AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊಟ್ಟುಪಡೆಯುವ ಪ್ರೀತಿ ಎಂದರೇನು? ಈ ದಿವ್ಯಕ್ಷಣಗಳನ್ನು ಮನದುಂಬಿಕೊಳ್ಳಿ

Grandfather and Granddaughter : ಈ ಮಾಗಿದಜೀವ ಮತ್ತು ಪುಟ್ಟಜೀವದ ಮಧ್ಯೆ ಇರುವ ವಯಸಿನ ಅಂತರ ಕೇವಲ 97. ಕಳೆದ 17 ಗಂಟೆಗಳ ಹಿಂದೆ ಪೋಸ್ಟ್ ಮಾಡಲಾದ ಅನನ್ಯ ಕ್ಷಣಗಳ ವಿಡಿಯೋ ನೋಡಿದವರು ಸುಮಾರು 2 ಲಕ್ಷ ನೆಟ್ಟಿಗರು.

Viral Video: ಕೊಟ್ಟುಪಡೆಯುವ ಪ್ರೀತಿ ಎಂದರೇನು? ಈ ದಿವ್ಯಕ್ಷಣಗಳನ್ನು ಮನದುಂಬಿಕೊಳ್ಳಿ
ನನ್ನ ಅಜ್ಜಾ...
TV9 Web
| Updated By: ಶ್ರೀದೇವಿ ಕಳಸದ|

Updated on:Aug 17, 2022 | 2:42 PM

Share

Grandfather and Granddaughter : ಮನುಷ್ಯ ಕೊನೆತನಕವೂ ಹಂಬಲಿಸುವುದು ಪ್ರೀತಿಗೇ. ಬದುಕು ಕಟ್ಟಿಕೊಳ್ಳುವ ಭರದಲ್ಲಿ ಪ್ರೀತಿ ಎನ್ನುವುದು ಬೇರೆ ಬೇರೆ ಸಂಬಂಧಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ಕ್ರಮೇಣ ದೊಡ್ಡದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿ ನಿಲ್ಲುತ್ತದೆ. ಹಾಗಾಗಿ ಎಲ್ಲ ಸಂಬಂಧಗಳೂ ಪ್ರೀತಿಯ ನಿಜವಾದ ಅರ್ಥವನ್ನು ಅನುಭವಕ್ಕೆ ತರುತ್ತವೆ ಎನ್ನುವುದನ್ನು ಕ್ವಚಿತ್ತಾಗಿ ಹೇಳಲಾಗುವುದಿಲ್ಲ. ಆದರೆ ಎಲ್ಲ ಸಂಬಂಧಗಳಿಗಿಂತ ಮಿಗಿಲಾದ ನಿಜವಾದ ಬಂಧವೆಂದರೆ ಅಜ್ಜ/ಅಜ್ಜಿ ಮತ್ತು ಮೊಮ್ಮಕ್ಕಳ ನಿರ್ಮಲ ಪ್ರೇಮ. ಕೊಟ್ಟುಪಡೆಯುವ ಪ್ರೀತಿಯೊಂದೇ ಈ ಸಂಬಂಧದ ಗುರಿ. ಅಜ್ಜನೋ ಅಜ್ಜಿಯೋ ಅವರ ಒಡನಾಟಕ್ಕೆ ಬಿದ್ದ ಯಾರಿಗೂ ಈ ಅನುಭವ ದಕ್ಕಿಯೇ ದಕ್ಕಿರುತ್ತದೆ; ನೆರಿಗೆ ಬಿದ್ದ ಕೈಗಳ ಮೃದುತ್ವ, ಕಣ್ಣು ಸೂಸುವ ಅಂತಃಕರಣ, ಸಾತ್ವಿಕ ಸ್ಪರ್ಶ, ಆಪ್ತಮಾತು, ಭದ್ರಭಾವ… ಬಹುಶಃ ಈ ನೆನಪನ್ನೇ ಮನುಷ್ಯ ಬದುಕಿನುದ್ದಕ್ಕೂ ಹುಡುಕುತ್ತ ಹೋಗುತ್ತಾನೆ. ಶುದ್ಧ ಪ್ರೀತಿ ನೀಡುವಿಕೆ ಮತ್ತು ಪಡೆಯುವಿಕೆ ಸಾಧ್ಯವಾಗುವ ನಿಜವಾದ ಕ್ಷಣಗಳು ಹೇಗಿರುತ್ತವೆ? ಈ ವಿಡಿಯೋ ನೋಡಿ, ಅಜ್ಜ ಮೊಮ್ಮಗಳ ಮಧ್ಯೆ ಇರುವ ವಯಸಿನ ಅಂತರ ಬರೀ 97!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Good News Movement (@goodnews_movement)

ಈ ವಿಡಿಯೋ 1.82 ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. 1.83 ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಇಂಥ ಆರ್ದ್ರ ಗಳಿಗೆಗಳನ್ನು ಪ್ರತಿಕ್ರಿಯೆಗಳ ಮೂಲಕ ಮೆಲುಕು ಹಾಕಿದ್ದಾರೆ. ಕ್ಷಣ ಜಗತ್ತೇ ಮರೆತು ಹೋಗುವಂಥ ಈ ವಿಡಿಯೋ ನೋಡುತ್ತಾ ನಿಮಗೇನನ್ನಿಸುತ್ತಿದೆ?

ಮತ್ತಷ್ಟು ಇಂತ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:36 pm, Wed, 17 August 22