AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸರ್​​ ನನಗೆ ರಜಾ ಬೇಕಂದ್ರೆ ಬೇಕಷ್ಟೆ, ಈ ಮಾಡರ್ನ್ ಲೀವ್ ಲೆಟರ್ ನೋಡಿದ್ರೆ ಖಂಡಿತ ನಗ್ತೀರಿ

ರಜಾ ಬೇಕಂದ್ರೆ ಬೇಕಷ್ಟೆ, ನೋಡಿ ಸರ್ ನೀವ್ ಏನು ಮಾಡುತ್ತಿರೋ ಗೊತ್ತಿಲ್ಲ. ನನಗೆ ಸ್ವಲ್ಪ ಕೆಲಸ ಇದೆ ನಾನು ಇವತ್ತು ಬರೊದಿಲ್ಲ ಎಂದು ಬರೆದಿರುವ ಮಾರ್ಡನ್ ಲೀವ್ ಲೆಟರ್ ಕುರಿತ ರೀಲ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.

Viral Video: ಸರ್​​ ನನಗೆ ರಜಾ ಬೇಕಂದ್ರೆ ಬೇಕಷ್ಟೆ, ಈ ಮಾಡರ್ನ್ ಲೀವ್ ಲೆಟರ್ ನೋಡಿದ್ರೆ ಖಂಡಿತ ನಗ್ತೀರಿ
ವೈರಲ್ ವಿಡಿಯೊ
ಅಕ್ಷಯ್​ ಪಲ್ಲಮಜಲು​​
|

Updated on: Mar 02, 2023 | 3:28 PM

Share

ರಜಾ ಬೇಕಂದ್ರೆ ಬೇಕಷ್ಟೆ, ನೋಡಿ ಸರ್ ನೀವ್ ಏನು ಮಾಡುತ್ತಿರೋ ಗೊತ್ತಿಲ್ಲ. ನನಗೆ ಸ್ವಲ್ಪ ಕೆಲಸ ಇದೆ ನಾನು ಇವತ್ತು ಬರೊದಿಲ್ಲ ಎಂದು ಬರೆದಿರುವ ಮಾಡರ್ನ್ ಲೀವ್ ಲೆಟರ್ ಕುರಿತ ರೀಲ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಶಾಲೆ ಅಥವಾ ಕಾಲೇಜನಲ್ಲಿ  ರಜೆ ಮಾಡಬೇಕೆಂದರೆ ಮೊದಲೇ ಲೀವ್ ಲೆಟರ್​​ ಬರೆದು ಶಿಕ್ಷಕರ ಬಳಿ ರಜೆಗಾಗಿ ಮನವಿ ಮಾಡಿಕೊಳ್ಳಬೇಕು. ರಜೆ ಮಾಡಿದ ಮರು ದಿನವೂ ಲೀವ್ ಲೆಟರ್ ಕೊಡಬೇಕಾಗುತ್ತದೆ. ನಾವೆಲ್ಲರೂ ಕಾಲೇಜ್‌ಗಿಂತ ಶಾಲಾದಿನಗಳಲ್ಲಿ ಹೆಚ್ಚಾಗಿ ಲೀವ್ ಲೆಟರ್ ಬರೆಯುತ್ತಿದೆವು ಅಲ್ವಾ. ಅದೂ ಕೂಡಾ ಶಿಸ್ತುಬದ್ಧವಾಗಿ ಲೀವ್ ಲೆಟರ್ ಬರೆದುಕೊಡುತ್ತಿದ್ದೆವು. ಆದರೆ ಇಲ್ಲೊಂದು ವೈರಲ್ ಆಗಿರುವ ಮಾಡರ್ನ್​ ಲೀವ್ ಲೆಟರ್ ಇದೆ. ಈ ತಮಾಷೆಯ ಲೀವ್ ಲೆಟರ್​​ನಲ್ಲಿ ವಿಷಯವನ್ನು ಕೇಳಿದರೆ ನಗು ಬರುತ್ತದೆ.

ತಮಾಷೆಗೆಂದು ಈ ಮಾಡರ್ನ್ ಲೀವ್‌ಲೆಟರ್‌ನ್ನು ಇನ್‌ಸ್ಟಾಗ್ರಾಮ್ ಹಂಚಿಕೊಂಡಿದ್ದಾರೆ. ಈ ಲೀವ್ ಲೇಟರ್​ನಲ್ಲಿ ಏನೆಲ್ಲಾ ಇತ್ತು ಎಂಬುದು ಇಲ್ಲಿದೆ.

ಮಾಡರ್ನ್ ಲೀವ್ ಲೆಟರ್

ರಿಗೆ,

ಹೆಡ್ ಮಾಸ್ಟರ್, ನಮ್ ಸ್ಕೂಲು, ನಮ್ಮ ಊರು

ಇಂದ,

ನಾನು, ನಿಮ್ ಸ್ಕೂಲು, ಇದೇ ಊರು

ವಿಷಯ: ರಜಾ ಬೇಕಂದ್ರೆ ಬೇಕಷ್ಟೆ, ನೋಡಿ ಸರ್ ನೀವು ಏನ್ ಮಾಡ್ಕೋತೀರೋ ಮಾಡ್ಕೊಳಿ, ನನಗೆ ಸ್ವಲ್ಪ ಕೆಲಸ ಇದೆ. ಇವತ್ತು ಬರೋದಿಲ್ಲ ಅಷ್ಟೆ.

ನಿಮ್ಮ ಶಿಷ್ಯ

ದಿನಾಂಕ: ಇವತ್ತೇ

ಊರು: ಇದೇ ಊರು

View this post on Instagram

A post shared by Kavitha Kavi (@bhuvanvinoda)

ಇದನ್ನು ಓದಿದವರು ನಕ್ಕು ನಲಿಯುವುದಂತು ನಿಜ. ಇದು ಲೀವ್‌ಲೆಟರ್‌ ಅಥವಾ ಶಿಕ್ಷಕರಿಗೆ ರಜಾ ಕೊಡುವಂತೆ ಅವಾಜ್ ಹಾಕಿದ್ದೋ ಒಂದು ತಿಳಿಯುವುದಿಲ್ಲ. ಆದರೂ ಈ ವೀಡಿಯೋ ಮಾತ್ರ ಸಕ್ಕತ್ ಮಜಾವಾಗಿದೆ. ನಿಜವಾಗಿಯೂ ಈ ರೀತಿಯ ಲೀವ್ ಲೆಟರ್‌ನ್ನು ಸ್ಕೂಲ್ ಟೀಚರ್ಸ್​​ಗೆ ಮಕ್ಕಳು ನೀಡಿದರೆ, ಮಕ್ಕಳಿಗೆ ಜನ್ಮದಲ್ಲಿಯೂ ರಜೆ ಸಿಗಲಿಕ್ಕಿಲ್ಲ.

ಇದನ್ನೂ ಓದಿ: Viral video from China: ಹೋಟೆಲ್ ನಲ್ಲಿ ಲ್ಯಾಪ್ ಟಾಪ್ ಕಳೆದಿದೆ ಅಂತ ರೊಚ್ಚಿಗೆದ್ದ ವ್ಯಕ್ತಿ ಲಾಬಿಯೊಳಗೆ ಕಾರು ನುಗ್ಗಿಸಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ!

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಈ ವೀಡಿಯೋ 1.8 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಸಂಖ್ಯೆಯ ಲೈಕ್ಸ್ ಹಾಗೂ ಕಮೆಂಟ್ಸ್​​ಗಳು ಬಂದಿದೆ. ಒಬ್ಬ ಬಳಕೆದಾರರು ಇಂತಹದ್ದೊಂದು ಪತ್ರ ಬರೆಯಬೇಕು, ಪೆನ್ ಕೊಡ್ರೋ. ಇಂತಹ ಪತ್ರ ಬರೆಯಬೇಕೆಂದರೆ ಒಂದು ಗತ್ತು ಇರಬೇಕು ಎಂದು ತಮಾಷೆಯ ಕಮೆಂಟ್ ಹಾಕಿದ್ದಾರೆ. ಇನ್ನೊಬ್ಬ ಬಳಕೆದಾದರು ಈ ರೀತಿಯ ರಜಾರ್ಜಿಯನ್ನು ಬರೆಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಇದ್ದಪ್ಪ ಲೆಟರ್ ಅಂದ್ರೆ, ಉಡಾಲ್ ಶಿಷ್ಯ ಎಂದು ಹೆಳಿದ್ದಾರೆ.

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ