Viral Video : ಉತ್ಸಾಹ ಎನ್ನುವುದು ಪರಸ್ಪರ ಹೊಮ್ಮುವಂಥದ್ದು. ವಯಸ್ಸು ಏರುತ್ತಿದ್ದಂತೆ ನನಗೆ ನೀ ನಿನಗೆ ನಾ ಎನ್ನುವುದು ಗಂಡಹೆಂಡತಿಯಲ್ಲಿ ಅನಿವಾರ್ಯವಾಗುತ್ತಿದ್ದಂತೆ ಆಗಾಗ ಸಣ್ಣಸಣ್ಣ ಖುಷಿಗಾಗಿ ಉಪಾಯಗಳನ್ನು ಹೂಡಲೇಬೇಕಾಗುತ್ತದೆ. ಈಗ ನೋಡಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ 70ರ ಅಜ್ಜ, ತನ್ನ ಹೆಂಡತಿಗಾಗಿ ಬೀಸ್ಟ್ ಸಿನೆಮಾದ ಅರೇಬಿಕ್ ಕುತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಿಲಿಯನ್ ಜನ ನೋಡಿ ಖುಷಿಪಡುತ್ತಿದ್ದಾರೆ.
ವಿನಂತಿಯ ಮೇರೆಗೆ ಈ ವಿಡಿಯೋ ಅಪ್ಲೋಡ್ ಮಾಡಲಾಗುತ್ತಿದೆ. ‘ನಿಮ್ಮೊಳಗಿನ ಮಗುವನ್ನು ಸದಾ ಜೀವಂತವಾಗಿರಿಸಿಕೊಂಡರೆ ನಿಮ್ಮ ಸುತ್ತಮುತ್ತಲಿನ ವಾತಾವರಣ ತಾನಾಗಿಯೇ ಖುಷಿಯಿಂದ ಕೂಡಿರುತ್ತದೆ. 70ರ ನನ್ನ ಅಪ್ಪ 10ರಂತೆ. ನೋಡಿ ನನ್ನ ಅಪ್ಪ ಅಮ್ಮ.’ ಎಂಬ ಒಕ್ಕಣೆಯನ್ನು ಮಗಳು ಶ್ರುತಿ ವಾಸುದೇವನ್ ಈ ವಿಡಿಯೋಗೆ ಬರೆದು ಅಪ್ಲೋಡ್ ಮಾಡಿದ್ಧಾರೆ.
ನೆಟ್ಟಿಗರಂತೂ ಚಪ್ಪಾಳೆ ತಟ್ಟುತ್ತಲೇ ಇದ್ಧಾರೆ. ಈತನಕ 11 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಅನೇಕರು ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ‘ಎಂಥ ಚೆಂದದ ವಿಡಿಯೋ ಇದು, ನನ್ನ ಈ ದಿನವನ್ನು ಸಮರ್ಪಕವಾಗಿಸಿತು’ ಎಂದಿದ್ದಾರೆ ಒಬ್ಬರು. ‘ಕಪಲ್ ಗೋಲ್ ಎಂದರೆ ಹೀಗಿರಬೇಕು‘ ಎಂದಿದ್ದಾರೆ ಇನ್ನೊಬ್ಬರು.
ಅಂತೂ ನೃತ್ಯ ಮನಸ್ಸನ್ನು ಉಲ್ಲಸಿತಗೊಳಿಸಿ ಸಂಬಂಧವನ್ನು ಮಧುರಗೊಳಿಸುತ್ತದೆ ಎನ್ನುವಲ್ಲಿ ಎರಡು ಮಾತಿಲ್ಲ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:49 pm, Tue, 8 November 22