Viral Video: ಅಬ್ಬಬ್ಬಾ… ಹೆಡೆ ಎತ್ತಿ ನಿಂತ ಕಾಳಿಂಗ ಸರ್ಪದ ಭಯಾನಕ ವಿಡಿಯೊ ಇಲ್ಲಿದೆ ನೋಡಿ
ಎತ್ತರಕ್ಕೆ ತನ್ನ ಹೆಡೆ ಬಿಚ್ಚಿ ನಿಂತಿರುವ ಕಿಂಗ್ ಕೋಬ್ರಾದ ವಿಡಿಯೊವೊಂದು ಟ್ವೀಟರ್‌ನಲ್ಲಿ ಸಕ್ಕತ್ ವೈರಲ್ ಆಗಿದೆ, ಈ ವೀಡಿಯೋ ಕುರಿತ ಹೆಚ್ಚಿನ ಮಾಹಿತಿಗಳನ್ನು ಇಲ್ಲಿದೆ
ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕಿಂಗ್ ಕೋಬ್ರಾದ ಭಯಾನಕ ವೀಡಿಯೋವೊಂದು ಸಕ್ಕತ್ ವೈರಲ್ ಆಗಿದೆ. ಉದ್ದನೆಯ ಕೋಬ್ರಾವೊಂದು ಬಾನೆತ್ತರಕ್ಕೆ ಹೆಡೆಬಿಚ್ಚಿ ನಿಂತತಿದೆ. ಜಗತ್ತಿನ ಅತೀ ಉದ್ದದ ವಿಷಕಾರಿ ಹಾವು ಕಿಂಗ್‌ಕೋಬ್ರಾ, ವಾಸ್ತವವಾಗಿ ಅಂಜುಬುರುಕಾಗಿರುವ ಸರೀಸೃಪವಾಗಿದ್ದು, ಅದು ಮನುಷ್ಯರು ವಾಸಿಸುವ ಪ್ರದೇಶದಿಂದ ಅದಷ್ಟು ದೂರ ಕಾಡಿನಲ್ಲಿ ಇರುತ್ತದೆ. ವಾಣಿಜ್ಯ ಮತ್ತು ಕೈಗಾರಿಕ ಪ್ರದೇಶಗಳಿಗೆ ಸ್ಥಳಾವಕಾಶ ಕಲ್ಪಿಸಲು ಹೆಚ್ಚು ಹೆಚ್ಚು ಕಾಡುಗಳನ್ನು ನಾಶ ಮಾಡುತ್ತಾ ಬಂದಂತೆ, ಕಾಡಿನಲ್ಲಿರುವ ಜೀವಿಗಳು ನಾಡಿನತ್ತ ಬರಲು ಆರಂಭಿಸಿವೆ. ಈಗ ಹೆಚ್ಚಾಗಿ ಚಿರತೆ, ಆನೆಗಳು ಕಾಡಿನಿಂದ ಆಹಾರವನ್ನರಸಿ ಊರಿಗೆ ಬರುವ ಸುದ್ದಿಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ.
ಇದೇ ರೀತಿ ಕಾಡಿನಲ್ಲಿ ಇರಬೇಕಾದ ಕಿಂಗ್ ಕೋಬ್ರಾವೊಂದು ತನ್ನ ಹೆಡೆಯನ್ನೆತ್ತಿ ಎತ್ತರಕ್ಕೆ ನಿಂತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಅವರು ಟೀಟರ್‌ನಲ್ಲಿ ಶೇರ್ ಮಾಡಿಕೊಂಡಿರುವ ಈ ವಿಡಿಯೊ ನೆಟ್ಟಿಗರಲ್ಲಿ ನಡುಕ ಹುಟ್ಟಿಸಿದೆ.
The king cobra can literally “stand up” and look at a full-grown person in the eye. When confronted, they can lift up to a third of its body off the ground. pic.twitter.com/g93Iw2WzRo
— Susanta Nanda (@susantananda3) February 27, 2023
ಆ ವೀಡಿಯೋದಲ್ಲಿ ಕೋಬ್ರಾವು ಮಣ್ಣಿನ ಇಳಿಜಾರಿನ ಮೇಲೆ ಎತ್ತರಕ್ಕೆ ತನ್ನ ಹೆಡೆಯನ್ನು ಏರಿಸಿತ್ತು. ಅದರ ಬಾಲವು ಉದ್ದಕ್ಕೆ ಮಲಗಿದ್ದಂತಿತ್ತು. ಹಾವುಗಳು ಭೂಮಿಯಲ್ಲಿರುವ ಅತ್ಯಂತ ಭಯಾನಕ ಜೀವಿಗಳಲ್ಲಿ ಒಂದಾಗಿದೆ. ಅಬ್ಬಬ್ಬಾ ಇವುಗಳನ್ನು ಕಣ್ಣಾರೆ ನೋಡಿದಾಗ ಹೆಚ್ಚಿನವರು ಭಯ ಪಡುತ್ತಾರೆ. ಹಾಗೇ ವೈರಲ್ ಆಗಿರುವ ಕೋಬ್ರಾದ ವಿಡಿಯೊ ನಡುಕ ಹುಟ್ಟಿಸುತ್ತದೆ.
ಇದನ್ನೂ ಓದಿ: Video Viral; ಅಯ್ಯೋ ನನ್ನ ತಂಗಿ ಬೈತಾಳೆ, ಹೊಡಿತಾಳೆ! ಅಣ್ಣನ ಗೋಳು ಕೇಳುವರಾರು?
ಈ ವೀಡಿಯೋ ಶೇರ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಕಿಂಗ್ ಕೋಬ್ರಾದ ವೈರಲ್ ವಿಡಿಯೊ ವೀಕ್ಷಣೆಗಳು 515 ಸಾವಿರ ವೀಕ್ಷಣೆಗಳು ಮತ್ತು 1 ಸಾವಿರಕ್ಕಿಂತಲೂ ಹೆಚ್ಚು ರೀಟ್ವೀಟ್ ಹಾಗೂ 6 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಈ ವೀಡಿಯೋವನ್ನು ನೋಡಿ ಪ್ರಕೃತಿ ಮಾತೆಯ ಸೃಷ್ಟಿ, ಹರೆ ಕೃಷ್ಣ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ಅದ್ಭುತವಾಗಿದೆ ಹಾಗೇನೆ ಭಯಾನಕವಾಗಿದೆ ಎಂದು ಹೇಳಿದ್ದಾರೆ.
Published On - 1:12 pm, Thu, 2 March 23