Video Viral: ಬೀದಿಯಲ್ಲಿ ರಾಜಾರೋಷವಾಗಿ ಅಡ್ಡಾಡಿದ ಚಿರತೆ, ಭೋಜನ ನಂತರದ ನಡಿಗೆ ಎಂದ ನೆಟ್ಟಿಗರು

ಉತ್ತರಾಖಂಡದ ನೈನಿತಾಲ್‌ನಲ್ಲಿ ಚಿರತೆಯೊಂದು ಓಡಾಡುತ್ತಿರುವ ವೀಡಿಯೋವನ್ನು ಸೆರೆ ಹಿಡಿದು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Video Viral: ಬೀದಿಯಲ್ಲಿ ರಾಜಾರೋಷವಾಗಿ ಅಡ್ಡಾಡಿದ ಚಿರತೆ, ಭೋಜನ ನಂತರದ ನಡಿಗೆ ಎಂದ ನೆಟ್ಟಿಗರು
ಚಿರತೆ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 28, 2023 | 6:34 PM

ನೈನಿತಾಲ್‌ನ ಬೀದಿಯಲ್ಲಿ ಚಿರತೆಯೊಂದು ರಾಜಾರೋಷವಾಗಿ ನಡೆದಾಡಿಕೊಂಡು ಹೋಗುವ ವೀಡಿಯೋವನ್ನು ‘ಪೋಸ್ಟ್ ಡಿನ್ನರ್ ವಾಕ್, ಇನ್ ದಿ ಸಿಟಿ ಆಫ್ ನೈನಿತಾಲ್’ ಶೀರ್ಷಿಕೆಯ ಜೊತೆಗೆ ಟ್ವೀಟರ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಉತ್ತರಾಖಂಡದ ನೈನಿತಾಲ್‌ನಲ್ಲಿ ಚಿರತೆಯೊಂದು ಓಡಾಡುತ್ತಿರುವ ವೀಡಿಯೋವನ್ನು ಸೆರೆ ಹಿಡಿದು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗಿರಿಧಾಮದ ಖಾಲಿ ಬೀದಿಯಲ್ಲಿ ಚಿರತೆ ನಡೆದುಕೊಂಡು ಹೋಗಿ, ಸ್ವಲ್ಪ ಹೊತ್ತಿನ ಬಳಿಕ ಚಿರತೆ ಹಿಂತಿರುಗಿ ಕ್ಯಾಮೆರಾವನ್ನು ನೋಡುತ್ತದೆ ಬಳಿಕ ಠಾಕೂರ್ ದೇವ್ ಸಿಂಗ್ ಬಿಶ್ತ್ ಕ್ಯಾಂಪಸ್ ಗೇಟ್ ಕಡೆಗೆ ಚಿರತೆ ಹೋಗುವುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ.

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸಾಕೇತ್ ಬಡೋಲಾ ಅವರು ಚಿರತೆಯ ವಿಡಿಯೊವನ್ನು ‘ಪೋಸ್ಟ್ ಡಿನ್ನರ್ ವಾಕ್, ಇನ್ ದಿ ಸಿಟಿ ಆಫ್ ನೈನಿತಾಲ್’ ಶೀರ್ಷಿಕೆಯನ್ನು ಬರೆದು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಪೋಸ್ಟ್ ಮಾಡಿದ ಬಳಿಕ ಇದು 18,000ಕ್ಕಿಂತಲೂ ಅಧಿಕ ವೀಕ್ಷಣೆಗಳು ಮತ್ತು 11,000 ಇಂಪ್ರೆಶನ್‌ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Video Viral : ಅಣ್ಣ-ತಂಗಿ ಮಧ್ಯೆ ಜಗಳ, ಅಮ್ಮ ಬರದಿದ್ರೆ ಮಹಾಯುದ್ಧ ನಡೆಯುತ್ತಿತ್ತು?

ಈ ವಿಡಿಯೊವನ್ನು ನೋಡಿದ ಟ್ವೀಟರ್ ಬಳಕೆದಾರರೊಬ್ಬರು, ಉತ್ತರಾಖಂಡದ ನೈನಿತಾಲ್‌ನಿಂದ ನಾವು ವನ್ಯ ಜೀವಿ ಸಂರಕ್ಷಣೆಯಲ್ಲಿ ನಂಬರ್ 1ರಾಜ್ಯ ಎಂದು ಹೆಮ್ಮೆಯಿಂದ ಹೇಳಬಹುದು ಎಂದು ಕಮೆಂಟ್ ಮಾಡಿದ್ದಾರೆ, ಮತ್ತೊಬ್ಬ ಬಳಕೆದಾದರು ಅದು ಹೇಗೆ ನೀವು ಭೋಜನದ ನಂತರದ ನಡಿಗೆ ಎಂದು ಹೇಳುತ್ತೀರಾ, ಬಹುಶಃ ಆ ಚಿರತೆ ಊಟವನ್ನು ಹುಡುಕುತ್ತಿರಬಹದು ಎಂದು ಹೇಳಿದರು. ಮೂರನೆಯ ಬಳಕೆದಾರರು ‘ನಾನು ಈ ಕ್ಯಾಂಪಸ್‌ನಿಂದಲೇ ಫಾರೆಸ್ಟಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಓದಿದ್ದು. ಉತ್ತರಾಖಂಡದ ಅರಣ್ಯ ಇಲಾಖೆಯಿಂದ ಡಿಎಸ್‌ಬಿ ಕ್ಯಾಂಪಸ್‌ಗೆ ಗ್ರೀನ್ ಕ್ಯಾಂಪಸ್’ ಪ್ರಶಸ್ತಿ ಬಂದಿದೆ. ಹಾಗೂ ಇಲ್ಲಿ ಸುತ್ತಲೂ ಉತ್ತಮ ಜೀವ ವೈವಿಧ್ಯತೆಯನ್ನು ಕಾಣಬಹುದು. ಉದಾಹರಣೆಗೆ ಜಿಂಕೆ, ಮುಳ್ಳು ಹಂದಿ, ಚಿರತೆ, ವಿವಿಧ ರೀತಿಯ ಪಕ್ಷಿಗಳನ್ನು ಇಲ್ಲಿ ನೋಡಬಹುದು ಎಂದು ಕಮೆಂಟ್ ಮಾಡಿದ್ದಾರೆ. ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿದ ಘಟನೆಗಳು ಹಲವು ಬಾರಿ ವರದಿಯಾಗಿವೆ. ಇದನ್ನು ಪರಿಸರವಾದಿಗಳು ಚಿರತೆಗಳು ಮತ್ತು ಇತರ ಕಾಡು ಪ್ರಾಣಿಗಳ ಆವಾಸಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿ ಅನಿಯಂತ್ರಿತ ಅಭಿವೃದ್ಧಿಯ ಮೇಲೆ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

Published On - 6:34 pm, Tue, 28 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್