AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಜನ ನನ್ನನ್ನು ಮಾತ್ರವಲ್ಲದೆ ನನ್ನ ಹೆಂಡತಿಯರನ್ನೂ ಪ್ರೀತಿಸ್ತಾರೆ; ವೈರಲ್ ಆಯ್ತು ಬಿಜೆಪಿ ನಾಯಕನ ಹೇಳಿಕೆ

ಸಾಮ್ರಾಟ್ ಮೌರ್ಯ ಅವರ ಇಬ್ಬರು ಪತ್ನಿಯರು ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಮೂರನೇ ಹೆಂಡತಿಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇತ್ತು. ಆದರೆ, ಸಾಧ್ಯವಾಗಲಿಲ್ಲ.

Viral News: ಜನ ನನ್ನನ್ನು ಮಾತ್ರವಲ್ಲದೆ ನನ್ನ ಹೆಂಡತಿಯರನ್ನೂ ಪ್ರೀತಿಸ್ತಾರೆ; ವೈರಲ್ ಆಯ್ತು ಬಿಜೆಪಿ ನಾಯಕನ ಹೇಳಿಕೆ
ಮೂವರು ಪತ್ನಿಯರ ಜೊತೆ ಸಾಮ್ರಾಟ್ ಮೌರ್ಯImage Credit source: Zee News
TV9 Web
| Edited By: |

Updated on: Jul 19, 2022 | 3:07 PM

Share

ಭೂಪಾಲ್: ಮೂವರು ಹೆಂಡಿರ ಮುದ್ದಿನ ಗಂಡನಾಗಿರುವ ಬಿಜೆಪಿ ನಾಯಕರೊಬ್ಬರ (BJP Leader) ಇಬ್ಬರು ಪತ್ನಿಯರೂ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಮಧ್ಯಪ್ರದೇಶದ (Madhya Pradesh) ಅಲಿರಾಜ್‌ಪುರದ ನಾನ್‌ಪುರ್‌ ಗ್ರಾಮದ ಮಾಜಿ ಪಂಚಾಯತ್‌ ಅಧ್ಯಕ್ಷ ಸಾಮ್ರಾಟ್ ಮೌರ್ಯ ಅವರು ತಮ್ಮ ಇಬ್ಬರು ಪತ್ನಿಯರನ್ನು ಪಂಚಾಯಿತಿ ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ ಸುದ್ದಿಯಾಗಿದ್ದಾರೆ. ಅವರ ಇಬ್ಬರು ಹೆಂಡತಿಯರೂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಈ ವೇಳೆ ಅವರು ಮಾಡಿರುವ ಭಾಷಣ ವೈರಲ್ ಆಗಿದೆ.

ಸಾಮ್ರಾಟ್ ಮೌರ್ಯ ಅವರ ಇಬ್ಬರು ಪತ್ನಿಯರು ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಮೂರನೇ ಹೆಂಡತಿಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಇತ್ತು. 35 ವರ್ಷದ ಸಾಮ್ರಾಟ್ ಮೌರ್ಯ ತಮ್ಮ ಮೂರನೇ ಪತ್ನಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸಿದ್ದರು. ಆದರೆ ಅದಕ್ಕಾಗಿ ಮೌರ್ಯ ಅವರ ಹೆಂಡತಿ ನಾನಿ ಶಿಕ್ಷಣ ಇಲಾಖೆಯಲ್ಲಿ ಪ್ಯೂನ್ ಆಗಿ ಕೆಲಸ ಮಾಡುವುದನ್ನು ಬಿಡಬೇಕಾಗಿತ್ತು. ಆದರೆ, ಅವರು ಸರ್ಕಾರಿ ಕೆಲಸ ಬಿಡುವು ಮೌರ್ಯ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ, ಅವರು ತಮ್ಮ ಮೂರನೇ ಹೆಂಡತಿಯನ್ನು ಚುನಾವಣೆಗೆ ನಿಲ್ಲಿಸಲಿಲ್ಲ.

ಇದನ್ನೂ ಓದಿ: Viral News: 15 ವರ್ಷದ ಬಾಲಕಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿದ್ಯುತ್ ಟವರ್ ಏರಿ ಕುಳಿತ ಭೂಪ!

ತನ್ನ ಇಬ್ಬರು ಪತ್ನಿಯರನ್ನು ಗೆಲ್ಲಿಸಿದ್ದಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಾಮ್ರಾಟ್ ಮೌರ್ಯ ತನ್ನ ಮೂವರು ಪತ್ನಿಯರೊಂದಿಗೆ ಮನೆ-ಮನೆಗೆ ತೆರಳುತ್ತಿದ್ದಾರೆ. ಇಬ್ಬರು ಪತ್ನಿಯರು ಚುನಾವಣೆಯಲ್ಲಿ ಗೆದ್ದ ನಂತರ ಮಾತನಾಡಿರುವ ಸ್ಥಳೀಯ ಬಿಜೆಪಿ ನಾಯಕ ಸಾಮ್ರಾಟ್, ನನಗೆ ತುಂಬಾ ಸಂತೋಷವಾಗಿದೆ. ಇಲ್ಲಿನ ಜನರು ನನ್ನನ್ನು ಮತ್ತು ನನ್ನ ಹೆಂಡತಿಯರನ್ನು ತುಂಬಾ ಪ್ರೀತಿಸುತ್ತಾರೆ. ಅವರ ಆಶೀರ್ವಾದದಿಂದ ನನ್ನ ಹೆಂಡತಿಯರು ಚುನಾವಣೆಯಲ್ಲಿ ಗೆದ್ದಿದ್ದಾರೆ. ನಾನು ನನ್ನ ಮೂವರು ಹೆಂಡತಿಯರೊಂದಿಗೆ ಶಾಂತಿಯುತವಾಗಿ ವಾಸಿಸುತ್ತಿದ್ದೇನೆ. ನಾವು ಈ ಗ್ರಾಮದ ಎಲ್ಲ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗವಹಿಸುತ್ತೇವೆ ಎಂದು ಭಾಷಣ ಮಾಡಿದ್ದಾರೆ.

ಇಬ್ಬರು ಹೆಂಡತಿಯರ ಗೆಲುವಿನಿಂದ ಸಾಮ್ರಾಟ್ ಮೌರ್ಯ ತುಂಬಾ ಸಂತೋಷವಾಗಿದ್ದು, ಅವರು ಹಳ್ಳಿಯಲ್ಲಿ ಪಾರ್ಟಿಗಳನ್ನು ಮಾಡುತ್ತಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಈ ವರ್ಷ ಏಪ್ರಿಲ್ 30ರಂದು ಅಲಿರಾಜ್‌ಪುರದಿಂದ ಸುಮಾರು 14 ಕಿಮೀ ದೂರದಲ್ಲಿರುವ ನಾನ್‌ಪುರದಲ್ಲಿ ಮೂವರು ಪತ್ನಿಯರಾದ ಸಕ್ರಿ, ಮೇಲಾ ಮತ್ತು ನಾನಿ ಅವರನ್ನು ಸಾಮ್ರಾಟ್ ಮೌರ್ಯ ವಿವಾಹವಾಗಿದ್ದರು.

ಇದನ್ನೂ ಓದಿ: Viral News: ದಂಬಾಲು ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ

ಸಾಮ್ರಾಟ್ ಮೌರ್ಯ 2003ರಲ್ಲಿ ನಾನಿ, 2008ರಲ್ಲಿ ಮೇಲಾ ಮತ್ತು 2017ರಲ್ಲಿ ಸಕ್ರಿ ಅವರನ್ನು ವಿವಾಹವಾಗಿದ್ದರು. ಆದರೆ ಅಧಿಕೃತವಾಗಿ ಕಳೆದ ಏಪ್ರಿಲ್ 30ರಂದು ಮೂವರನ್ನೂ ಒಟ್ಟಿಗೇ ಮದುವೆಯಾಗಿ ಸುದ್ದಿಯಾಗಿದ್ದರು. ಸಾಮ್ರಾಟ್ ಭಿಲಾಲ ಬುಡಕಟ್ಟಿಗೆ ಸೇರಿದವರಾಗಿದ್ದಾರೆ. ಈ ಜನಾಂಗದಲ್ಲಿ ಇಂದಿಗೂ ಬಹುಪತ್ನಿತ್ವ ಆಚರಣೆಯಲ್ಲಿದೆ. ಸಾಮ್ರಾಟ್ ಮೌರ್ಯ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್