Viral Video: ಈ ಶ್ವಾನದ ದೇಶಪ್ರೇಮ ನೋಡಿ, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ

ಪ್ರಾಣಿಗಳು ಭಾವನೆಗೆ ಬೆಲೆ ಕೊಡುತ್ತದೆ ನಿಜ. ಆದರೆ ಅವುಗಳಿಗೆ ದೇಶ ಪ್ರೇಮದ ಬಗ್ಗೆ ಅರಿವಿರಬಹುದುದಾ ಎಂಬ ಪ್ರಶ್ನೆ ಮೂಡಬಹುದು. ಈ ವೈರಲ್ ಆಗಿರುವ ವಿಡಿಯೊವನ್ನು ನೋಡಿದರೆ ಪ್ರಾಣಿಗಳ ದೇಶ ಪ್ರೇಮದ ಬಗ್ಗೆ ನೀವು ಕೂಡಾ ಹೆಮ್ಮೆ ಪಡುತ್ತೀರಾ.

Viral Video: ಈ ಶ್ವಾನದ ದೇಶಪ್ರೇಮ ನೋಡಿ, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ
ಶ್ವಾನ ವೈರಲ್ ವಿಡಿಯೊ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 02, 2023 | 6:07 PM

ಶ್ವಾನವೊಂದು ಭಾರತದ ಮ್ಯಾಪ್ ಬಳಿ ಬಂದು ತನ್ನೆರಡು ಕಾಲುಗಳನ್ನು ಎತ್ತಿ ತಾಯಿ ಭಾರತಿಗೆ ನಮಿಸುವ ವಿಡಿಯೊ ವೈರಲ್ ಆಗಿದೆ. ನಮ್ಮ ದೇಶ ಎಂದಾಕ್ಷಣ ನಮಗೆಲ್ಲರಿಗೂ ಅದೇನೋ ಹೆಮ್ಮೆ. ಗರ್ವದಿಂದ ನಾವು ಭಾರತೀಯರು ಎಂದು ಹೇಳಿಕೊಳ್ಳುತ್ತೇವೆ. ಈ ದೇಶಕ್ಕೆ ಏನಾದರೂ ಸಂಕಟದ ಕ್ಷಣ ಬಂದಾಗ ಇದು ನಮ್ಮ ಸ್ವಂತ ನೋವೆನ್ನುವಷ್ಟು ನೋವು ಅನುಭವಿಸುತ್ತೇವೆ. ಅದೇ ರೀತಿ ದೇಶಕ್ಕೆ ಹೆಮ್ಮೆ ತರುವಂತಹ ಯಾವುದೇ ಶುಭ ಗಳಿಗೆಗಳು ಬಂದಾಗ, ನಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಷ್ಟೊಂದು ಖುಷಿ ಪಡುತ್ತೇವೆ. ದೇಶದ ಬಗ್ಗೆ ಒಂದು ಸಣ್ಣ ವಿಷಯವನ್ನು ಕೇಳಿದರೂ ನಮ್ಮ ಮನಸ್ಸಿನೊಳಗೆ ಏನೋ ರೋಮಾಂಚನಕಾರಿ ಅನುಭವವಾದಂತೆ ಆಗುತ್ತದೆ. ತಾಯಿ, ತಾಯ್ನಡು ಅಂದರೆ ಎಲ್ಲರಿಗೂ ಪ್ರೀತಿ, ಗೌರವ ತುಸು ಹೆಚ್ಚೇ ಇರುತ್ತದೆ. ನಾವು ಅಂದುಕೊಳ್ಳುತ್ತೇವೆ, ಮನುಷ್ಯನಾದವನಿಗೆ ಮಾತ್ರ ಭಾವನೆಗಳಿರುತ್ತದೆ, ಅವನಿಗೆ ಅತೀವ ದೇಶಪ್ರೇಮವಿರುತ್ತದೆ ಎಂದು. ಆದರೆ ನಮ್ಮ ಈ ಊಹೆ ತಪ್ಪು. ಮನುಷ್ಯನಿಗಿಂತ ಪ್ರಾಣಿಗಳೇ ಭಾವನೆಗಳಿಗೆ ಸ್ಪಂದಿಸುತ್ತವೆ ಅದೇ ರೀತಿ ನಿಷ್ಕಲ್ಮಷ ಪ್ರೀತಿಯನ್ನು ತೋರುತ್ತದೆ.

ಈ ಪ್ರಾಣಿಗಳು ಭಾವನೆಗೆ ಬೆಲೆ ಕೊಡುತ್ತದೆ ನಿಜ. ಆದರೆ ಅವುಗಳಿಗೆ ದೇಶ ಪ್ರೇಮದ ಬಗ್ಗೆ ಅರಿವಿರಬಹುದುದಾ ಎಂಬ ಪ್ರಶ್ನೆ ಮೂಡಬಹುದು. ಈ ವೈರಲ್ ಆಗಿರುವ ವಿಡಿಯೊವನ್ನು ನೋಡಿದರೆ ಪ್ರಾಣಿಗಳ ದೇಶ ಪ್ರೇಮದ ಬಗ್ಗೆ ನೀವು ಕೂಡಾ ಹೆಮ್ಮೆ ಪಡುತ್ತೀರಾ. ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಶ್ವಾನದ ದೇಶಪ್ರೆಮದ ವಿಡಿಯೊದಲ್ಲಿ, ಯಾವುದೋ ಒಂದು ಕಾರ್ಯಕ್ರಮವೊಂದರಲ್ಲಿ ಒಂದಷ್ಟು ಸೇನಾ ಶ್ವಾನಗಳಿದ್ದವು. ಹಾಗೇನೆ ಅಲ್ಲಿ ಭಾರತ, ಜರ್ಮನಿ, ಪಾಕಿಸ್ತಾನ ಹೀಗೆ ಬೇರೆ ಬೇರೆ ದೇಶದ ಮ್ಯಾಪ್‌ನನ್ನು ಇಟ್ಟಿದ್ದರು. ಅಲ್ಲಿಗೆ ಬಿಳಿ ಶ್ವಾನವೊಂದನ್ನು ಕರೆದುಕೊಂಡು ಬರಲಾಯಿತು. ಅದು ಬೇರೆಲ್ಲಾ ದೇಶಗಳ ಮ್ಯಾಪ್ ಬಳಿ ಕಣ್ಣಾಡಿಸಿ ಹೋಗಿ ನಂತರ ಭಾರತದ ಮ್ಯಾಪ್ ಬಳಿ ಬಂದು ಕುಳಿತು ತನ್ನೆರಡು ಕಾಲುಗಳನ್ನೆತ್ತಿ ಭಾರತ ಮಾತೆಗೆ ಗೌರವವನ್ನು ಸಮರ್ಪಿಸುತ್ತದೆ. ಮಾತು ಬರದ ಮುಗ್ಧ ಶ್ವಾನದ ದೇಶ ಪ್ರೇಮದ ಈ ರೋಮಾಂಚನಕಾರಿ ವೀಡಿಯೋ ನಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: Viral Video: ಅಬ್ಬಬ್ಬಾ… ಹೆಡೆ ಎತ್ತಿ ನಿಂತ ಕಾಳಿಂಗ ಸರ್ಪದ ಭಯಾನಕ ವಿಡಿಯೊ ಇಲ್ಲಿದೆ ನೋಡಿ

ನೆಟ್ಟಿಗರ ಮನಸ್ಸು ಗೆದ್ದಿರುವ ಈ ಅದ್ಭುತವಾದ ವೀಡಿಯೋ 16.2 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ 3.8 ಮಿಲಿಯನ್ ಲೈಕ್ಸ್ ಹಾಗೂ ಸುಮಾರು 12 ಸಾವಿರದಷ್ಟು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾದರು ಪ್ರೌಡ್ ಆಫ್ ಇಂಡಿಯಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ಜೈ ಹಿಂದ್ ಎಂದು ಕಮೆಂಟ್ ಮಾಡಿದ್ದಾರೆ.

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ