AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 15 ವರ್ಷದ ಬಾಲಕಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿದ್ಯುತ್ ಟವರ್ ಏರಿ ಕುಳಿತ ಭೂಪ!

15 ವರ್ಷದ ಹುಡುಗಿಯನ್ನು ಆ ಟವರ್ ಕೆಳಗ ಕರೆದುಕೊಂಡು ಬಂದು ನಿಲ್ಲಿಸಲಾಗಿದ್ದು, ಆಕೆ ಅವನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಅವನು ಟವರ್​ನಿಂದ ಕೆಳಗಿಳಿದಿದ್ದಾನೆ.

Viral News: 15 ವರ್ಷದ ಬಾಲಕಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ವಿದ್ಯುತ್ ಟವರ್ ಏರಿ ಕುಳಿತ ಭೂಪ!
ಪವರ್ ಕಟ್
TV9 Web
| Edited By: |

Updated on: Jul 18, 2022 | 3:04 PM

Share

ಚೆನ್ನೈ: ಇಷ್ಟಪಟ್ಟ ಹುಡುಗಿ ಸಿಗಲಿಲ್ಲವೆಂದು ಹುಡುಗರು ಏನೇನೋ ಕಸರತ್ತುಗಳನ್ನು ಮಾಡಿದ ಉದಾಹರಣೆಗಳಿವೆ. ಕೆಲವೊಮ್ಮೆ ಪ್ರೇಯಸಿ ಕೈಕೊಟ್ಟಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ಆದರೆ, ತಮಿಳುನಾಡಿನಲ್ಲಿ ವಿಚಿತ್ರವಾದ ಮತ್ತು ಆಘಾತಕಾರಿ ಘಟನೆಯೊಂದು (Shocking News) ನಡೆದಿದ್ದು, 19 ವರ್ಷದ ಯುವಕನೊಬ್ಬ 15 ವರ್ಷದ ಹುಡುಗಿಗೆ ಪ್ರಪೋಸ್ ಮಾಡಿದ್ದ. ಆದರೆ, ಆಕೆ ಆತನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಟವರ್ (Electricity Tower) ಹತ್ತಿ ಕುಳಿತಿದ್ದಾನೆ.

ಈ ಆಘಾತಕಾರಿ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಕ್ರೋಮ್‌ಪೇಟ್‌ನಲ್ಲಿ 19 ವರ್ಷದ ಯುವಕನೊಬ್ಬ ತಾಂಬರಂ ಸ್ಯಾನಿಟೋರಿಯಂ ಪ್ರದೇಶದಲ್ಲಿನ ಹೈ-ಟೆನ್ಷನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿರುವ ಆತ ರೈಲು ಸೇವೆಗಳನ್ನು ಅಸ್ತವ್ಯಸ್ತಗೊಳಿಸಿದ್ದಾನೆ. ತನ್ನ 15 ವರ್ಷದ ಪ್ರೇಯಸಿ ಮದುವೆಯಾಗಲು ಒಪ್ಪದ ಕಾರಣದಿಂದ ಆಕೆಯ ಮನವೊಲಿಸಲು ಆತ ಹೀಗೆ ಮಾಡಿದ್ದಾನೆ.

ಮೂಲಗಳ ಪ್ರಕಾರ, ಕೃಷ್ಣ ಎಂಬ ಈ ಯುವಕ ಕ್ರೋಂಪೇಟೆಯ ರಾಧಾ ನಗರದಲ್ಲಿ ವಾಸಿಸುತ್ತಿದ್ದಾನೆ. ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದ ಆತ ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಆಕೆಯ ಮನೆಗೆ ಪೇಂಟಿಂಗ್ ಮಾಡಲು ಹೋದಾಗ ಆಕೆಯ ಪರಿಚಯವಾಗಿ, ಪ್ರೀತಿ ಬೆಳೆದಿತ್ತು ಎನ್ನಲಾಗಿದೆ.

ಇದನ್ನೂ ಓದಿ: Viral News: ದಂಬಾಲು ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ

ಪೊಲೀಸರ ಪ್ರಕಾರ, ಆತನೊಂದಿಗೆ ಓಡಾಡಿಕೊಂಡಿದ್ದ ಆಕೆ ಆತ ಮದುವೆಯಾಗಲು ಪ್ರಪೋಸ್ ಮಾಡಿದಾಗ ನಿರಾಕರಿಸಿದ್ದಳು. ಇದರಿಂದ ಆಕೆಯ ಮನವೊಲಿಸುವ ಪ್ರಯತ್ನಗಳೆಲ್ಲ ವಿಫಲವಾದಾಗ, 80 ಅಡಿ ಎತ್ತರದ ದುರ್ಗಾನಗರದ ವಿದ್ಯುತ್ ಟವರ್ ಮೇಲೆ ಹತ್ತಿ ಆತ ಪ್ರತಿಭಟನೆ ನಡೆಸಿದ್ದಾನೆ. ಶುಕ್ರವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ವಿಷಯ ತಿಳಿದ ಕೂಡಲೆ ಪೊಲೀಸರು, ಅಗ್ನಿಶಾಮಕ ಇಲಾಖೆ ಮತ್ತು ರಕ್ಷಣಾ ತಂಡವು ಹದಿಹರೆಯದವರೊಂದಿಗೆ ಶಾಂತಿ ಮಾತುಕತೆ ನಡೆಸಲು ಆ ಸ್ಥಳಕ್ಕೆ ಬಂದಿದ್ದಾರೆ. ಕೂಡಲೆ ವಿದ್ಯುತ್ ಸರಬರಾಜು ನಿಗಮದ ಸಿಬ್ಬಂದಿ ವಿದ್ಯುತ್ ಅನ್ನು ಸ್ಥಗಿತಗೊಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Viral News: ಬಾಲಕನನ್ನು ಮೊಸಳೆ ನುಂಗಿದೆ ಎಂದುಕೊಂಡ ಜನ; ಹುಡುಗನ ಕಾಪಾಡಲು ಮಾಡಿದ ಪ್ಲಾನ್ ಏನು ಗೊತ್ತಾ?

ಪೊಲೀಸರು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿದ ನಂತರವೂ ಆ ಯುವಕ ಟವರ್ ಮೇಲಿಂದ ಕೆಳಗಿಳಿಯಲು ನಿರಾಕರಿಸಿದ್ದಾನೆ. ನಂತರ ಆ ಹುಡುಗಿಯನ್ನು ಆ ಟವರ್ ಕೆಳಗ ಕರೆದುಕೊಂಡು ಬಂದು ನಿಲ್ಲಿಸಲಾಗಿದ್ದು, ಆಕೆ ಅವನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಅವನು ಕೆಳಗಿಳಿದಿದ್ದಾನೆ.

ಆ ವ್ಯಕ್ತಿ ಕೆಳಗೆ ಇಳಿದ ಕೂಡಲೇ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪೊಲೀಸರು ಆತನನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 353, 447, ಮತ್ತು 506 (1) ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ