Viral Post : ಊಬರ್​ ಇಂಡಿಯಾ ಹೆಚ್ಚುವರಿ ಹಣವನ್ನು ಮರುಪಾವತಿಸುವುದೆ?

Uber : ದೆಹಲಿ ವಿಮಾನ ನಿಲ್ದಾಣದಿಂದ ನೋಯ್ಡಾಗೆ ಇರುವ ಅಂತರ 45 ಕಿ.ಮೀ. ಊಬರ್ ತನ್ನ ಪ್ರಯಾಣಿಕರ ಕೈಗಿತ್ತ ಬಿಲ್ ಕೇವಲ ರೂ. 3,000!  

Viral Post : ಊಬರ್​ ಇಂಡಿಯಾ ಹೆಚ್ಚುವರಿ ಹಣವನ್ನು ಮರುಪಾವತಿಸುವುದೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 17, 2022 | 12:49 PM

Uber : ನೋಯ್ಡಾ ಮೂಲದ ವ್ಯಕ್ತಿಯೊಬ್ಬರು ದೆಹಲಿ ವಿಮಾನ ನಿಲ್ದಾಣದಿಂದ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್​ ವೇನಲ್ಲಿ ತಮ್ಮ ಮನೆಗೆ ತೆರಳುವಾಗ ಊಬರ್ ಕ್ಯಾಬ್​ ಬುಕ್ ಮಾಡಿದ್ಧಾರೆ. ಆದರೆ ಪಾವತಿಸಬೇಕಾದ ಬಿಲ್​ ನೋಡಿ ಗಾಬರಿಗೆ ಒಳಗಾಗಿದ್ದಾರೆ. ಅವರು ಪ್ರಯಾಣಿಸಿದ್ದು ಕೇವಲ 45 ಕಿ.ಮೀ. ಆದರೆ ಬಂದ ಬಿಲ್​ ರೂ. 2,935! ಕೊರೋನಾ ನಂತರ ಬಹುಶಃ ನೀವೆಲ್ಲ ಗಮನಿಸಿರುತ್ತೀರಿ. ಕ್ಯಾಬ್​ಗಳ ಬೆಲೆ ದುಬಾರಿಯಾಗಿದೆ. ಅದರಲ್ಲೂ ಊಬರ್​! ಅನುಕೂಲಕ್ಕೆ, ಅನಿವಾರ್ಯಕ್ಕೆ, ಅವಸರಕ್ಕೆ ಪ್ರಯಾಣಿಕರು ಇಷ್ಟೊಂದು ಹಣ ತೆರುತ್ತ ಒದ್ದಾಡುವಂಥ ಸನ್ನಿವೇಶ ಎಲ್ಲೆಡೆಯೂ ಹೆಚ್ಚುತ್ತಿದೆ. ಆದರೂ ಪ್ರಯಾಣಿಕರು ಕೊರಗುತ್ತಲೇ ಪ್ರಯಾಣಿಸುತ್ತಿದ್ದಾರೆ. ತಮ್ಮ ಆಯ್ಕೆಗೆ ತಕ್ಕಂತೆ ಬೆಲೆ ತೆರುವುದು ಅನಿವಾರ್ಯ ಎನ್ನುವುದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

‘ಆಗಸ್ಟ್​ 5ರಂದು ದೆಹಲಿ ವಿಮಾನದಿಂದ ನೋಯ್ಡಾದಲ್ಲಿರುವ ನನ್ನ ಮನೆಗೆ ಸುಮಾರು 45 ಕಿ.ಮೀ ಪ್ರಯಾಣಕ್ಕೆ ರೂ. 2,935 ಬಿಲ್ ಪಾವತಿಸಬೇಕಾಯಿತು. ನಿಗದಿಯಾದ ಬಿಲ್​ ರೂ. 147.39 ಮಾತ್ರ ಇತ್ತು. @Uber_India ದಂಥ ಕೆಟ್ಟ ಸೇವೆಗಳಿಗೆ ಸಾರ್ವಜನಿಕರು ಮೊರೆ ಹೋಗುವುದನ್ನು ದ್ವೇಷಿಸುತ್ತೇನೆ. ಆದರೆ ಏನು ಮಾಡುವುದು ನನಗೆ ಬೇರೆ ಆಯ್ಕೆಯೇ ಇಲ್ಲ. ಇನ್ನು ಪಿಕ್-ಅಪ್ ಮತ್ತು ಡ್ರಾಪ್ ಮಾಡುವ ಸ್ಥಳಗಳ ವಿಷಯದಲ್ಲಿಯೂ ಅಷ್ಟೇ ಸಮಸ್ಯೆಯಾಗುತ್ತಿದೆ. ದಯವಿಟ್ಟು ಈ ಅವ್ಯವಸ್ಥೆಯನ್ನು ಸರಿಪಡಿಸಿ, ಹೆಚ್ಚುವರಿ ಮೊತ್ತವನ್ನು ಮರಳಿಸಿ. ದೂರುಗಳ ಮೂಲಕ ಪರಿಹಾರ ಕಾರ್ಯವಿಧಾನವನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ವಹಿಸಿ’ ಎಂದು ಪ್ರಯಾಣಿಕ ದೇವ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ಧಾರೆ.

ಇದಕ್ಕೆ ಪ್ರತ್ಯುತ್ತರವಾಗಿ ಊಬರ್ ಇಂಡಿಯಾ, ‘ಈ ಪ್ರಕರಣದ ಕುರಿತು ತನಿಖೆ ಮಾಡಲಾಗುತ್ತಿದೆ’ ಎಂದು ಉತ್ತರಿಸಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಪೋಸ್ಟ್​ಗೆ ಪ್ರತಿಕ್ರಿಯೆಯಾಗಿ ಮತ್ತೊಬ್ಬ ಪ್ರಯಾಣಿಕರು, ‘ಒಮ್ಮೆ ನೋಯ್ಡಾಕ್ಕೆ ಪ್ರಯಾಣಿಸಲೆಂದು ಬುಕ್ ಮಾಡಿದಾಗ ತೋರಿಸಿದ ಮೊತ್ತ ರೂ. 1,500. ಆದರೆ ಕೊನೆಗೆ ಅವರು ಬಿಲ್​ ಪಾವತಿಸಲು ಕೇಳಿದ್ದು ಮೂರರಿಂದ ಮೂರೂವರೆ ಸಾವಿರ ರೂಪಾಯಿ. ನಾನೂ ಕೂಡ ಮರುಪಾವತಿ ಮಾಡಲು ಕೇಳಿಕೊಂಡಿದ್ದೇನೆ.’ ಎಂದಿದ್ದಾರೆ.

ಆಫೀಸಿಗೆ ತಲುಪುವ ಮತ್ತು ಮನೆಗೆ ಮರಳುವ ಪೀಕ್​ ಅವರ್​ನಲ್ಲಿ ಊಬರ್​ನವರು ಹೀಗೆ ದರ ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇಂಧನದ ಬೆಲೆ ಏರಿಕೆಯ ಪ್ರಭಾವ ಮತ್ತು ತನ್ನ ಡ್ರೈವರ್​ಗಳನ್ನು ಉಳಿಸಿಕೊಳ್ಳಲು ಈ ಹಿಂದೆ ಊಬರ್ ಹೀಗೆ ದರ ಹೆಚ್ಚಳ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:48 pm, Wed, 17 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ