಆಗಿರುವ ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಜೊತೆಗೆ 12 ಮಿಲಿಯನ್‌ಗಳಿಗಿಂತಲು ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ 1.6 ಮಿಲಿಯನ್ ಲೈಕ್ಸ್ ಮತ್ತು 2,000ಕಮೆಂಟ್‌ಗಳು ಕೂಡಾ ಈ ವೀಡಿಯೋಗೆ ಹರಿದುಬಂದಿದೆ. ಒಬ್ಬ ಬಳಕೆದಾದರು ಹುಡುಗರಿಗೆ ನ್ಯಾಯ ಒದಗಿಸಿದ ಮೊದಲ ಕ್ಯಾಮೆರಮ್ಯಾನ್ ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ವೀಡಿಯೊ ನನಗೆ ಖುಷಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.
Published On - 3:46 pm, Fri, 3 March 23