AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇಷ್ಟೆಲ್ಲಾ ಚೌಕಾಸಿ ಬೇಕಾ, ಡೆಲಿವರಿ ಬಾಯ್‌ಗೆ ಕೊಡಬೇಕಾದ 2 ರೂಪಾಯಿ ಚಿಲ್ಲರೆ ಹಣವನ್ನು ಕೊಡದೆ ಸತಾಯಿಸಿದ ಮಹಿಳೆ

ಹಣ್ಣು, ತರಕಾರಿ ಹೀಗೆ ಕೆಲವೊಂದು ಸಾಮಾನುಗಳನ್ನು ಖರೀದಿಸುವಾಗ ಚೌಕಾಸಿ ಮಾಡುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬಳು ಮಹಿಳೆ ಹೊಟ್ಟೆಪಾಡಿಗಾಗಿ ದುಡಿಯುವ ಡೆಲಿವರಿ ಬಾಯ್‌ ಜೊತೆಗೆ ಚೌಕಾಸಿ ಮಾಡಿದ್ದಾಳೆ. ಹೌದು ತನ್ನ ಪಾರ್ಸೆಲ್‌ಗೆ 102 ರೂ. ಬಿಲ್‌ ಆಗಿದ್ರೂ ಕೂಡಾ ಆಕೆ ಪೂರ್ತಿ ಹಣವನ್ನು ಕೊಡದೆ ಕೇವಲ 100 ರೂ. ಕೊಟ್ಟು ಡೆಲಿವರಿ ಹುಡುಗನನ್ನು ಸತಾಯಿಸಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಇಷ್ಟೆಲ್ಲಾ ಚೌಕಾಸಿ ಬೇಕಾ, ಡೆಲಿವರಿ ಬಾಯ್‌ಗೆ ಕೊಡಬೇಕಾದ 2 ರೂಪಾಯಿ ಚಿಲ್ಲರೆ ಹಣವನ್ನು ಕೊಡದೆ ಸತಾಯಿಸಿದ ಮಹಿಳೆ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Oct 04, 2024 | 5:52 PM

Share

ಕೆಲವರಿಗೆ ಚೌಕಾಸಿ ಮಾಡುವುದೆಂದರೆ ಇನ್ನೂ ಕೆಲವೊಬ್ಬರು ತಾವು ಏನೇ ವಸ್ತುಗಳನ್ನು ಖರೀದಿ ಮಾಡಿದರೂ ಅದರಲ್ಲಿ ಚೌಕಾಸಿ ಮಾಡೋದು ಅಭ್ಯಾಸವಾಗಿಬಿಟ್ಟಿರುತ್ತದೆ. ಅದರಲ್ಲೂ ಹಣ್ಣು, ತರಕಾರಿ ಕೊಳ್ಳುವಾಗ ಸಿಕ್ಕಾಪಟ್ಟೆ ಚೌಕಾಸಿ ಮಾಡ್ತಾರೆ. ಆದ್ರೆ ಇಲ್ಲೊಬ್ಬಳು ಮಹಿಳೆ ಪಾರ್ಸೆಲ್‌ ಕೊಡಲು ಬಂದ ಡೆಲಿವರಿ ಬಾಯ್‌ ಜೊತೆಗೆಯೇ ಚೌಕಾಸಿ ಮಾಡಿದ್ದಾಳೆ. ಹೌದು ತನ್ನ ಪಾರ್ಸೆಲ್‌ಗೆ 102 ರೂ. ಬಿಲ್‌ ಆಗಿದ್ರೂ ಕೂಡಾ ಆಕೆ ಪೂರ್ತಿ ಹಣವನ್ನು ಕೊಡದೆ ಕೇವಲ 100 ರೂ. ಕೊಟ್ಟು ಡೆಲಿವರಿ ಹುಡುಗನನ್ನು ಸತಾಯಿಸಿದ್ದಾಳೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ಮಹಿಳೆಯ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಪಾರ್ಸೆಲ್‌ ಕೊಡಲು ಬಂದ ಡೆಲಿವಲಿ ಬಾಯ್‌ ಜೊತೆಗೆಯೇ ಮಹಿಳೆಯೊಬ್ಬಳು ಚೌಕಾಸಿ ಮಾಡಿದ್ದು, ಆತನಿಗೆ ಕೊಡಬೇಕಾದ ಸಂಪೂರ್ಣ ಹಣವನ್ನು ಕೊಡದೆ ಸತಾಯಿಸಿದ್ದಾಳೆ. ಈ ದೃಶ್ಯ ಡೆಲಿವರಿ ಹುಡುಗನ ಹೆಲ್ಮೆಟ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಡೆಲಿವರಿ ಬಾಯ್‌ ಅಂಗಡಿಯೊಂದರಲ್ಲಿ ಕುಳಿತಿದ್ದ ಮಹಿಳೆಗೆ ಪಾರ್ಸೆಲ್‌ ಕೊಡುವ ದೃಶ್ಯವನ್ನು ಕಾಣಬಹುದು. ಪಾರ್ಸೆಲ್‌ ಕೊಟ್ಟು ನಿಮ್ಮ ಬಿಲ್‌ 102 ರೂ. ಆಯಿತು ಎಂದು ಆತ ಹೇಳಿದಾಗ, ಆ ಮಹಿಳೆ ಕೇವಲ 100 ರೂ. ಕೊಟ್ಟು ನನ್ನ ಬಳಿ ಚಿಲ್ಲರೆ ಹಣ ಇಲ್ಲ ಎಂದು ʼಉಳಿದ 2 ರೂಪಾಯಿಯನ್ನು ಕೊಡದೆ ಸತಾಯಿಸಿದ್ದಾಳೆ. ಆನ್‌ಲೈನ್‌ ಪೇಮೆಂಟ್‌ ಮಾಡಿ ಎಂದು ಹೇಳಿದರೂ, ಎಷ್ಟೇ ಕೇಳಿದರೂ ಆಕೆ ಕೊಡಬೇಕಾಗಿದ್ದ ಚಿಲ್ಲರೆ ಹಣವನ್ನು ಕೊಡದೇ ಇದ್ದಾಗ ಕೊನೆಗೆ ಆ ಡೆಲಿವರಿ ಬಾಯ್‌ ಅಲ್ಲಿಂದ ಹೋಗಿದ್ದಾನೆ.

ಅಕ್ಟೋಬರ್‌ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಮಹಿಳೆಯ ವರ್ತನೆ ನಿಜಕ್ಕೂ ಅಸಹ್ಯಕರವಾಗಿದೆ, ಆದ್ರೂ ಆ ಡೆಲಿವರಿ ಬಾಯ್‌ ಎಷ್ಟು ಶಾಂತ ರೀತಿಯಲ್ಲಿ ಮಾತನಾಡಿದ್ದಾನೆ ನೋಡಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಮಹಿಳೆ ನಡೆದುಕೊಂಡ ರೀತಿ ಚೂರಾ ಸರಿಯಿಲ್ಲʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ