ಜರ್ಮನ್ ಶೆಫರ್ಡ್ ಶ್ವಾನವನ್ನು ಬಂಧಿಸಿದ ಬಿಹಾರ ಪೊಲೀಸರು! ಯಾಕೆ ಗೊತ್ತಾ?
ಬಿಹಾರದ ಅಬಕಾರಿ ಮತ್ತು ನಿಷೇಧ ಕಾಯಿದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಬಕ್ಸಾರ್ ಮಫಸಿಲ್ ಪೊಲೀಸರು ಜರ್ಮನ್ ಶೆಫರ್ಡ್ ಹೆಣ್ಣು ನಾಯಿಯನ್ನು ಬಂಧಿಸಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.
ಬಿಹಾರ : ಬಿಹಾರದ ಅಬಕಾರಿ ಮತ್ತು ನಿಷೇಧ ಕಾಯಿದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಬಕ್ಸಾರ್ ಮಫಸಿಲ್ ಪೊಲೀಸರು ಜರ್ಮನ್ ಶೆಫರ್ಡ್ ಹೆಣ್ಣು ನಾಯಿಯನ್ನು ಬಂಧಿಸಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ. ಜುಲೈ 6ರಂದು ಉತ್ತರ ಪ್ರದೇಶದ ಗಾಜಿಪುರದಿಂದ ಬರುತ್ತಿದ್ದ ಕಾರನ್ನು ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಕಾರಿನಲ್ಲಿ ಐಎಂಎಫ್‌ಎಲ್‌ನ ಆರು ಬಾಟಲಿಗಳು ಪತ್ತೆಯಾಗಿದ್ದವು.
ಕುಡಿದ ಅಮಲಿನಲ್ಲಿ ಇಬ್ಬರನ್ನು ಬಂಧಿಸಿ ಅಬಕಾರಿ ಕಾನೂನಿನಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವರದಿಗಳ ಪ್ರಕಾರ, ಬಿಹಾರದ ಅಬಕಾರಿ ಮತ್ತು ನಿಷೇಧ ಕಾಯ್ದೆಯ ಸೆಕ್ಷನ್ 57 ರ ಅಡಿಯಲ್ಲಿ ವಾಹನವನ್ನು ಜಪ್ತಿ ಮಾಡಲಾಗಿದೆ.
ಇವರೊಂದಿಗೆ ಸೆಕ್ಷನ್ 56(2)ರ ಅಡಿಯಲ್ಲಿ ವಾಹನದಲ್ಲಿ ಪತ್ತೆಯಾದ ಪ್ರಾಣಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫ್ರೀ ಪ್ರೆಸ್ ಜರ್ನಲ್ ಪ್ರಕಾರ, ನಾಯಿ ಇದೀಗ ಮಫಸ್ಸಿಲ್ ಪೊಲೀಸ್ ಠಾಣೆಯಲ್ಲಿದೆ. ಈ ನಾಯಿಯು ಇಂಗ್ಲಿಷ್‌ನಲ್ಲಿನ ಸೂಚನೆಗಳನ್ನು ಮಾತ್ರ ಅರ್ಥಮಾಡಿಕೊಳ್ಳುತ್ತದೆ, ಆದ್ದರಿಂದ ಅವರಿಗೆ ಸೂಚನೆ ನೀಡಲು ಸ್ಥಳೀಯ ಇಂಗ್ಲಿಷ್ ಬಲ್ಲ ಯುವಕರ ಸಹಾಯವನ್ನು ಮಾಡುತ್ತಿದ್ದರು.
Published On - 2:40 pm, Mon, 18 July 22