AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಯುವತಿಗೆ ಕಿಸ್ ಕೊಡಬೇಕಾದ್ರೆ ಈ ಮೂರು ರೂಲ್ಸ್ ಬ್ರೇಕ್ ಮಾಡೋ ಆಗಿಲ್ಲ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಚುಂಬನವು ಪ್ರೀತಿಯನ್ನು ಅಭಿವ್ಯಕ್ತಿಸುವ ಮಾರ್ಗವಾಗಿದೆ. ಅದಲ್ಲದೇ, ದೈಹಿಕ ಆರೋಗ್ಯಕ್ಕೂ ಉತ್ತಮ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುವುದಕ್ಕೆ ಈ ಚುಂಬನ ಸಹಕಾರಿಯಾಗಿದೆ. ಆದರೆ ಬೋಸ್ಟನ್ ಮೂಲದ ಟಿಕ್‌ಟಾಕ್ ಬಳಕೆದಾರರಲ್ಲಿ ಒಬ್ಬರಾಗಿರುವ 25 ವರ್ಷದ ಕ್ಯಾರೋಲಿನ್ ಕ್ರೇ ಕ್ವಿನ್ ಎಂಬ ಯುವತಿಯು ತನ್ನನ್ನು ಚುಂಬಿಸುವ ಸಂಗಾತಿಗೆ ಮೂರು ಕಟ್ಟುನಿಟ್ಟಾದ ನಿಯಮವನ್ನು ಹಾಕಿದ್ದು, ಇದರ ಹಿಂದಿನ ಕಾರಣವಂನ್ನಿ ಕೂಡ ಸ್ವತಃ ಆಕೆಯೇ ಹೇಳಿಕೊಂಡಿದ್ದಾಳೆ.

ಈ ಯುವತಿಗೆ ಕಿಸ್ ಕೊಡಬೇಕಾದ್ರೆ ಈ ಮೂರು ರೂಲ್ಸ್ ಬ್ರೇಕ್ ಮಾಡೋ ಆಗಿಲ್ಲ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Oct 03, 2024 | 5:32 PM

Share

ಮುತ್ತು ಎಂದ ಕೂಡಲೇ ಎಲ್ಲರಲ್ಲೂ ಮುಜುಗರವೊಂದು ಕಾಡುತ್ತದೆ. ಆದರೆ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನದಲ್ಲಿ ಒಂದು ಈ ಚುಂಬನ. ದಾಂಪತ್ಯ ಜೀವನವು ಸುಖಕರವಾಗಿ ಸಾಗಬೇಕಾದರೆ ಬಿಸಿ ಅಪ್ಪುಗೆಯ ಜೊತೆಗೆ ಸಿಹಿ ಮುತ್ತು ಸುರಕ್ಷತೆಯ ಭಾವವನ್ನು ಕಟ್ಟಿಕೊಡುತ್ತದೆ. ಚುಂಬನವು ಮನಸ್ಸು ನಿರಾಳವಾಗುವುದಲ್ಲದೆ ದೈಹಿಕವಾಗಿ ಗಟ್ಟಿಯಾಗಿಸುತ್ತದೆ. ಆದರೆ ಇಲ್ಲೊಬ್ಬಳು 25 ವರ್ಷದ ಯುವತಿಯೂ ಚುಂಬಿಸುವುದಕ್ಕಾಗಿ ತನ್ನ ಸಂಗಾತಿಗೆ ಮೂರು ನಿಯಮಗಳನ್ನು ಹಾಕಿದ್ದು, ಈ ಬಗ್ಗೆ ಸ್ವತಃ ಆಕೆಯೇ ಹೇಳಿಕೊಂಡಿದ್ದಾಳೆ.

ಬೋಸ್ಟನ್ ಮೂಲದ ಟಿಕ್‌ಟಾಕ್ ಬಳಕೆದಾರರಾಗಿರುವ ಕ್ಯಾರೋಲಿನ್ ಕ್ರೇ ಕ್ವಿನ್ ವಿಡಿಯೋದಲ್ಲಿ ತಾನು ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ (ಎಂಸಿಎಎಸ್) ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಈ ಕಾಯಿಲೆಯ ಗಂಭೀರತೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು, ಕ್ಯಾರೋಲಿನ್ ಕ್ರೇ ಕ್ವಿನ್ ತನ್ನ ಸಂಗಾತಿಗೆ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿದ್ದಾಳೆ.

ಕ್ಯಾರೋಲಿನ್ ಕ್ವಿನ್ ಮೂರು ನಿಯಮಗಳನ್ನು ವಿವರಿಸಿದ್ದು, “ಮೊದಲ ನಿಯಮವೆಂದರೆ, ನನ್ನನ್ನು ಚುಂಬಿಸುವ 24 ಗಂಟೆಗಳ ಮೊದಲು ಆರು ಪ್ರಮುಖ ಅನಾಫಿಲ್ಯಾಕ್ಟಿಕ್ ಅಲರ್ಜಿಗೆ ಕಾರಣವಾಗುವ (ಕಡಲೆಕಾಯಿ, ಮರದ ಬೀಜಗಳು, ಎಳ್ಳು, ಕಿವಿ, ಸಾಸಿವೆ ಅಥವಾ ಸಮುದ್ರಾಹಾರ) ಏನನ್ನೂ ತಿನ್ನಬಾರದು. ಎರಡನೆಯ ನಿಯಮವೆಂದರೆ ನನ್ನನ್ನು ಚುಂಬಿಸುವ ಮೂರು ಗಂಟೆಗಳ ಮೊದಲು ಯಾವುದೇ ಆಹಾರವನ್ನು ಸೇವಿಸಬಾರದು. ಮೂರನೆಯ ನಿಯಮದಲ್ಲಿ ತನ್ನನ್ನು ಚುಂಬಿಸುವ ಮುನ್ನ ಸಂಗಾತಿಯೂ ಬ್ರಷ್ ಮಾಡುವುದು ಅವಶ್ಯಕ ಎಂದಿದ್ದಾಳೆ.

ಏನಿದು ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್?

ಮಾಸ್ಟ್ ಸೆಲ್ ಆಕ್ಟಿವೇಶನ್ ಸಿಂಡ್ರೋಮ್ ಎನ್ನುವುದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು, 1.50 ಲಕ್ಷ ಜನರಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಇದು ರಕ್ತ ಕಣಗಳು, ಆಹಾರ ಹಾಗೂ ಇತರ ಪರಿಸರ ಪ್ರಚೋದಕಗಳಿಗೆ ಅತಿಯಾಗಿ ಪ್ರತಿಕ್ರಿಯಿಸುವ ಅಸ್ವಸ್ಥತೆಯಾಗಿದೆ. ರೋಗ ಪೀಡಿತ ವ್ಯಕ್ತಿಯು ಬಹುತೇಕ ಎಲ್ಲದರಿಂದಲೂ ಅಲರ್ಜಿಗೊಳಗಾ ಗುತ್ತಾನೆ. ಸ್ವಲ್ಪ ಎಚ್ಚರ ತಪ್ಪಿದರೂ ಈ ರೋಗದಿಂದ ಬಳಲುವ ವ್ಯಕ್ತಿಯ ಜೀವಕ್ಕೆ ಮಾರಕವಾಗಬಹುದು.

ಇದನ್ನೂ ಓದಿ: 155 ವರ್ಷ ಹಳೆಯ MIT ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವೈರಲ್, ಹೇಗಿತ್ತು ನೋಡಿ ಬೀಜ ಗಣಿತ ಪ್ರಶ್ನೆ

ಕ್ಯಾರೋಲಿನ್ ಆರೋಗ್ಯ ಪರಿಸ್ಥಿತಿ ಹೇಗಿದೆ?

ವರದಿಗಳ ಪ್ರಕಾರ, ಕ್ಯಾರೋಲಿನ್ ಳ ಅನಾರೋಗ್ಯವು ತುಂಬಾ ಗಂಭೀರವಾಗಿದೆ. ಈಕೆಯು ಓಟ್ ಮೀಲ್ ಹಾಗೂ ಪೌಷ್ಟಿಕಾಂಶಯುಕ್ತ ಈ ಎರಡು ರೀತಿಯ ಆಹಾರವನ್ನು ಮಾತ್ರ ಸೇವಿಸಬಹುದು. ಇನ್ಯಾವುದೇ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಿದರೆ ಅಲರ್ಜಿಯಾಗುತ್ತದೆ. ತನಗೆ ಅಲರ್ಜಿಯಾಗುವ ಆಹಾರ ಸೇವಿಸಿದ ವ್ಯಕ್ತಿಗೆ ಮುತ್ತು ಕೊಟ್ಟರೆ ಅದು ಆಕೆಯ ಪ್ರಾಣಕ್ಕೂ ಅಪಾಯ ತಂದೊಡ್ಡುತ್ತದೆ. ಹೀಗಾಗಿ ತನ್ನ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ಈ ಕೆಲವು ನಿಯಮಗಳನ್ನು ಹಾಕಿಕೊಂಡಿದ್ದಾಳೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ