Viral: ಆರ್ಡರ್‌ ವಿಚಾರಕ್ಕೆ ತಗಾದೆ, ಗ್ರಾಹಕ ಹಾಗೂ ಕೆ.ಎಫ್.ಸಿ ಸಿಬ್ಬಂದಿಗಳ ನಡುವೆ ನಡೆದೇ ಹೋಯ್ತ ಮಾರಾಮಾರಿ

ಹೊಟೇಲ್‌ ಇತ್ಯಾದಿ ಕಡೆಗಳಲ್ಲಿ ಕೆಲವೊಂದು ವಿಚಾರಗಳಿಗೆ ಗ್ರಾಹಕರು ಮತ್ತು ಅಲ್ಲಿನ ಸಿಬ್ಬಂದಿಗಳ ನಡುವೆ ವಾಗ್ವಾದ ಏರ್ಪಟ್ಟು ಜಗಳಗಳು ನಡೆಯುತ್ತವೆ. ಇಂತಹ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಆರ್ಡರ್‌ ವಿಚಾರವಾಗಿ ಕೆ.ಎಫ್‌.ಸಿ ಔಟ್‌ಲೆಟ್‌ ಸಿಬ್ಬಂದಿಗಳು ಮತ್ತು ಗ್ರಾಹಕನ ನಡುವೆ ಬಿಗ್‌ ಫೈಟ್‌ ನಡೆದಿದೆ. ಈ ಕೆ.ಎಫ್‌.ಸಿ ಫೈಟ್‌ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ಆರ್ಡರ್‌ ವಿಚಾರಕ್ಕೆ ತಗಾದೆ, ಗ್ರಾಹಕ ಹಾಗೂ ಕೆ.ಎಫ್.ಸಿ ಸಿಬ್ಬಂದಿಗಳ ನಡುವೆ ನಡೆದೇ ಹೋಯ್ತ ಮಾರಾಮಾರಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 04, 2024 | 4:22 PM

ಬ್ಯಾಂಕ್‌, ಹೊಟೇಲ್, ಮಾಲ್‌ ಇತ್ಯಾದಿ ಕಡೆಗಳಲ್ಲಿ ಗ್ರಾಹಕರು ಹಾಗೂ ಅಲ್ಲಿನ ಸಿಬ್ಬಂದಿಗಳ ನಡುವೆ ಸಣ್ಣ ಪುಟ್ಟ ವಿಚಾರಗಳಿಗೆ ಜಗಳ, ಗಲಾಟೆ ನಡೆಯುವುದು ಆಗುತ್ತಲೇ ಇರುತ್ತವೆ. ಈ ಜಗಳಗಳು ದೈಹಿಕ ಹಲ್ಲೆಗಳ ಹಂತಕ್ಕೆ ಹೋಗದೆ ವಾಗ್ವಾದದಲ್ಲಿಯೇ ಕೊನೆಗೊಳ್ಳುತ್ತವೆ. ಆದ್ರೆ ಇಲ್ಲೊಂದು ಕಡೆ ಗ್ರಾಹಕ ಮತ್ತು ಸಿಬ್ಬಂದಿಗಳ ನಡುವೆ ಘೋರ ಜಗಳವೇ ನಡೆದಿದೆ. ಹೌದು ಆರ್ಡರ್‌ ವಿಚಾರವಾಗಿ ಕೆ.ಎಫ್‌.ಸಿ ಔಟ್‌ಲೆಟ್‌ ಸಿಬ್ಬಂದಿಗಳು ಮತ್ತು ಗ್ರಾಹಕನ ನಡುವೆ ಬಿಗ್‌ ಫೈಟ್‌ ಏರ್ಪಟ್ಟಿದ್ದು, ಈ ಕೆ.ಎಫ್‌.ಸಿ ಫೈಟ್‌ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಈ ಘಟನೆ ಕೇರಳದಲ್ಲಿ ನಡೆದಿದ್ದು ಫುಡ್‌ ಆರ್ಡರ್‌ ವಿಚಾರಕ್ಕೆ ಕೆ.ಎಫ್‌.ಸಿ ಔಟ್‌ಲೆಟ್‌ ಸಿಬ್ಬಂದಿಗಳು ಮತ್ತು ಗ್ರಾಹಕನ ನಡುವೆ ಮಾರಾಮಾರಿ ನಡೆದಿದೆ. ವಾಗ್ವಾದಲ್ಲಿ ಆರಂಭಗೊಂಡ ಈ ಜಗಳ ದೈಹಿಕ ಹಲ್ಲೆಯವರೆಗೂ ಹೋಗಿದೆ. ಹೌದು ಸಹದ್ಯೋಗಿಯ ಮೇಲೆ ಕೈ ಮಾಡಲು ಬಂದ ಗ್ರಾಹಕನಿಗೆ ಸಿಬ್ಬಂದಿಗಳೆಲ್ಲಾ ಸೇರಿ ಸರಿಯಾಗಿ ಗೂಸಾ ಕೊಟ್ಟಿದ್ದಾರೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಗ್ರಾಹಕ ಹಾಗೂ ಕೆ.ಎಫ್‌.ಸಿ ಔಟ್‌ಲೆಟ್‌ ಸಿಬ್ಬಂದಿಗಳ ನಡುವೆ ಘೋರ ಜಗಳ ನಡೆಯುವ ದೃಶ್ಯವನ್ನು ಕಾಣಬಹುದು. ಗ್ರಾಹಕ ಕೋಪಗೊಂಡು ಅಲ್ಲಿನ ಸಿಬ್ಬಂದಿಯೋರ್ವನ ಮೇಲೆ ಕೈ ಮಾಡಲು ಬಂದ ಸಂದರ್ಭದಲ್ಲಿ ಸಿಬ್ಬಂದಿಗಳೆಲ್ಲರೂ ಜೊತೆ ಸೇರಿ ತಮ್ಮ ಸಹದ್ಯೋಗಿಯ ಮೇಲೆ ಕೈ ಮಾಡಲು ಬಂದ ಗ್ರಾಹಕನಿಗೆ ಸಿಬ್ಬಂದಿಗಳೆಲ್ಲಾ ಸೇರಿ ಸರಿಯಾಗಿ ಗೂಸಾ ಕೊಟ್ಟಿದ್ದಾರೆ. ಇನ್ನೂ ಕೆಲವರು ಇವರ ಜಗಳವನ್ನು ನಿಲ್ಲಿಸಲು ಹರಸಾಹಸವನ್ನೇ ಪಡಬೇಕಾಯಿತು.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ದೈತ್ಯ ಕಾಳಿಂಗ ಸರ್ಪ; ರಕ್ಷಣಾ ಕಾರ್ಯ ಹೇಗಿತ್ತು ನೋಡಿ

ಅಕ್ಟೋಬರ್‌ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಓ ದೇವರೆ ಎಲ್ಲಿ ನೋಡಿದ್ರೂ ಬರೀ ಜಗಳಗಳೇ ನಡೆಯುತ್ತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು WWE ಫೈಟ್‌ ಇದ್ದಂಗಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ