KRISHNA TEMPLE:ಈ ದೇವಾಲಯದಲ್ಲಿ ರಾತ್ರಿಯ ವೇಳೆ ಕೇಳುತ್ತೇ ಕೊಳಲ ನಾದ!; ಈ ದೇವಾಲಯ ಎಲ್ಲಿದೆ ಗೊತ್ತಾ?

|

Updated on: May 11, 2024 | 5:15 PM

ರಾತ್ರಿ ವೇಳೆ ಇಲ್ಲಿ ಪವಾಡವೆಂಬಂತೆ ಕೊಳಲು ನಾದ ಕೇಳುವುದು ಈ ದೇವಾಲಯದ ಪ್ರಮುಖ ವಿಶೇಷತೆ. ಭಗವಂತ ಶ್ರೀಕೃಷ್ಣ ಈ ದೇವಾಲಯದಲ್ಲಿ ನೆಲೆಸಿದ್ದಾನೆ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ . ಈ ದೇವಾಲಯ ಯಾವುದು? ಎಲ್ಲಿದೆ? ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

KRISHNA TEMPLE:ಈ ದೇವಾಲಯದಲ್ಲಿ ರಾತ್ರಿಯ ವೇಳೆ ಕೇಳುತ್ತೇ ಕೊಳಲ ನಾದ!; ಈ ದೇವಾಲಯ ಎಲ್ಲಿದೆ ಗೊತ್ತಾ?
Follow us on

ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಅವುಗಳಲ್ಲಿ ಶ್ರೀಕೃಷ್ಣನಿಗೆ ಅರ್ಪಿತವಾದ ಕೃಷ್ಣ ದೇವಾಲಯಗಳೂ ಇವೆ. ಇದೀಗ ಪಾಟ್ನಾದ ಶ್ರೀಕೃಷ್ಣನಿಗೆ ಅರ್ಪಿತವಾದ ದೇವಾಲಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದೆ. ಈ ದೇವಾಲದಲ್ಲಿ ರಾತ್ರಿಯಾಗುತ್ತಲೇ ಪವಾಡವೆಂಬಂತೆ ಶ್ರೀಕೃಷ್ಣನ ಕೊಳಲನಾದ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕೊಳಲನಾದ ಕೇಳಲು ದೇಶ ವಿದೇಶ ಸಾಕಷ್ಟು ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಾಲಯ ಯಾವುದು? ಎಲ್ಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಬಿಹಾರದ ರಾಜಧಾನಿ ಪಾಟ್ನಾವು ಅನೇಕ ಪ್ರಮುಖ ಪರಂಪರೆಯ ಸ್ಮಾರಕಗಳು ಮತ್ತು ಐತಿಹಾಸಿಕ ದೇವಾಲಯಗಳನ್ನು ಹೊಂದಿದೆ. ಅಂತಹ ಒಂದು ದೇವಾಲಯವು ಪಾಟ್ನಾದ ಚೌಧರಿ ತೋಲಾ ಘಾಟ್‌ನಲ್ಲಿರುವ ಶ್ರೀ ರಾಧಾ ಗೋಪಾಲ್ ದೇವಾಲಯ. ಇದನ್ನು 1830 ರಲ್ಲಿ ಟಿಕಾರಿ ರಾಜ್‌ನ ರಾಜಾ ಹೀತ್ ನಾರಾಯಣ್ ಸಿಂಗ್ ನಿರ್ಮಿಸಿದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ನಂತರ, ಈ ದೇವಾಲಯವನ್ನು ರಾಣಿಯೊಬ್ಬರು ಸ್ವಾಧೀನಪಡಿಸಿಕೊಂಡರು, ಅವರು ವೃದ್ಧಾಪ್ಯದಲ್ಲಿ ಇದನ್ನು ಒಬ್ಬ ಸಂತನಿಗೆ ದಾನ ಮಾಡಿದರು ಎಂದು ಹೇಳಲಾಗುತ್ತದೆ. ಅಂದಿನಿಂದ ದೇವಾಲಯವನ್ನು ನಿರ್ವಹಿಸುತ್ತಿರುವವರು ಸಂತರು. ಪ್ರತಿ ಭಾನುವಾರ ದೇವಸ್ಥಾನದ ಆವರಣದಲ್ಲಿ ಭಜನಾ ಕೀರ್ತನೆ ಏರ್ಪಡಿಸಲಾಗುತ್ತದೆ. ಇದಲ್ಲದೆ, ದೇವಾಲಯದಲ್ಲಿ ಭಕ್ತರಿಗೆ ತಂಗಲು ಆಶ್ರಯವನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ: ಆಟೋಗೆ ಬಲೂನ್ ಕಟ್ಟಿ ಮಗಳ ಹುಟ್ಟುಹಬ್ಬ ಸಂಭ್ರಮಿಸಿದ ತಂದೆ

ರಾತ್ರಿ ವೇಳೆ ಇಲ್ಲಿ ಪವಾಡವೆಂಬಂತೆ ಕೊಳಲು ನಾದ ಕೇಳುವುದು ಈ ದೇವಾಲಯದ ಪ್ರಮುಖ ವಿಶೇಷತೆ. ಶ್ರೀಕೃಷ್ಣನ ಭಕ್ತರು ಈ ದೇವಾಲಯದಲ್ಲಿ ಆತನ ಉಪಸ್ಥಿತಿಯನ್ನು ಅನುಭವಿಸಿದ್ದಾರೆ ಎಂದು ನಂಬುತ್ತಾರೆ. ಇಲ್ಲಿ ಕೃಷ್ಣ ನೆಲೆಸಿದ್ದಾನೆ ಎಂದು ಸ್ಥಳೀಯರು ನಂಬುತ್ತಾರೆ.

ಮತ್ತಷ್ಟು  ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:14 pm, Sat, 11 May 24