International Yoga Day 2022 : ನೀವು ಸರಿಯಾದ ಕ್ರಮದಲ್ಲಿ ಉಸಿರಾಡುತ್ತಿದ್ದೀರಾ?

Breathing : ಬಾಯಿಯಿಂದ ಉಸಿರಾಟ ಶುರುವಾದಾಗ ವಾತಾವರಣದಲ್ಲಿರುವ ಕಲ್ಮಶವು ಶ್ವಾಸಕೋಶವನ್ನು ಸೋಂಕಿಗೆ ಒಳಪಡಿಸುತ್ತದೆ. ಆಗ ದೇಹ ಒಟ್ಟಾರೆಯಾಗಿ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತದೆ.

International Yoga Day 2022 : ನೀವು ಸರಿಯಾದ ಕ್ರಮದಲ್ಲಿ ಉಸಿರಾಡುತ್ತಿದ್ದೀರಾ?
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 16, 2022 | 4:43 PM

International Yoga Day 2022 : ನೆನಪಿಸಿಕೊಳ್ಳಿ, ನೀವು ದೀರ್ಘ ಉಸಿರನ್ನು ಎಳೆದುಕೊಂಡಿದ್ದು ಯಾವಾಗ ಅಂತ. ಅಂದರೆ ತಾಜಾ ಗಾಳಿ ನಿಮ್ಮ ಶ್ವಾಸಕೋಶದ ಆಳಕ್ಕೆ ತಲುಪಿದ್ದು ನಿಮ್ಮ ಅನುಭವಕ್ಕೆ ಬರುವಂತೆ ಉಸಿರಾಡಿದ್ದು, ಆ ತಂಪು, ಆ ಶಾಂತ, ಸಮಾಧಾನದ ಅನುಭೂತಿ… ಈಗಲೂ ನೀವಿದನ್ನು ಅಭ್ಯಾಸ ಮಾಡಬಹುದು. ಸರಿಯಾದ ಉಸಿರಾಟದ ಕ್ರಮವನ್ನು ಅಳವಡಿಸಿಕೊಂಡಲ್ಲಿ ನಮ್ಮ ದೇಹದ ಒಳತಾಪಮಾನವು ಸಮತೋಲದಿಂದ ಕೂಡಿರುತ್ತದೆ. ಇಲ್ಲವಾದಲ್ಲಿ ಸಮಸ್ಯೆಗಳು ತೋರುತ್ತವೆ. ಸಮಸ್ಯೆಗಳು ಬಾಲ್ಯದಲ್ಲೇ ಎಚ್ಚರಿಕೆ ಗಂಟೆ ಬಾರಿಸಿರುತ್ತವೆ. ಉದಾ: ನಮ್ಮಲ್ಲಿ ಸಾಕಷ್ಟು ಜನರು ಬಾಯಿಯಿಂದ ಉಸಿರಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ತಕ್ಷಣಕ್ಕೆ ಆರೋಗ್ಯ ಸಮಸ್ಯೆಯಾಗದಿದ್ದರೂ ಕ್ರಮೇಣ ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಯೋಗದ ಮೂಲಕ  ಉಸಿರಾಟದ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ಶ್ವಾಸಕೋಶಕ್ಕೆ ಸರಿಯಾದ ರೀತಿಯಲ್ಲಿ ಆಮ್ಲಜನಕ ಪೂರೈಕೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ನಾವು ಬೆಳೆದಂತೆ ಕಾರ್ಯಒತ್ತಡದಲ್ಲಿ ನಿರಾಳವಾಗಿ ಉಸಿರಾಡುವುದನ್ನೇ ಮರೆಯುತ್ತಿದ್ದೇವೆ. ಆದ್ದರಿಂದ ದಿನದ ಕೆಲ ಗಂಟೆಯಾದರೂ ಉಸಿರಾಟವನ್ನು ಕೇಂದ್ರೀಕರಿಸುವುದು ಒಳ್ಳೆಯದು. ಇದನ್ನು ಅಭ್ಯಾಸ ಮಾಡುತ್ತ ಹೋದಾಗ ನಮಗರಿವಿಲ್ಲದೆ ಉಂಟಾಗುವ ಕೋಪ, ಆತಂಕ, ಭಯವೆಲ್ಲ ನಿಯಂತ್ರಣಕ್ಕೆ ಬಂದು ಮನೋದೈಹಿಕ ನಿಯಂತ್ರಣ ಸಾಧ್ಯವಾಗುತ್ತದೆ.

ಇದನ್ನೂ ಓದಿ : International Yoga Day 2022 ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಒತ್ತಡ ಕಡಿಮೆ ಮಾಡಲು ಸಹಾಯಕವಾಗುವ ಯೋಗಭಂಗಿಗಳು

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಸಾಮಾನ್ಯವಾಗಿ ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಕೊಂಡಾಗ ಬಾಯಿಯಿಂದ ಉಸಿರಾಟ ಶುರುವಾಗುತ್ತದೆ. ಓಡುವಾಗ, ಆತಂಕ, ಕೋಪ ಮತ್ತು ಭಾವನಾತ್ಮಕ ಮಟ್ಟ ಹೆಚ್ಚಾದಾಗ ನಮಗರಿವಿಲ್ಲದೆಯೇ ಬಾಯಿಯಿಂದ ಉಸಿರಾಡಲು ಆರಂಭಿಸುತ್ತೇವೆ. ಆದರೆ ಬಾಯಿಯಿಂದ ಉಸಿರಾಟ ಶುರುವಾದಾಗ ವಾತಾವರಣದಲ್ಲಿರುವ ಕಲ್ಮಶವು ಶ್ವಾಸಕೋಶವನ್ನು ಸೋಂಕಿಗೆ ಒಳಪಡಿಸುತ್ತದೆ. ಆಗ ದೇಹ ಒಟ್ಟಾರೆಯಾಗಿ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತದೆ. ದೈಹಿಕವಾಗಿ ಜರ್ಜರಿತವಾದಾಗ ಮನಸಿನ ಮೇಲೂ ಪರಿಣಾಮ ಬೀರುತ್ತದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಕಷ್ಟವಾಗುತ್ತದೆ. ಕೆಲಸ ಮಾಡುವ ಸ್ಥಳ ಅಥವಾ ಮನೆಯೊಳಗೆ ಹೊಂದಿಕೊಂಡು ಹೋಗುವುದು ದುಸ್ತರವಾಗುತ್ತದೆ. ಆದ್ದರಿಂದ ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಮ್ಮ ಜೀವನಶೈಲಿಯೂ ಬಹಳ ಮುಖ್ಯ.

ಇದನ್ನೂ ಓದಿ : International Yoga Day 2022: ಈ ಆಸನಗಳು ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ

ದಿನವಿಡೀ ಒತ್ತಡದಲ್ಲಿ ಏರುಪೇರಾದ ಮನಸ್ಸು ದೇಹ ಉಲ್ಲಸಿತವಾಗಲು ದಿನಕ್ಕೆ ಅರ್ಧಗಂಟೆಯಾದರೂ ಈ ಕೆಳಗಿನ ಯೋಗಚಟುವಟಿಕೆಗಳಲ್ಲಿ ತೊಡಗಿಕೊಳ್ಳವುದು ಒಳ್ಳೆಯದು. ಈಗೇನು ಮೊದಲಿನಂತೆ ಯೋಗ ತರಗತಿಗಳಿಗೆ ಹೋಗಿ ಅಭ್ಯಾಸ ಮಾಡಬೇಕಂತಿಲ್ಲ. ಆನ್​ಲೈನ್​ನಲ್ಲಿಯೂ ತರಗತಿ ಸೇರಬಹುದು. ಅಥವಾ ಯೂಟ್ಯೂಬ್​ನಲ್ಲಿ ನಿಮಗೆ ಬೇಕಾದ ವ್ಯಾಯಾಮ, ಆಸನಗಳ ಹೆಸರು ಟೈಪಿಸಿದರೆ ನೋಡುತ್ತಲೇ ಕಲಿಯಬಹುದು. ನಿಮ್ಮ ಅನುಕೂಲಕರ ಸಮಯದೊಂದಿಗೆ ನಿತ್ಯವೂ ಮಾಡಬಹುದು.

ಇವುಗಳನ್ನು ರೂಢಿಸಿಕೊಳ್ಳಿ : ಭಸ್ತ್ರಿಕಾ ಪ್ರಾಣಾಯಾಮ, ಕುಂಭಕ ಪ್ರಾಣಾಯಾಮ, ಸಿಂಹಾಸನಾ, ಮೃಗಿ ಮುದ್ರಾ ಪ್ರಾಣಾಯಾಮ, ಕಪಾಲಭಾತಿ ಪ್ರಾಣಾಯಾಮ.

Published On - 4:23 pm, Thu, 16 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ