Viral Video: ಹುಂಜ ಹಿಡಿಯಲು ಹೋಗಿ ಚಿರತೆ ಬೋನಿಗೆ ಬಿದ್ದ ಭೂಪ, ಅಯ್ಯೋ ಕಾಪಾಡಿ ಸರ್

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಬೋನಿಗೆ ಬಿದ್ದ ಆ ವ್ಯಕ್ತಿ ಅರಣ್ಯ ಅಧಿಕಾರಿಗಳಲ್ಲಿ ಇಲ್ಲಿಂದ ನನ್ನನ್ನು ಹೊರಗೆ ಕರೆದುಕೊಂಡು ಹೋಗಿ ಎಂದು ಕೇಳುತ್ತಿರುವಂತೆ ತೋರುತ್ತದೆ.

Viral Video: ಹುಂಜ ಹಿಡಿಯಲು ಹೋಗಿ ಚಿರತೆ ಬೋನಿಗೆ ಬಿದ್ದ ಭೂಪ, ಅಯ್ಯೋ ಕಾಪಾಡಿ ಸರ್
ವೈರಲ್ ವಿಡಿಯೊ
Follow us
|

Updated on:Feb 27, 2023 | 4:02 PM

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಬೋನಿಗೆ ಬಿದ್ದ ಆ ವ್ಯಕ್ತಿ ಅರಣ್ಯ ಅಧಿಕಾರಿಗಳಲ್ಲಿ ಇಲ್ಲಿಂದ ನನ್ನನ್ನು ಹೊರಗೆ ಕರೆದುಕೊಂಡು ಹೋಗಿ ಎಂದು ಕೇಳುತ್ತಿರುವಂತೆ ತೋರುತ್ತದೆ. ಚಿರತೆಯ ಕಾಟ ಹೆಚ್ಚಾಗಿದ್ದ ಹಳ್ಳಿಯೊಂದರಲ್ಲಿ ಅಳವಡಿಸಲಾಗಿದ್ದ ಲೋಹದ ದೊಡ್ಡ ಬೋನಿನೊಳಗೆ ಚಿರತೆಯ ಬದಲಿಗೆ ಒಬ್ಬ ವ್ಯಕ್ತಿಯು ಸೆರೆಯಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದರ್‌ಶರ್‌ನ ಹಳ್ಳಿಯೊಂದರಲ್ಲಿ ನಡೆದಿದೆ. ಈ ಘಟನೆಯನ್ನು ಚಿತ್ರೀಕರಿಸಲಾದ ವೀಡಿಯೋದಲ್ಲಿ ಆ ವ್ಯಕ್ತಿ ಬೋನಿನ ಹಸಿರು ಬಾರ್‌ಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅರಣ್ಯ ಅಧಿಕಾರಿಗಳನ್ನು ನನ್ನನ್ನು ಬೋನಿಂದ ಹೊರಗೆ ಕರೆದುಕೊಂಡು ಹೋಗುವಂತೆ ಕೇಳಿಕೊಳ್ಳುವುದನ್ನು ಈ ವಿಡಿಯೊದಲ್ಲಿ ಕಾಣಬಹುದು. ಚಿರತೆಗಾಗಿ ಬಲೆ ಬೀಸಲೆಂದು ಇರಿಸಿದ ಬೋನಿನೊಳಗೆ ಹುಂಜವೊಂದು ಸೇರಿಕೊಂಡಿತ್ತು. ಆ ಹುಂಜವನ್ನು ಹಿಡಿಯಲು ವ್ಯಕ್ತಿಯೊಬ್ಬ ಬೋನಿನೊಳಗೆ ಹೋಗಿದ್ದಾನೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ. ಆ ವ್ಯಕ್ತಿ ಬೋನಿನೊಳಗೆ ಇದ್ದ ಹುಂಜವನ್ನು ತೆಗೆಯಲು ಪ್ರಯತ್ನಿಸಿದ್ದ ತಕ್ಷಣವೇ ಬೋನಿನ ಬಾಗಿಲು ಮುಚ್ಚಿದೆ ಎಂದು ಸ್ಥಳೀಯ ವರದಿಗಳು ಹೇಳುತ್ತವೆ.

ಚಿರತೆ ಸ್ಥಳೀಯವಾಗಿ ತಿರುಗಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ದೊರೆತ ನಂತರ ನಾವು ಚಿರತೆಯನ್ನು ಹಿಡಿಯಲು ಬೋನನ್ನು ಇಟ್ಟಿದ್ದೇವೆ. ಈ ಬೋನನ್ನು ಇರಿಸುವ ಮೊದಲು ಸ್ವಲ್ಪ ಸಮಯ ಚಿರತೆಗಾಗಿ ಹುಡುಕಾಟ ಕೂಡಾ ನಡೆಸಿದ್ದೇವೆ’ ಎಂದು ಅರಣ್ಯ ಇಲಾಖೆಯ ಅದಿಕಾರಿ ರಾಧೇಶ್ಯಾಮ್ ANI ತಿಳಿಸಿದೆ.

ಈ ಘಟನೆಯ ವೀಡಿಯೋವನ್ನು ANI ಉತ್ತರಖಂಡ ಸುದ್ದಿ ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಚಿರತೆಗಳು ಮತ್ತು ಇತರ ಕಾಡು ಪ್ರಾಣಿಗಳು ಹಳ್ಳಿಗಳು ಮತ್ತು ನಗರಗಳಲ್ಲಿ ಅಲೆದಾಡುವುದು ಸಾಮಾನ್ಯವಾಗಿದೆ. ಇತ್ತೀಚಿಗಷ್ಟೇ ಯುಪಿಯ ಗಾಜಿಯಾಬಾದ್‌ನ ನ್ಯಾಯಾಲಯದ ಆವರಣಕ್ಕೆ ಚಿರತೆಯೊಂದು ನುಗ್ಗಿದ ಘಟನೆ ನಡೆದಿದೆ. ಹಾಗೂ ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಇದೀಗ ಚಿರತೆ ಸೆರೆ ಸಿಕ್ಕಿದೆ ಎಂದು ಹೇಳಿದ್ದಾರೆ.

Published On - 4:02 pm, Mon, 27 February 23

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು