Viral Video: ಯಪ್ಪಾ…ತಂಗಿಯರಿಗಾಗಿ ಇಷ್ಟೊಂದು ಕೆಟ್ಟದಾಗಿ ಏಕತಾರ ವಾದ್ಯ ನುಡಿಸೋದಾ?
ತಂಗಿಯರಿಗಾಗಿ ಈ ಅಣ್ಣ ಇಷ್ಟೊಂದು ಕೆಟ್ಟದಾಗಿ ಏಕತಾರ ವಾದ್ಯವನ್ನು ನುಡಿಸೋದಾ... ಇನ್ಟಾಗ್ರಾಮ್‌ನಲ್ಲಿ ಪೋಸ್ಟ್ ಆಗಿರುವ ಈ ವೀಡಿಯೋ ನೆಟ್ಟಿಗರನ್ನು ನಕ್ಕು ನಲಿಯುವಂತೆ ಮಾಡಿದೆ.
ತಂಗಿಯರಿಗಾಗಿ ಈ ಅಣ್ಣ ಇಷ್ಟೊಂದು ಕೆಟ್ಟದಾಗಿ ಏಕತಾರ ವಾದ್ಯವನ್ನು ನುಡಿಸೋದಾ… ಇನ್ಟಾಗ್ರಾಮ್‌ನಲ್ಲಿ ಪೋಸ್ಟ್ ಆಗಿರುವ ಈ ವೀಡಿಯೋ ನೆಟ್ಟಿಗರನ್ನು ನಕ್ಕು ನಲಿಯುವಂತೆ ಮಾಡಿದೆ. ಪ್ರತಿಯೊಬ್ಬ ಅಣ್ಣನೂ ತನ್ನ ತಂಗಿಗೆ ಚೇಷ್ಟೆ ಮಾಡುತ್ತಾ ಆಕೆಯ ಕಾಲೆಳೆಯುತ್ತ ಇರುತ್ತಾನೆ. ತಂಗಿಗೆ ತಮಾಷೆ ಮಾಡುವುದೆಂದರೆ ಅಣ್ಣನಾದವನಿಗೆ ಏನೋ ಖುಷಿ. ಅದರಲ್ಲೂ ನೆಂಟರಿಷ್ಟರ ಮಧ್ಯೆ ತಂಗಿಯನ್ನು ರೇಗಿಸುವುದೆಂದರೆ ಇನ್ನೂ ಖುಷಿ. ಕೇಲವು ಅಣ್ಣಂದಿರು ನನ್ನ ತಂಗಿಗೋಸ್ಕರ ಹಾಡು ಹಾಡುತ್ತೇನೆ ಎಂದು ಕರ್ಕಶ ಧ್ವನಿಯಲ್ಲಿ ಚೀರಾಡುತ್ತಾರೆ. ಒಟ್ಟಾರೆಯಾಗಿ ತಂಗಿಯಂದಿರಿಗೆ ಏನಾದರೂ ತರ್ಲೆ ಮಾಡದಿದ್ದರೆ ಅಣ್ಣನಾದವನಿಗೆ ಸಮಾಧಾನವೇ ಇರುವುದಿಲ್ಲ.
ಇದೇ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ವ್ಯಕ್ತಿಯೊಬ್ಬ ನನ್ನ ತಂಗಿಯರಿಗಾಗಿ ‘ತಂಗಿ ನಿನ್ನ ನಗುವಲೊಂದು ಪುಟ್ಟ ನಗುವಿದೆ’ ಎಂಬ ಹಾಡಿನ ರಾಗವನ್ನು ಏಕತಾರ ವಾದ್ಯದಲ್ಲಿ ನುಡಿಸುತ್ತೇನೆ ಎಂದು ಹೇಳಿದ. ಅಲ್ಲಿ ಅಕ್ಕಪಕ್ಕದಲ್ಲಿದ್ದವರು ಎಲ್ಲರೂ ಈತ ಬಹಳ ಚೆನ್ನಾಗಿ ವಾದ್ಯ ನುಡಿಸುಬಹುದು ಎಂದು ಬಹಳ ಆಸಕ್ತಿಯಿಂದ ಈತ ವಾದ್ಯ ನುಡಿಸುವ ಶೈಲಿಯನ್ನು ಕೇಳಲು ಕುಳಿತಿರುತ್ತಾರೆ. ಈತ ಏಕತಾರ ವಾದ್ಯ ನುಡಿಸಲು ಆರಂಭಿಸಿದ ತಕ್ಷಣವೇ ಅಲ್ಲಿದ್ದ ಎಲ್ಲರೂ ಬಿದ್ದು ಬಿದ್ದು ನಗುತ್ತಾರೆ. ಯಾಕೆಂದರೆ ಈ ಹಾಡಿಗೂ ಅವನ ವಾದ್ಯದ ರಾಗಕ್ಕೂ ಯಾವುದೇ ಸಂಬಂಧವಿರಲಿಲ್ಲ. ಗರಗಸದಲ್ಲಿ ಮರ ಕೊಯ್ಯುವ ಹಾಗೆ ಏಕತಾರ ವಾದ್ಯವನ್ನು ನುಡಿಸಿದ್ದಾನೆ. ಒಂದೇ ಸಮನೆ ಕೆಲವು ಸೆಕೆಂಡುಗಳ ಕಾಲ ಹೀಗೆ ಏಕತಾರವನ್ನು ನುಡಿಸುತ್ತಿರುವುದನ್ನು ತೋರಿಸುವ ಈ ವಿಡಿಯೊ ನೋಡುಗರ ಮುಖದಲ್ಲಿ ನಗು ಮೂಡಿಸುವುದಂತೂ ಖಂಡಿತ.
View this post on Instagram
ಇದನ್ನೂ ಓದಿ: Video Viral: ಬೀದಿಯಲ್ಲಿ ರಾಜಾರೋಷವಾಗಿ ಅಡ್ಡಾಡಿದ ಚಿರತೆ, ಭೋಜನ ನಂತರದ ನಡಿಗೆ ಎಂದ ನೆಟ್ಟಿಗರು
ಇನ್ಟಾಗ್ರಾಮ್ ಪೇಜ್ ಒಂದರಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೊಗೆ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದೆ. ಅದೇ ರೀತಿ ಹೆಚ್ಚಿನ ಸಂಖ್ಯೆಯ ಕಮೆಂಟ್ ಮತ್ತು ಲೈಕ್ಸ್ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ನುಡಿಸ್ತೀಯಾ ಅಂದುಕೊಂಡಿದ್ದೆ, ಆದರೆ ಇಷ್ಟೊಂದು ಚೆನ್ನಾಗಿ ನುಡಿಸುತ್ತಿಯಾ ಅಂತ ಗೊತ್ತಿರಲಿಲ್ಲ ಗುರು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾದರು ಈತನ ಏಕತಾರ ನುಡಿಸುವ ಶೈಲಿಗೆ ಗರಗಸ ಎಂದು ಕಮೆಂಟ್ ಮಾಡುತ್ತಾ ಕಾಲೆಳೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಏನು ಮರ ಕುಯ್ಯೋದಾ ನೀವು ಅಂತ ನಗುತ್ತಾ ಹೇಳಿದ್ದಾರೆ.
Published On - 4:56 pm, Wed, 1 March 23