AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೆಡ್ಡಿಂಗ್ ಗೌನ್​ನಲ್ಲಿ ಮೊದಲ ಸಲ ಮಗಳನ್ನು ನೋಡಿದಾಗ

Wedding Gown: ಇಂಥ ಭಾವುಕ ಕ್ಷಣಗಳಿಗೆ ನಿಮ್ಮಲ್ಲಿ ಅನೇಕರು ಸಾಕ್ಷಿಯಾಗಿರುತ್ತೀರಿ. ಇಂಥ ಕ್ಷಣಗಳು ಎಂದೂ ಸೃಷ್ಟಿಸಲು ಬರುವಂಥವಲ್ಲ. ತಾವಾಗೇ ಘಟಿಸುವಂಥವು. ನೋಡಿ ವಿಡಿಯೋ.

Viral Video: ವೆಡ್ಡಿಂಗ್ ಗೌನ್​ನಲ್ಲಿ ಮೊದಲ ಸಲ ಮಗಳನ್ನು ನೋಡಿದಾಗ
ಮೊದಲ ಸಲ ಮಗಳನ್ನು ವೆಡ್ಡಿಂಗ್​ ಗೌನ್​ನಲ್ಲಿ ನೋಡಿದಾಗ
TV9 Web
| Updated By: ಶ್ರೀದೇವಿ ಕಳಸದ|

Updated on:Aug 17, 2022 | 1:49 PM

Share

Father and Daughter : ಮಗಳ ಮದುವೆ ಎನ್ನುವುದು ಹೆತ್ತವರೊಳಗೆ ಹೆಪ್ಪುಗಟ್ಟುವ ವಿಚಿತ್ರ ಸಂದರ್ಭ. ಈ ಸಮಯದಲ್ಲಿ ಖುಷಿ ಎನ್ನುವುದು ಹೊರನೋಟಕ್ಕೆ ಮಾತ್ರ. ಒಳಉಕ್ಕುವ ವಿಷಾದವನ್ನು ಅವರವರೇ ಅನುಭವಿಸಬೇಕು. ಅಷ್ಟು ವರ್ಷ ಎದೆಗಂಟಿಸಿಕೊಂಡು ಬೆಳೆಸಿದ ಮಗಳನ್ನು ಇನ್ನೊಂದು ಮನೆಗೆ ಕಳಿಸಿಕೊಡುವುದನ್ನು ಸ್ವತಃ ಅರಗಿಸಿಕೊಳ್ಳಲು ಅದರಲ್ಲೂ ತಂದೆಗೆ ಬಹಳೇ ಕಷ್ಟ. ವಿಚಿತ್ರ ಆತಂಕ, ಅಗಲಿಕೆಯ ನೋವು, ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ನೆನೆಸಿಕೊಂಡೇ ಪೋಷಕರು ನಗುನಗುತ್ತಲೇ ಒಳಗೆ ಕುಸಿಯುವುದು. ಈಗ ಇಲ್ಲಿರುವ ವಿಡಿಯೋ ನೋಡಿ. ಮಗಳು ಮದುವೆಯ ಗೌನ್​ ಧರಿಸಿ ಹೊರಬರುತ್ತಿದ್ದಂತೆ ಈ ತಂದೆಯ ಕಣ್ಣುಗಳು ಉಕ್ಕುತ್ತವೆ. ಖುಷಿಯೂ, ವಿಷಾದವೂ ಒಟ್ಟಿಗೇ ಸ್ಫುರಿಸುವ ಅಪರೂಪದ ಕ್ಷಣಗಳಿವು. ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಸುಮಾರು 18,000 ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. 1,848 ಜನರು ಇಷ್ಟಪಟ್ಟಿದ್ದಾರೆ.

ನೋಡಿ ಈ ವಿಡಿಯೋ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Mr. Talcott (@vivid.michael)

ಅನೇಕ ನೆಟ್ಟಿಗರು ಕುಟುಂಬದೊಳಗಿರುವ ಈ ಬಂಧವನ್ನು ಶ್ಲಾಘಿಸಿದ್ದಾರೆ. ಈ ಕುರಿತು ತಮ್ಮ ಅನುಭವಗಳನ್ನೂ ಪ್ರತಿಕ್ರಿಯೆಗಳ ಮೂಲಕ ಹಂಚಿಕೊಂಡಿದ್ದಾರೆ.

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 1:36 pm, Wed, 17 August 22