AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ರಾತ್ರಿ ವೇಳೆ ಮೈಸೂರು ಅರಮನೆಯ ಗುಮ್ಮಟದಲ್ಲಿ ಕೆಂಪು ಬಣ್ಣದ ದೀಪ ಉರಿಯುವುದನ್ನು ಏಕೆ ಗೊತ್ತಾ?

ಮೈಸೂರು ಅರಮನೆಯ ವಿದ್ಯುತ್‌ ದೀಪಾಲಂಕಾರವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಈ ದೀಪಾಲಂಕಾರವನ್ನು ನೋಡಲೆಂದೇ ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ. ನೀವು ಕೂಡಾ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾತ್ರಿ ವೇಳೆ ಅರಮನೆಯ ಗುಮ್ಮಟದ ಮೇಲೆ ಕೆಂಪು ಬಣ್ಣದ ದೀಪವೊಂದು ಉರಿಯುವುದನ್ನು ಗಮನಿಸಿರುತ್ತೀರಿ ಅಲ್ವಾ. ಆ ಕೆಂಪು ದೀಪ ಏಕೆ ಉರಿಯುತ್ತದೆ, ಅದರ ಅರ್ಥವೇನು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

Viral: ರಾತ್ರಿ ವೇಳೆ ಮೈಸೂರು ಅರಮನೆಯ ಗುಮ್ಮಟದಲ್ಲಿ ಕೆಂಪು ಬಣ್ಣದ ದೀಪ ಉರಿಯುವುದನ್ನು ಏಕೆ ಗೊತ್ತಾ?
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Oct 04, 2024 | 11:43 AM

Share

ಮೈಸೂರು ಅರಮನೆಯ ದೀಪಾಲಂಕಾರವನ್ನು ನೋಡುವುದೇ ಚೆಂದ. ಅದರಲ್ಲೂ ದಸರಾ ಸಮಯದಲ್ಲಿ ಇಡೀ ಅರಮನೆ, ಬೀದಿ-ಬೀದಿಗಳು ಜಗಮಗಿಸುವ ವಿದ್ಯುತ್‌ ದೀಪಾಲಂಕಾದದಿಂದ ಕಂಗೊಳಿಸುತ್ತಿರುತ್ತದೆ. ಈ ದೀಪಾಲಂಕಾರವನ್ನು ನೋಡಲೆಂದೇ ಹಲವಾರು ಜನ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ನೀವು ಕೂಡಾ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾತ್ರಿಯ ವೇಳೆ ಅರಮನೆಯ ಗುಮ್ಮಟದ ಮೇಲೆ ಕೆಂಪು ಬಣ್ಣದ ದೀಪವೊಂದು ಸದಾ ಉರಿಯುವುದನ್ನು ಗಮನಿಸಿರುತ್ತೀರಿ ಅಲ್ವಾ. ಆ ಕೆಂಪು ದೀಪ ಏಕೆ ಉರಿಯುತ್ತದೆ, ಅದರ ಅರ್ಥವೇನು ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿ ಇಲ್ಲಿದೆ.

ಅರಮನೆಯ ಗುಮ್ಮಟದ ಮೇಲೆ ಸದಾ ಉರಿಯುವ ಕೆಂಪು ಬಣ್ಣದ ದೀಪದ ಅರ್ಥವೇನೆಂದರೆ ಅಲ್ಲಿ ಮಹಾರಾಜರು ಇಲ್ಲ ಎಂಬ ಅರ್ಥವಂತೆ. ಹಸಿರು ದೀಪ ಉರಿದರೆ ಅಲ್ಲಿ ಮಹಾರಾಜರು ಇದ್ದಾರೆ ಎಂದರ್ಥ. ಈ ಕುರಿತ ಅದ್ಭುತ ಮಾಹಿತಿಯನ್ನು ಧರ್ಮೇಂದ್ರ ಕುಮಾರ್‌ ಅರೇನಹಳ್ಳಿ (dharmendra5294) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅವರು ಹೇಳ್ತಾರೆ ಅರಮನೆಯ ಗುಮ್ಮಟದ ಮೇಲೆ ಕೆಂಪು ಬಣ್ಣದ ದೀಪ ಉರಿಯುವುದರ ಅರ್ಥವೇನೆಂದರೆ , ಅರಮನೆಯಲ್ಲಿ ಮಹಾರಾಜರು ಇಲ್ಲ ಎಂದು. ಮಹಾರಾಜರು ಇದ್ರೆ ಅಲ್ಲಿ ಹಸಿರು ಬಣ್ಣದ ಲೈಟ್‌ ಉರಿಯುತ್ತೆ. 1947 ರಲ್ಲಿ ಸ್ವಾತಂತ್ರ್ಯ ಬಂದ ಬಳಿಕ ಮಹಾರಾಜರು ತಮ್ಮ ಸಿಂಹಾಸನವನ್ನು ಬಿಟ್ಟು ಇಳಿದ ನಂತರ ಆವತ್ತಿನಿಂದ ಇವತ್ತಿನವರೆಗೂ ಅರಮನೆ ಗುಮ್ಮಟದಲ್ಲಿ ಕೆಂಪು ದೀಪವೇ ಉರಿಯುತ್ತಿದೆ. ಮುಂಚೆಯೆಲ್ಲಾ ಜಯಚಮರಾಜೇಂದ್ರ ಒಡೆಯರ್‌ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲೆಲ್ಲಾ ಮಹಾರಾಜರು ಅರಮನೆಯಲ್ಲಿ ಇದ್ದಾರೆ ಎಂದಾಗ ಅಲ್ಲಿ ಹಸಿರು ಬಣ್ಣದ ದೀಪ ಉರಿಯುತ್ತಿತ್ತು, ಅವರು ಏನಾದ್ರೂ ಪ್ರವಾಸದ ನಿಮಿತ್ತ ಹೊರಗಡೆ ಹೋದಾಗ ಕೆಂಪು ಲೈಟ್‌ ಉರಿಯುತ್ತಿತ್ತು. ನಾವು ಆಗ ಈ ಕೆಂಪು-ಹಸಿರು ದೀಪದ ಮೂಲಕವೇ ಮಹಾರಾಜರು ಅರಮನೆಯಲ್ಲಿ ಇದ್ದಾರೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಬಹುದಿತ್ತು ಎಂಬ ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: 155 ವರ್ಷ ಹಳೆಯ MIT ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವೈರಲ್, ಹೇಗಿತ್ತು ನೋಡಿ ಬೀಜ ಗಣಿತ ಪ್ರಶ್ನೆ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಅದ್ಭುತ ವಿಚಾರವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅರ್ಥಗರ್ಭಿತವಾದ ವಿಷಯಗಳನ್ನು ನಮ್ಮಗೆಲ್ಲಾ ತಿಳಿಸಿಕೊಡುತ್ತಿದ್ದೀರಾ, ನಿಮಗೆ ತುಂಬು ಹೃದಯದ ಧನ್ಯವಾದಗಳುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!