Viral Video: ಯಾರಿಗೆ ಹೇಳೋಣ ಕುಳ್ಳಿಯರ ಪ್ರಾಬ್ಲಮ್, ನಮ್ಮ ಗೋಳು ಕೇಳೋರು ಯಾರೂ ಇಲ್ವಾ?

ಜೆರಾಕ್ಸ್ ಶಾಪ್‌ಗೆ ಹೋದರೆ ಮಗು ಎಂಟನೇ ಕ್ಲಾಸ್ ಪುಸ್ತಕದ ಜೆರಾಕ್ಸ್ ಬೇಕಾ ಎಂದು ಕೇಳೋದಾ, ಎಂದು ತನ್ನ ಪ್ರಾಬ್ಲಮ್‌ಗಳನ್ನು ಹೇಳಿಕೊಳ್ಳುತ್ತಿರುವ ಕುಳ್ಳಗಿನ ಹುಡುಗಿಯ ತಮಾಷೆ ವಿಡಿಯೊ ಇಲ್ಲಿದೆ. ಈ ಕುಳ್ಳಗಿರೋ ಹುಡುಗಿಯರ ಸಮಸ್ಯೆಗಳು ಒಂದಲ್ಲಾ ಎರಡಲ್ಲ.

Viral Video: ಯಾರಿಗೆ ಹೇಳೋಣ ಕುಳ್ಳಿಯರ ಪ್ರಾಬ್ಲಮ್, ನಮ್ಮ ಗೋಳು ಕೇಳೋರು ಯಾರೂ ಇಲ್ವಾ?
ವೈರಲ್ ವಿಡಿಯೊ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 27, 2023 | 6:55 PM

ಜೆರಾಕ್ಸ್ ಶಾಪ್‌ಗೆ ಹೋದರೆ ಮಗು ಎಂಟನೇ ಕ್ಲಾಸ್ ಪುಸ್ತಕದ ಜೆರಾಕ್ಸ್ ಬೇಕಾ ಎಂದು ಕೇಳೋದಾ, ಎಂದು ತನ್ನ ಪ್ರಾಬ್ಲಮ್‌ಗಳನ್ನು ಹೇಳಿಕೊಳ್ಳುತ್ತಿರುವ ಕುಳ್ಳಗಿನ ಹುಡುಗಿಯ ತಮಾಷೆ ವಿಡಿಯೊ ಇಲ್ಲಿದೆ. ಈ ಕುಳ್ಳಗಿರೋ ಹುಡುಗಿಯರ ಸಮಸ್ಯೆಗಳು ಒಂದಲ್ಲಾ ಎರಡಲ್ಲ. ಎಲ್ಲರಿಂದಲೂ ಮಗು ಮಗು ಅಂತಾ ಕರೆಸಿಕೊಳ್ಳುವ ಅವರಿಗೆ ವಯಸ್ಸು ಎಷ್ಟೇ ಆಗಿದ್ದರೂ ನೋಡಿದವರು ಅವರನ್ನು ಮಗು ಅಂತಾನೇ ಕೂಗಿ ಕರೆಯುತ್ತಾರೆ. ಕುಳ್ಳಗಿರುವ ಹುಡುಗಿಯರು ಕಾಲೇಜ್ ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದರೂ, ಮಗು ನೀನು ಎಷ್ಟನೇ ಕ್ಲಾಸ್ ಎಂದು ಕೇಳುವವರೂ ಇದ್ದಾರೆ. ಇನ್ನೂ ಈ ಶಾರ್ಟ್ ಹುಡುಗಿಯರ ಸ್ನೇಹಿತರಂತೂ ಅವರಿಗೆ ಕಿಚಾಯಿಸುತ್ತಲೇ ಇರುತ್ತಾರೆ. ನೀನು ಕೆಂಪು ಸೀರೆ ಉಡಬೇಡ ಜನಗಳು ಗ್ಯಾಸ್ ಸಿಲಿಂಡರ್ ಓಡಾಡುತ್ತಿದೆ ಎಂದು ಗಾಬರಿ ಪಡುತ್ತಾರೆ ಎಂದು ಹೇಳಿ ಕುಳ್ಳಗಿನ ಹುಡುಗಿಯರ ಕಾಲೆಳೆಯುತ್ತಾರೆ. ಆದರೂ ಈ ಕುಳ್ಳಗಿನ ಹುಡುಗಿಯರು ಸ್ಕೂಲ್ ಮಕ್ಕಳಂತೆ ಕ್ಯೂಟ್ ಆಗಿ ಕಾಣಿಸುತ್ತಾರೆ. ಇವರು ಎಷ್ಟೇ ಕ್ಯೂಟ್ ಇದ್ದರೂ ನಾನು ಯಾಕೆ ಇಷ್ಟೊಂದು ಕುಳ್ಳಗಿದ್ದೇನೆ ಇನ್ನು ಚೂರು ಎತ್ತರ ಇರಬೇಕಿತ್ತಲ್ವಾ ಎಂದು ಕೊರಗುತ್ತಿರುತ್ತಾರೆ.

ಇದೇ ರೀತಿ ನಕ್ಕು ನಗಿಸುವಂತಹ ಒಬ್ಬ ಕುಳ್ಳಿ ಹುಡುಗಿಯು ತನಗಾದ ಸಮಸ್ಯೆಯನ್ನು ತಮಾಷೆಯಾಗಿ ಹೇಳಿಕೊಳ್ಳುವ ವೀಡಿಯೋ ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಹುಡುಗಿ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನ್ನು ಆರಂಭಿಸುತ್ತಾ ಮೊನ್ನೆ ತಾನೇ ನಾನು ಜೆರಾಕ್ಸ್ ಶಾಪ್‌ಗೆ ಹೋಗಿದ್ದೆ, ಅಲ್ಲಿದ್ದವನು ಮಗು ನಿನಗೆ ಏನು ಎಂಟನೇ ಕ್ಲಾಸ್ ಪುಸ್ತಕದ ಜೆರಕ್ಸ್ ಬೇಕಾ ಎಂದು ಕೇಳೋದಾ, ನಾನು ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದೆ. ಇನ್ನೊಂದೆನಂದ್ರೆ ನನ್ನ ಜೊತೆಗಿದ್ದವರಿಗೆಲ್ಲಾ ಮದುವೆಯಾಗಿ ಅವರಿಗೆ ಮಕ್ಕಳಾಗಿ ಆ ಮಕ್ಕಳೆಲ್ಲಾ ನನ್ನ ಎತ್ತರಕ್ಕೆ ಬೆಳೆದು ನಿಂತಿವೆ.

View this post on Instagram

A post shared by Mr_Babalu? (@ab_creation.s_)

ಆದ್ರೆ ನನ್ನ ಒಬ್ಬನೂ ಕೂಡಾ ಕಣ್ಣೆತ್ತಿ ನೋಡಿಲ್ಲ. ನನ್ನನ್ನು ಕಣ್ಣೆತ್ತಿ ಯಾರು ನೋಡುತ್ತಾರೆ, ಕಣ್ಣು ತಲೆ ಬಗ್ಗಿಸಿಯೇ ನೋಡಬೇಕು ಯಾಕಂದ್ರೆ ನಾನು ಅಷ್ಟು ಕುಳ್ಳಗಿದ್ದೇನೆ ಎಂದು ಹೇಳುತ್ತಾಳೆ. ಈ ವಿಡಿಯೊದಲ್ಲಿ ಆಕೆಯ ಮಾತು ಕೇಳಿದರೆ ನಗು ಬರುವುದಂತೂ ಖಂಡಿತ.

ಇದನ್ನೂ ಓದಿ: Viral Video: ಪ್ಲೀಸ್ ಮಮ್ಮಿ ನಮಗೆ ನಿಮ್ಮ ಒಂದು ಮಗುವನ್ನು ಕೊಡಿ ಎಂದು ಅಂಗಲಾಚಿದ ಪುಟ್ಟ ಬಾಲಕ

ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ತಮಾಷೆಯ ವಿಡಿಯೊ 1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಲೈಕ್ಸ್ ಮತ್ತು ಕಮೆಂಟ್‌ಗಳನ್ನು ಈ ವೀಡಿಯೋ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಯಾರಿಗೇಳೋಣ ನಮ್ಮ ಪ್ರಾಬ್ಲಮ್ಮು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ವೆಲ್‌ಕಮ್ ಟು ಶಾರ್ಟ್ ಗರ್ಲ್ಸ್ ಟೀಮ್ ಎಂದು ತಮಾಷೆಗೆ ಕಮೆಂಟ್ ಮಾಡಿದ್ದಾರೆ.

Published On - 6:54 pm, Mon, 27 February 23