Viral Post: ಅಬ್ಬಾಬ್ಬ ಹಳೆಯ ಕಾಲವೇ ಚೆನ್ನಾಗಿತ್ತು, 14 ರೂ.ಗೆ 1 ಕಿಲೋ ಗುಲಾಬ್ ಜಾಮೂನ್, 1980ರ ಮೆನು ವೈರಲ್
ಹರ್ದಯಲ್ ರಸ್ತೆಯ ಜಲಂಧರ್ ಕಂಟೋನ್ಮೆಂಟ್‌ನಲ್ಲಿರುವ ಲವ್ಲಿ ಸ್ವೀಟ್ ಹೌಸ್‌ನ ಅಂದಿನ ಸಿಹಿ ತಿನಿಸುಗಳ ಮೆನುವಿನ ಪೋಸ್ಟ್ ಹಂಚಿಕೊಂಡಿದ್ದಾರೆ. 1980ರ ಫೇಮಸ್ ಲವ್ಲಿ ಸ್ವೀಟ್ ಬೆಲೆ ಪಟ್ಟಿ ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ.
4 ಹಿಂದಿನ ಮಿಟಾಯಿ ಅಂಗಡಿಯ ಬೆಲೆಪಟ್ಟಿಯನ್ನು ತೋರಿಸುವ ಇತ್ತೀಚಿನ ಫೇಸ್‌ಬುಕ್ ಪೋಸ್ಟ್ ಒಂದು ನೆಟ್ಟಿಗರ ಗಮನ ಸೆಳೆದಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸುಮಾರು 30-40 ವರ್ಷಗಳ ಹಿಂದೆ ತಿರುಗಿ ನೋಡುವುದಾದರೆ ನಾವು ತಿನ್ನುವ ಹಾಗೂ ದೈನಂದಿನ ಜೀವನದಲ್ಲಿ ಉಪಯೋಗಿಸುವಂತಹ ವಸ್ತುಗಳ ಬೆಲೆ ತೀರಾ ಕಡಿಮೆ ಇತ್ತು. ಆ ಬೆಲೆಗಳನ್ನು ಈಗ ನೋಡಿದಾಗ ಒಮ್ಮೆಗೆ ತಲೆ ಸುತ್ತು ಬರುವುದು ಖಂಡಿತ. ಇದೇ ರೀತಿಯ ನಿಮ್ಮ ಹುಬ್ಬೇರಿಸುವಂತಹ ಹಳೆಯ ಕಾಲದ ಸಿಹಿ ತಿಂಡಿಗಳ ಮೆನುವಿನ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಗ್ಯಾಗ್ರೇಟ್ ಹುಲ್ಚಾಲ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ 4 ದಶಕಗಳ ಹಿಂದಿನ ಮಿಠಾಯಿ ಅಂಗಡಿಯ ಮೆನು ಕಾರ್ಡ್ ಒಂದನ್ನು ಪೋಸ್ಟ್ ಮಾಡಲಾಗಿದೆ. ಇಂದಿನ ದಿನಗಳ ಮಾನದಂಡಗಳಿಗೆ ಹೋಲಿಸಿದರೆ ಅದರಲ್ಲಿದ್ದ ತಿನಿಸುಗಳ ಬೆಲೆ ತುಂಬಾನೇ ಕಡಿಮೆಯಾಗಿದೆ. ವೈರಲ್ ಆಗಿರುವ ಈ ಪೋಸ್ಟ್ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.
ಹರ್ದಯಲ್ ರಸ್ತೆಯ ಜಲಂಧರ್ ಕಂಟೋನ್ಮೆಂಟ್‌ನಲ್ಲಿರುವ ಲವ್ಲಿ ಸ್ವೀಟ್ ಹೌಸ್‌ನ ಅಂದಿನ ಸಿಹಿ ತಿನಿಸುಗಳ ಮೆನುವಿನ ಪೋಸ್ಟ್ ಹಂಚಿಕೊಂಡಿದ್ದಾರೆ. 1980ರ ಫೇಮಸ್ ಲವ್ಲಿ ಸ್ವೀಟ್ ಬೆಲೆ ಪಟ್ಟಿ ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ. ಅದರ ಪ್ರಕಾರ ಮೋತಿಚೂರು ಲಡ್ಡು, ರಸಗುಲ್ಲಾ, ಗುಲಾಬ್ ಜಾಮೂನ್ ಇತ್ಯಾದಿ ಸಿಹಿತಿಂಡಿಗಳ ಬೆಲೆ ಕೆಜಿಗೆ ರೂ. 10 ರಿಂದ 14 ರೂಪಾಯಿ ಇತ್ತು. ಇಂದು ನಮಗೆ ಮಿಠಾಯಿಯ ಒಂದು ತುಂಡು ಅಷ್ಟು ಬೆಲೆಗೆ ಸಿಗುವುದಿಲ್ಲ. ಚಾಕೋಲೆಟ್ ಬರ್ಫಿ ಮತ್ತು ಪಿಸ್ತಾ ಬರ್ಫಿಯಂತಹ ಸ್ವಲ್ಪ ಪ್ರೀಮಿಯಂ ವಿಧದ ಮಿಠಾಯಿಗಳ ಬೆಲೆ ಪ್ರತಿ ಕೆ.ಜಿಗೆ 18 ರಿಂದ 20 ರೂಪಾಯಿಗಳಿದ್ದವು. ಸಮೋಸಾ, ಕಚೋರಿ, ಪನೀರ್ ಪಕೋಡಾ ಮುಂತಾದ ತಿಂಡಿಗಳ ಬೆಲೆ ಆ ಕಾಲದಲ್ಲಿ 1 ರೂಪಾಯಿಗಿಂತಲೂ ಕಡಿಮೆ ಇತ್ತು. ಇಂದು ಅದೇ ತಿಂಡಿಗಳ ಬೆಲೆ ರೂ 10 ರಿಂದ 100 ರೂಪಾಯಿಗಳ ವರೆಗೂ ಇದೆ. ನೆಟ್ಟಿಗರು ಸಹಜವಾಗಿಯೇ ವೈರಲ್ ಆಗಿರುವ ಆ ಮೆನುವನ್ನು ನೋಡಿ ಆಕರ್ಷಿತರಾಗಿದ್ದಾರೆ. ವೈರಲ್ ಆದ ಈ ಪೋಸ್ಟ್ನ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಾವು ಕರೆನ್ಸಿಯ ಮೌಲ್ಯವನದ್ನು ಸರಿಹೊಂದಿಸಬೇಕಾಗಿರುವುದರಿಂದ ಆ ಅವಧಿಗೆ ಆ ಸಣ್ಣ ಮೊತ್ತವು ಹೆಚ್ಚು ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Post : ಊಬರ್ ಇಂಡಿಯಾ ಹೆಚ್ಚುವರಿ ಹಣವನ್ನು ಮರುಪಾವತಿಸುವುದೆ?
ಇನ್ನೂ ಕೆಲವರು ಆ ಮೆನುವಿನ ಕಾಗದ ಬಣ್ಣ ಬಣ್ಣದ್ದಾಗಿದೆ. ಆದರೆ ಅದರ ಮೇಲೆ ಯಾವುದೆ ನಿಖರವಾದ ವರ್ಷವನ್ನು ಉಲ್ಲೇಖಿಸಿಲ್ಲ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಪೋಸ್ಟ್ಗೆ ಬಂದಿರುವ ಕಮೆಂಟ್‌ಗಳನ್ನು ನೋಡುವುದಾದರೆ, ಒಬ್ಬ ಬಳಕೆದಾದರು ಅದ್ಭುತ ದಿನಗಳು ಎಂದಿಗೂ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ನನಗೆ ಈ ಅಂಗಡಿಯಲ್ಲಿರುವ ಸಿಹಿ ತಿಂಡಿಗಳು ಇಷ್ಟ. ನಿಜವಾಗಿಯೂ ಈಗ ಇದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಪಂಜಾಬ್‌ನ ಅತ್ಯುತ್ತಮ ಸಿಹಿತಿಂಡಿಗಳ ಅಂಗಡಿಗಳಲ್ಲಿ ಒಂದಾಗಿದೆ. ನಾನು 1996-2000 ಇಸವಿಯಲ್ಲಿ ಜಲಂಧರ್‌ನಲ್ಲಿದ್ದಾಗ ಈ ಸಿಹಿ ಅಂಗಡಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಇದುವರೆಗೆ 28,000 ಲೈಕ್ಸ್ ಮತ್ತು 1,600 ಕಮೆಂಟ್‌ಗಳನ್ನು ಪಡೆದುಕೊಂಡಿದೆ.
Published On - 11:42 am, Wed, 1 March 23