
ವಾಷಿಂಗ್ಟನ್, ಜನವರಿ 14: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾರು ಚಾಲಕ(Driver)ನೊಬ್ಬ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಸಾಕು ನಾಯಿಯನ್ನು ಹೊರಗೆಸೆದಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ವಾಷಿಂಗ್ಟನ್‌ನ ಪಿಯರ್ಸ್ ಕೌಂಟಿಯಲ್ಲಿ ನಡೆದಿದೆ. ಈ ಘಟನೆ ಜನವರಿ 6ರಂದು ನಡೆದಿದೆ. ರಾತ್ರಿಹೊತ್ತು ಎಂದಿನಂತೆ ಸಾಮಾನ್ಯವಾಗಿ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು.
ಆಗ ವೇಗವಾಗಿ ಕಾರೊಂದು ಬಂದಿತ್ತು, ಪೊಲೀಸರು ಕೈ ಅಡ್ಡ ಮಾಡಿದರೂ ಕಾರು ನಿಲ್ಲಲೇ ಇಲ್ಲ, ಪೊಲೀಸರಿಗೆ ಅನುಮಾನ ಮೂಡಿ ಆತನನ್ನು ಚೇಸ್ ಮಾಡಿದ್ದಾರೆ. ಆಗ ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ ಸಾಕು ನಾಯಿಯನ್ನು ಚಾಲಕ ಕೆಳಗೆ ಎಸೆದಿದ್ದಾನೆ. ಆತ ಮದ್ಯಪಾನ ಮಾಡಿದ್ದ ಎನ್ನಲಾಗಿದೆ.
ಪಿಯರ್ಸ್ ಕೌಂಟಿ ಶೆರಿಫ್ ಕಚೇರಿ (PCSO) ಪ್ರಕಾರ, ನೋಂದಣಿ ಅವಧಿ ಮುಗಿದ ಕಾರಣ ರಾತ್ರಿ 12.45ರ ಸುಮಾರಿಗೆ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದರು, ಆದರೆ ಚಾಲಕ ನಿಲ್ಲಲು ಸಿದ್ಧನಿರಲಿಲ್ಲ.
ಮತ್ತಷ್ಟು ಓದಿ: Video: ಅಪಹರಣಕಾರರಿಗೆ ಸಿಗುವ ಮುನ್ನವೇ ಸಮಯಪ್ರಜ್ಞೆಯಿಂದ ಮಗಳ ಕಾಪಾಡಿದ ತಾಯಿ
ಚಾಲಕ ವೇಗವನ್ನು ಹೆಚ್ಚಿಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳು ಆತನನ್ನು ಬೆನ್ನಟ್ಟಲು ಮುಂದಾದರು. ವಾಹನವು ವೇಗವನ್ನು ಕಡಿಮೆ ಮಾಡಲು ವಿಫಲವಾಗಿ, ಡಿವೈಡರ್ಗೆ ಗುದ್ದಿದೆ, ಕಾರಿನ ಗಾಜು ಪುಡಿ ಪುಡಿಯಾಗುವಷ್ಟು ತೀವ್ರವಾಗಿತ್ತು ಈ ಅಪಘಾತ.ನಾಯಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ವಿಡಿಯೋ
🇺🇸 Dog ejected through windshield in Pierce County car chase.
Driver (39) arrested on DUI, eluding, drugs, animal cruelty charges.
Deputies stopped a car for expired registration, but the driver fled, crashed into embankment.
Large dog was thrown out and ran off, another dog… pic.twitter.com/uLhFkvaCfb
— The Tradesman (@The_Tradesman1) January 12, 2026
ಕಾರಿನೊಳಗೆ ಮತ್ತೊಂದು ನಾಯಿಯು ಕೂಡ ಇತ್ತು, ಆದರೆ ಅಪಘಾತದಲ್ಲಿ ಅದಕ್ಕೇನು ತೊಂದರೆಯಾಗಿಲ್ಲ.ದೊಡ್ಡ ನಾಯಿಯನ್ನು ಅಂತಿಮವಾಗಿ ಅದರ ಮಾಲೀಕರೊಟ್ಟಿಗೆ ಸೇರಿಸಲಾಯಿತು. 39 ವರ್ಷದ ವ್ಯಕ್ತಿಯೊಬ್ಬರು ಚಾಲನೆ ಮಾಡುತ್ತಿದ್ದರು ಮತ್ತು 28 ವರ್ಷದ ಮಹಿಳೆಯೊಬ್ಬರು ಪ್ರಯಾಣಿಕರ ಸೀಟಿನಲ್ಲಿ ಇದ್ದರು. ಪರವಾನಗಿ ಇಲ್ಲದೆ ವಾಹನ ಚಾಲನ, ಡ್ರಂಕ್ ಆ್ಯಂಡ್ ಡ್ರೈವ್, ಅಪಾಯಕಾರಿ ಚಾಲನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಾಣಿ ಹಿಂಸೆ ಆರೋಪವನ್ನು ಎದುರಿಸುತ್ತಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ