ಜನರು ಅರಾಮವಾಗಿ ಪ್ರಯಾಣ ಮಾಡುತ್ತಿದ್ದ ರೈಲು ಅರಣ್ಯ ಪ್ರದೇಶವೊಂದರಲ್ಲಿ ನಿಲ್ಲಿಸಿದೆ. ಜನರು ಏನಾಯ್ತು ಎಂದು ಹೊರನೋಡಿದಾಗ ಇಡೀ ಕಾಡಿಗೇ ಕಾಡು ಧಗಧಗ ಎಂದು ಹೊತ್ತಿ ಉರಿಯುತ್ತಿತ್ತು. ಇದನ್ನು ಕಂಡ ಪ್ರಯಾಣಿಕರು ಗಾಬರಿಗೊಂದಿದ್ದಾರೆ. ಈ ದೃಶ್ಯಾವಳಿಯಲ್ಲಿ ಮೊಬೈಲ್ ಕ್ಯಾಮರಾದ ಮೂಲಕ ಸೆರೆಹಿಡಿಯಲಾಗಿದ್ದು, ಸದ್ಯ ಕಾಡು ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗುತ್ತಿದೆ. ರೈಲಿನ ಒಳಗಿಂದ ಜನರು ಕಾಡಿಗೆ ಬೆಂಕಿ ಹತ್ತಿಕೊಂಡಿರುವುದನ್ನು ನೋಡಿ ಗಾಬರಿಗೊಂಡಿರುವುದನ್ನು ವೈರಲ್ ವಿಡಿಯೋ (Viral Video) ತೋರಿಸುತ್ತದೆ.
ಝಮೊರಾ ವಾಯುವ್ಯ ಪ್ರಾಂತ್ಯದ ಟ್ರ್ಯಾಕ್ ಬಳಿ ಕಾಡಿಗೆ ಬೆಂಕಿ ಹತ್ತಿಕೊಂಡು ಬೆಂಕಿಯ ಜ್ವಾಲೆ ಮೇಲಕ್ಕೆ ಚಿಮ್ಮಿದೆ. ಈ ವೇಳೆ ಮ್ಯಾಡ್ರಿಡ್‌ನಿಂದ ಫೆರೋಲ್‌ಗೆ ಹೋಗುತ್ತಿದ್ದ ರೈಲು ಕಾಡಿನ ಮಧ್ಯೆ ಸಿಲುಕಿಕೊಂಡಿದ್ದು, ಕಾಡ್ಗಿಚ್ಚು ರೈಲನ್ನು ಸುತ್ತುವರಿದಿರುವುದನ್ನು ನೋಡಿ ಪ್ರಯಾಣಿಕರು ಗಾಬರಿಗೊಂಡರು. ಕೆಲವರು ಉದ್ವಿಗ್ನ ಕ್ಷಣದ ದೃಶ್ಯಾವಳಿಗಳನ್ನು ಮೊಬೈಲ್ ಮೂಲಕ ಸೆರೆಹಿಡಿದರು.
ವೈರಲ್ ವಿಡಿಯೋದಲ್ಲಿ ಇರುವಂತೆ, ಕ್ಯಾಮರಾವನ್ನು ಬಲಭಾಗಕ್ಕೆ ಕೊಂಡೊಯ್ದಾಗ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿದೆ. ಅದೇ ಕ್ಯಾಮರಾವನ್ನು ಎಡಭಾಗಕ್ಕೆ ಕೊಂಡೊಯ್ದಾಗಲೂ ಅದೇ ಮಾದರಿಯಲ್ಲಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿಯುವುದನ್ನು ಕಾಣಬಹುದು.
Momentos de pánico en el tren Madrid-Ferrol a la altura de Zamora-Sanabria, 9:30hs. El tren continuó el trayecto tras unos minutos parado. @renfe @adif @lavozdegalicia pic.twitter.com/YXcuBXlIJQ
— Francisco Seoane Pérez (@PacoSeoanePerez) July 18, 2022
ಘಟನೆ ಬಗ್ಗೆ ಅರಿತ ರೈಲ್ವೇ ಇಲಾಖೆ, ಬೆಂಕಿಯ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ಜೊತೆಗೆ ಒಟೆರೊ ಡಿ ಬೋಡಾಸ್ ಮತ್ತು ಝಮೊರಾ ನಡುವಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೂಚಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೂಲ ನಿಲ್ದಾಣಗಳಿಂದ ಈಗಾಗಲೇ ನಿರ್ಗಮಿಸಿದ ರೈಲು ಪ್ರಯಾಣಿಕರಿಗಾಗಿ ಝಮೊರಾ ಮತ್ತು ಸನಾಬ್ರಿಯಾ AV ನಿಲ್ದಾಣಗಳ ನಡುವೆ ಪರ್ಯಾಯ ರಸ್ತೆ ಸಾರಿಗೆ ಸೇವೆಯನ್ನು ಆಯೋಜಿಸಿದೆ ಎಂದು ರೆನ್ಫೆ ಟ್ವೀಟ್ ಮಾಡಿದೆ.
ಉತ್ತರ ಭಾರತ, ಪಾಕಿಸ್ತಾನವನ್ನು ಕಾಡಿದ್ದ ಶಾಖದ ಅಲೆ ಯುರೋಪ್ಗೂ ಕಾಲಿಟ್ಟಿದ್ದು, ಫ್ರಾನ್ಸ್, ಪೋರ್ಚುಗಲ್, ಸ್ಪೇನ್ ಮತ್ತು ಗ್ರೀಸ್ನಲ್ಲಿ ಕಾಡಿಗೆ ಬೆಂಕಿ ಹತ್ತಿಕೊಂಡಿದೆ. ಕಾಡ್ಗಿಚ್ಚಿಗೆ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶಗಳು ನಾಶವಾಗಿವೆ. ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ದಳದ ಹಲವು ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಹವಾಮಾನ ಬದಲಾವಣೆಯೇ ಈ ದುರ್ಘಟನೆಗೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದು, ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುವ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸ್ಪೇನ್ನಲ್ಲಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚನ ತಾಪಮಾನ ದಾಖಲಾಗಿದ್ದು, ಶಾಖದ ಅಲೆಯಿಂದಾಗಿ ಕನಿಷ್ಠ 360 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರಿ ಕಾರ್ಲೋಸ್ ಹೆಲ್ತ್ ಇನ್ಸ್ಟಿಟ್ಯೂಟ್ ಅನ್ನು ಉಲ್ಲೇಖಿಸಿ ಲಾ ವ್ಯಾನ್ಗಾರ್ಡಿಯಾ ಪತ್ರಿಕೆ ವರದಿ ಮಾಡಿದೆ.
Published On - 12:16 pm, Tue, 19 July 22