Viral Video: ರಾಮನಾಮ ಜಪಿಸುತ್ತಿರುವ ಶ್ವಾನ; ವಿಡಿಯೋ ವೈರಲ್
ವಿಡಿಯೋದಲ್ಲಿ ಮಾಲೀಕ ಹೇಳಿಕೊಟ್ಟ ಹಾಗೇ ಶ್ವಾನ ಶ್ವಾನ ರಾಮ್ ರಾಮ್ ಎಂದು ಹೇಳುತ್ತಿರುವುದನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಮುದ್ದಾದ ಶ್ವಾನದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ಶ್ವಾನ ತನ್ನ ಮಾಲೀಕ ಹೇಳಿಕೊಟ್ಟಂತೆ ರಾಮ್ ರಾಮ್ ಎಂದು ರಾಮನಾಮವನ್ನು ಜಪಿಸುತ್ತಿರುವುದನ್ನು ಕಾಣಬಹುದು.
ಹಿಂದೂ ಧರ್ಮದಲ್ಲಿ ರಾಮ ಎನ್ನುವ ಎರಡಕ್ಷರ ಜಪಿಸಿದರೆ ಮನಸ್ಸು ಮತ್ತು ಹೃದಯ ಅಸಾಧಾರಣ ಸಂತೋಷಕ್ಕೆ ಒಳಗಾಗುವುದು. ಜೊತೆಗೆ ಸಾಕಷ್ಟು ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುವುದು ಎಂಬ ನಂಬಿಕೆಯಿದೆ. ಅಂದರಂತೆ ಮನೆಯ ಹಿರಿಯರು ಮಕ್ಕಳಿಗೆ ರಾಮ ಮಂತ್ರವನ್ನು ಹೇಳಿಕೊಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬರು ತಮ್ಮ ಮನೆಯ ಸಾಕು ನಾಯಿ ರಾಮ ನಾಮ ಹೇಳಿಕೊಟ್ಟಿದ್ದಾರೆ. ಸದ್ಯ ಈ ಕುರಿತು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
When the bhakti of previous births is awakened again… pic.twitter.com/i5Uw6zaJGP
— Ranvijay Singh (@ranvijayT90) September 17, 2024
ಇದನ್ನೂ ಓದಿ: ರಾತ್ರಿ ವೇಳೆ ಮೈಸೂರು ಅರಮನೆಯ ಗುಮ್ಮಟದಲ್ಲಿ ಕೆಂಪು ಬಣ್ಣದ ದೀಪ ಉರಿಯುವುದನ್ನು ಏಕೆ ಗೊತ್ತಾ?
ವೈರಲ್ ಆಗಿರುವ ವಿಡಿಯೋದಲ್ಲಿ ಮಾಲೀಕ ಹೇಳಿಕೊಟ್ಟ ಹಾಗೇ ಶ್ವಾನ ಶ್ವಾನ ರಾಮ್ ರಾಮ್ ಎಂದು ಹೇಳುತ್ತಿರುವುದನ್ನು ಕಾಣಬಹುದು. @ranvijayT90 ಎಂಬ ಹೆಸರಿನ ಟ್ವಟಿರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ