Viral Video: ಅಯ್ಯೋ! ಯಾರಾದ್ರೂ ಈ ಕಾಳಗವನ್ನು ನಿಲ್ಲಿಸಿ ಪ್ಲೀಸ್​

Sheeps : ಈ ವಿಶಾಲವಾದ ಹಸಿರುಮೈದಾನ, ಕುಟುಂಬಸಮೇತ ವಿಹಾರಕ್ಕೆ ಬಂದ ಹಿರಿಯರು, ಮೇಯುವಿಕೆಯಲ್ಲಿ ನಿರತರಾದ ಪ್ರತಿಯೊಬ್ಬರೂ... ಆದರೆ ಈ ಇಬ್ಬರು ಕಿರಾತಕರು ಮಾತ್ರ!

Viral Video: ಅಯ್ಯೋ! ಯಾರಾದ್ರೂ ಈ ಕಾಳಗವನ್ನು ನಿಲ್ಲಿಸಿ ಪ್ಲೀಸ್​
ಕಾಳಗದಲ್ಲಿ ನಿರತ ಜಟ್ಟಿಗಳು!
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 17, 2022 | 4:22 PM

Sheep Video : ಪ್ರಾಣಿಗಳ ಮರಿಗಳು ಆಟವಾಡುವ ಅನೇಕ ವಿಡಿಯೋಗಳನ್ನು ನೋಡಿದ್ದೀರಿ. Fjord garden ಪೋಸ್ಟ್ ಮಾಡಿರುವ ಈ ವಿಡಿಯೋ ನೋಡಿ, ಎರಡು ಕುರಿಮರಿಗಳು ಎಂಥ ತೀವ್ರವಾದ ಗುದ್ದಾಟದಲ್ಲಿ ತೊಡಗಿದ್ದಾವೆ ಎಂದು. ಒಂದು ಮರಿ ತಲೆಯಿಂದ ಎಷ್ಟೇ ಗುದ್ದಿದರೂ ಇನ್ನೊಂದು ಮರಿ ಕದಲದೇ ಗಟ್ಟಿಯಾಗಿ ನಿಲ್ಲುತ್ತದೆ. ಸಾವಿರಾರು ಜನ ತಮ್ಮ ಈ ಗುದ್ದಾಟದ ಪ್ರದರ್ಶನವನ್ನು ನೋಡುತ್ತಿದ್ದಾರೇನೋ ಎನ್ನುವಂತೆ ಗಂಭೀರವಾಗಿ ತೊಡಗಿಕೊಂಡಿವೆ. ಹಸಿರು ಹುಲ್ಲಿನ ಈ ವಿಶಾಲ ಬಯಲಿನಲ್ಲಿ ಉಳಿದ ದೊಡ್ಡ ಕುರಿಗಳು ತಮ್ಮ ಪಾಡಿಗೆ ತಾವು ಮೇಯುತ್ತಿವೆ. ಈ ಸಣ್ಣಕುರಿಗಳು ಬಹಳ ಕಿಡಿಗೇಡಿ ಇರಬಹುದು. ಅವುಗಳ ಗುದ್ದಾಟ ನೋಡಿ ನೋಡಿ ಸಾಕಾಗಿ ಅವು ಬೇಸರದಿಂದ ನಿರ್ಲಕ್ಷಿಸಿರಬಹುದು.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Fjord garden (@fjordgarden_)

ನೆಟ್ಟಿಗರು ಈ ವಿಡಿಯೋವನ್ನು ಆನಂದಿಸುತ್ತ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:55 pm, Wed, 17 August 22