ಗುಹೆಯಲ್ಲಿದ್ದ ವೃದ್ಧನನ್ನು ಸ್ಥಳೀಯರು ಹೊರಗೆ ಕರೆತಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಮಧ್ಯಪ್ರದೇಶ ಮೂಲದ ಸಿಯಾರಾಮ್ ಬಾಬಾ ಎಂದು ಗರುತಿಸಲಾಗಿದ್ದು,ಅವರಿಗೆ ಈಗ 110 ವರ್ಷ ವಯಸ್ಸು ಎಂದು ಅಂದಾಜಿಸಲಾಗಿದೆ. ರಾಮನ ಪರಮ ಭಕ್ತನಾಗಿದ್ದ ಇವರು 10 ವರ್ಷಗಳ ಕಾಲ ಒಂದೇ ಕಾಲಿನ ಮೇಲೆ ಕಠಿಣ ತಪಸ್ಸು ಮಾಡಿದನೆಂದು ಹೇಳಲಾಗುತ್ತಿದೆ.
ರಾಮ ಮತ್ತು ರಾಮಾಯಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಸಿಯಾರಾಮ್ ಬಾಬಾ, ನೂರು ವರ್ಷಗಳ ನಂತರವೂ ಕನ್ನಡಕವಿಲ್ಲದೆ ಪುಸ್ತಕಗಳನ್ನು ಓದುತ್ತಾರೆ. 21 ಗಂಟೆಗಳ ಕಾಲ ಓದುವ, ನಡೆದಾಡುವ ಸಾಮರ್ಥ್ಯವೇ ಇಷ್ಟು ದಿನ ಆರೋಗ್ಯವಾಗಿರಲು ಸಾಧ್ಯವಾಗಿದೆ ಎನ್ನಲಾಗಿದೆ.
🇮🇳 This Indian Man has just been found in a cave.
It’s alleged he’s 188 years old. Insane. pic.twitter.com/a7DgyFWeY6
— Concerned Citizen (@BGatesIsaPyscho) October 3, 2024
ಇದನ್ನೂ ಓದಿ: ಟಿವಿ ಲೈವ್ ಡಿಬೆಟ್ನಲ್ಲಿ ಹೊಡೆದಾಡಿಕೊಂಡ ಹಿಂದೂ-ಮುಸ್ಲಿಂ ನಾಯಕರು, ಮೌಲ್ವಿಗೆ ಕಪಾಳಮೋಕ್ಷ ಮಾಡಿದ ಹಿಂದೂ ಮುಖಂಡ
ಸಿಯಾರಾಮ್ ಬಾಬಾ ಅವರ ನಿಖರ ವಯಸ್ಸು ತಿಳಿದಿಲ್ಲ, ಆದರೆ ಅವರು 110 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಎಂದು ಹೇಳಲಾಗುತ್ತದೆ. ಇದೀಗ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಸಾಕಷ್ಟು ನೆಟ್ಟಿಗರು ನಡೆದಾಡುವ ದೇವರು ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ