AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನ ವ್ಯಕ್ತಿಯೊಬ್ಬರು ರ‍್ಯಾಪಿಡೊ ಡ್ರೈವರ್​​ನೊಂದಿಗೆ ನಡೆಸಿದ ಸಂಭಾಷಣೆ ವೈರಲ್

Rapido Driver : ಪರಾಗ್ ಜೈನ್ ಎನ್ನುವವರು ಈ ರ‍್ಯಾಪಿಡೊ ಡ್ರೈವರ್​ನೊಂದಿಗೆ ಮಾತಿಗಿಳಿಯದಿದ್ದರೆ, ಇವರೊಬ್ಬ ಫ್ರೀಲಾನ್ಸ್​​ ಡೈರೆಕ್ಟರ್ ಎಂಬ ವಿಷಯ ಗೊತ್ತೇ ಆಗುತ್ತಿರಲಿಲ್ಲವೇನೋ.

Viral: ಬೆಂಗಳೂರಿನ ವ್ಯಕ್ತಿಯೊಬ್ಬರು ರ‍್ಯಾಪಿಡೊ ಡ್ರೈವರ್​​ನೊಂದಿಗೆ ನಡೆಸಿದ ಸಂಭಾಷಣೆ ವೈರಲ್
ಸಾಂದರ್ಭಿಕ ಚಿತ್ರ
TV9 Web
| Edited By: ಶ್ರೀದೇವಿ ಕಳಸದ|

Updated on:Aug 17, 2022 | 11:09 AM

Share

Rapido Driver : ಬೆಂಗಳೂರಿನಲ್ಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕ ತಲುಪಬೇಕೆಂದರೆ ಬಸ್,​ ಮೆಟ್ರೋ ಹೊರತಾಗಿ ಸೌಲಭ್ಯವಿರುವುದು ಕ್ಯಾಬ್​, ಆಟೋ, ಬೈಕ್​ರೈಡ್. ಹೀಗೆ ಪ್ರಯಾಣಿಸುವಾಗ ನಾವದೆಷ್ಟು ಜನ ಡ್ರೈವರ್​ಗಳೊಂದಿಗೆ ಮಾತನಾಡುವ ಆಸ್ಥೆ, ಆಸಕ್ತಿ ಉಳಿಸಿಕೊಂಡಿರುತ್ತೇವೆ? ಬಹುಶಃ ಇದು ಎಲ್ಲರಿಗೂ ಸಾಧ್ಯವಾಗದು. ಏಕೆಂದರೆ ಅನ್ಯರ ಬಗ್ಗೆ ಅನ್ಯ ವಿಷಯಗಳ ಬಗ್ಗೆ ಯೋಚಿಸುವ, ಚಿಂತಿಸುವ ವ್ಯವಧಾನ ಎಲ್ಲರಿಗೂ ಇರುವುದಿಲ್ಲ. ಎಲ್ಲರೂ ಅವರವರ ಬದುಕನ್ನು ಕಟ್ಟಿಕೊಳ್ಳುವ ಧಾವಂತದಲ್ಲಿ ಕಳೆದುಹೋಗುವವರೇ. ಆದರಲ್ಲೂ ಮೊಬೈಲ್​ ಬಂದ ಮೇಲಂತೂ ಪೂರ್ತಿ ಸ್ವಕೇಂದ್ರಿತವೇ. ಆದರೂ ಮಾನವೀಯತೆ, ಅಂತಃಕರಣವುಳ್ಳ ಕೆಲ ವ್ಯಕ್ತಿಗಳು ತಮ್ಮ ಲೋಕದಿಂದ ಹೊರಬಂದು ಇತರರೊಂದಿಗೆ ಮಾತನಾಡಲು ಬಯಸುವ ರೂಢಿ ಇಟ್ಟುಕೊಂಡಿದ್ದಾರೆ ಎನ್ನುವುದೇ ಸಮಾಧಾನ. ಇದಕ್ಕೆ ಸಾಕ್ಷಿ ಈ ಟ್ವಿಟರ್ ಪೋಸ್ಟ್​ ವೈರಲ್ ಆಗಿರುವುದು.

ಬೆಂಗಳೂರಿನಲ್ಲಿರುವ ಪರಾಗ್ ಜೈನ್ ಎಂಬ ವ್ಯಕ್ತಿ ತನ್ನ ಕೆಲಸದ ಸ್ಥಳದಿಂದ ರ‍್ಯಾಪಿಡೊ ಬೈಕ್​ ಬುಕ್ ಮಾಡುತ್ತಾರೆ. ಡ್ರೈವರ್ ವಿಘ್ನೇಶ್ ನಾಗಭೂಷಣಂ, ಅವರನ್ನು ಪಿಕ್ ಮಾಡಲು ಹೋಗುತ್ತಾರೆ. ಪ್ರಯಾಣದ ಮಧ್ಯೆ ಮಾತನಾಡುತ್ತಾ, ನೀವು ಹಿಂದೆ ಯಾವ ಕೆಲಸದಲ್ಲಿ ತೊಡಗಿಕೊಂಡಿದ್ದೀರಿ ಎಂದು ಪರಾಗ್ ಕೇಳುತ್ತಾರೆ. ಎರಡು ವರ್ಷಗಳ ಹಿಂದೆ ಇದೇ ಬಿಲ್ಡಿಂಗ್​ನಲ್ಲಿ ಕೆಲಸ ಮಾಡುತ್ತಿದ್ದೆ ಎನ್ನುತ್ತಾರೆ ವಿಘ್ನೇಶ್! ಹೇಗಿದ್ದವರನ್ನು ಹೇಗೂ ತಂದು ನಿಲ್ಲಿಸಬಹುದು ಈ ಕಾಲ, ಅಲ್ಲವೇ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪರಾಗ್ ಕೆಲಸ ಮಾಡುತ್ತಿರುವ ಬಿಲ್ಡಿಂಗ್​ನಲ್ಲಿಯೇ ವಿಘ್ನೇಶ್ ಚೀನಾದ ಕಂಪನಿಯೊಂದರಲ್ಲಿ ಆಪರೇಷನ್​ ಟೀಮ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, 2020ರ ಮಾರ್ಚ್​ನಲ್ಲಿ ಚೈನೀಸ್ ಅಪ್ಲಿಕೇಶನ್‌ಗಳ ಮೇಲಿನ ನಿಷೇಧದಿಂದಾಗಿ ಅವರು ಕೆಲಸ ಕಳೆದುಕೊಳ್ಳಬೇಕಾಯಿತು. ಕೊರೊನಾ ಸಮಯದಲ್ಲಿ ಅವರಿಗೆ ಎಲ್ಲಿಯೂ ಕೆಲಸ ಸಿಗಲಿಲ್ಲ. ಹಾಗಾಗಿ, ವಿಘ್ನೇಶ್ ಬಹಳ ಕಾಲದಿಂದ ಮನಸ್ಸಿನಲ್ಲಿದ್ದ ಸಿನೆಮಾ ನಿರ್ದೇಶನನದ ಒಲವಿಗೆ ಗರಿ ಮೂಡಿಸಿಕೊಳ್ಳಲಾರಂಭಿಸಿದರು. ಉಳಿತಾಯದ ಎಲ್ಲ ಹಣವನ್ನು ತೊಡಗಿಸಿ ಒಂದು ಮಿನಿಸೀರೀಸ್​ ಮಾಡಿದರು. ನಿರೀಕ್ಷಿಸದ ಮಟ್ಟದಲ್ಲಿ ಅದು ಪ್ರಶಂಸೆ ಗಳಿಸಿತು. ಸುಮಾರು 15 ಫಿಲ್ಮ್ ಫೆಸ್ಟಿವಲ್​ಗಳಲ್ಲಿ ಬಹುಮಾನ ಪಡೆಯಿತು. ನಂತರ OTT ಇವರ ಸೀರೀಸ್ ಬಗ್ಗೆ ಆಸಕ್ತಿ ತೋರಿತಾದರೂ ವಾಣಿಜ್ಯಾತ್ಮಕ ಸಮಸ್ಯೆಗಳಿಂದ ತಿರಸ್ಕರಿಸಲ್ಪಟ್ಟಿತು.

ಅಷ್ಟೊತ್ತಿಗೆ ತಮ್ಮ ಎಲ್ಲಾ ಉಳಿತಾಯದ ಹಣ ವ್ಯಯವಾಗಿದ್ದರಿಂದ ಎರಡು ವರ್ಷಗಳ ಕಾಲ ವಿಘ್ನೇಶ್ ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಯಿತು. ಉಪಾಯಗಾಣದೆ ರ‍್ಯಾಪಿಡೋನಲ್ಲಿ ಅರೆಕಾಲಿಕ ರೈಡರ್ ಆಗಿ ಸೇರಿಕೊಂಡರು. ಈ ವಿಷಯ ತಾಯಿಗೆ ಸಂಕಟ ತರಬಹುದೆಂದು ಅವರಿಂದ ಮರೆಮಾಚಿದರು.

ವಿಘ್ನೇಶ್​ ನಿರ್ದೇಶನದ ಮಿನಿಸೀರೀಸ್ ಲಿಂಕ್​ ಮೇಲಿನ ಈ ಥ್ರೆಡ್​ನಲ್ಲಿದೆ ನೋಡಿ. ಆನ್​ಲೈನ್​ನಲ್ಲಿ ಈ ಥ್ರೆಡ್​ ಸಾಕಷ್ಟು ಪ್ರತಿಕ್ರಿಯೆಗಳಿಂದ ತುಂಬಿ ತುಳುಕುತ್ತಿದೆ.

ಕಾಲನ ಹೊಡೆತದಿಂದಾಗಿ ಬದುಕು ಹೀಗೆ ಏರಿಳಿತವಾಗುವುದು ಸಹಜ. ಆದರೆ ಸ್ವಾಭಿಮಾನದಿಂದ, ಶ್ರಮದಿಂದ ಬದುಕುವಂಥ ಮತ್ತು ತಮ್ಮ ಕನಸುಗಳನ್ನು ಬದಿಗಿಟ್ಟು ಕುಟುಂಬಕ್ಕಾಗಿ ದುಡಿಯುತ್ತಿರುವ ಇಂಥ ಎಷ್ಟೋ ಜನರು ನಮ್ಮ ನಡುವೆ ಇದ್ದೇ ಇದ್ದಾರೆ. ಪರಸ್ಪರ ಸಂವಹನ ಕೊಡುವ ಕಸುವು ಬಹಳ ದೊಡ್ಡದು. ನಿತ್ಯದ ಏಕತಾನತೆಯಲ್ಲಿ ನಮಗರಿವಿಲ್ಲದೆ ಮೌನವಾಗುವ ಅಥವಾ ಮೊಬೈಲ್​ಗಳಲ್ಲಿ ಕಳೆದುಹೋಗುವ ನಾವು ಹೀಗೆ ದಾರಿಯಲ್ಲಿ ಜೊತೆಯಾಗುವವರೊಂದಿಗೆ ನಾಲ್ಕು ಮಾತು ಮಾತನಾಡುವುದನ್ನು ರೂಢಿಸಿಕೊಂಡರೆ ಪರಸ್ಪರ ಸ್ಫೂರ್ತಿ ಕೊಡಬಹುದಲ್ಲವೆ? ಅಪರೂಪದ ಇಂಥ ವ್ಯಕ್ತಿಯನ್ನು ಪರಿಚಯಿಸಿಕೊಳ್ಳುವ, ಜಗತ್ತಿಗೆ ಪರಿಚಯಿಸುವ ಪುಣ್ಯ ನಿಮ್ಮದೂ ಆಗುವುದಲ್ಲವೆ?

ಯಾವ ಕೆಲಸವೂ ಮೇಲು ಕೀಳಲ್ಲ. ಆದರೂ ವಿದ್ಯಾರ್ಹತೆ, ಸಾಮರ್ಥ್ಯ, ಕೌಶಲ ಮತ್ತು ಆಸಕ್ತಿಗೆ ಅನುಗುಣವಾದ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಹೋದಾಗ ವ್ಯಕ್ತಿಯು ತನ್ನ ಲೈಫ್​ ಗ್ರಾಫ್​ಗೆ ತಕ್ಕಂತೆ ಸೂಕ್ತ ಬೆಳವಣಿಗೆಯ ಬೆಳಕನ್ನು ಕಾಣಬಹುದು. ಹೆಚ್ಚಿನದನ್ನು ಸಾಧಿಸಬಹುದು.

ಇರಲಿ, ಆತ್ಮವಿಶ್ವಾಸ ಮತ್ತು ಕನಸುಳ್ಳ ವ್ಯಕ್ತಿಗೆ ಬದುಕು ತಂದೆಸೆಯುವ ಯಾವ ಅನುಭವವೂ ಸೃಜನಶೀಲತೆಗೆ ದ್ರವ್ಯವೇ!

ಏನಂತೀರಿ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:48 am, Wed, 17 August 22

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್