AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್: 50 ವರ್ಷಗಳಿಂದ ಖಾಲಿ ಇದೆ ಈ ದ್ವೀಪ, ಇದರ ಹಿಂದಿದೆ ಕರಾಳ ಇತಿಹಾಸ

ಜಪಾನ್​ನಲ್ಲಿರುವ ಈ ದ್ವೀಪ 50 ವರ್ಷಗಳಿಂದ ಖಾಲಿ ಇದೆ. ಯಾರೂ ಕೂಡ ಇಲ್ಲಿ ಉಳಿದುಕೊಳ್ಳಲು ಮನಸ್ಸು ಮಾಡುವುದಿಲ್ಲ. 2019ರಿಂದ ಬೆರಳೆಣಿಕೆಯಷ್ಟು ಪ್ರವಾಸಿಗರು ಹಾಶಿಮಾ ದ್ವೀಪಕ್ಕೆ ಭೇಟಿ ನೀಡುತ್ತಿದ್ದಾರೆ.

ಜಪಾನ್: 50 ವರ್ಷಗಳಿಂದ ಖಾಲಿ ಇದೆ ಈ ದ್ವೀಪ, ಇದರ ಹಿಂದಿದೆ ಕರಾಳ ಇತಿಹಾಸ
ಹಾಶಿಮಾ ದ್ವೀಪ
ನಯನಾ ರಾಜೀವ್
|

Updated on: May 12, 2024 | 10:09 AM

Share

ಈ ಜಗತ್ತಿನಿಂದ ಪ್ರತಿಯೊಬ್ಬರು ಕಣ್ಮರೆಯಾದರೆ ಹೇಗಿರುತ್ತೆ ಎಂದು ಎಂದಾದರೂ ಯೋಚಿಸಿದ್ದೀರಾ. ಜಪಾನ್(Japan)​ ಕರಾವಳಿಯಲ್ಲಿರುವ ಈ ದ್ವೀಪ(Island) ಉತ್ತಮ ಉದಾಹರಣೆ ಎನ್ನಬಹುದು. ಒಂದು ಕಾಲದಲ್ಲಿ ಸಾವಿರಾರು ಜನರಿಂದ ತುಂಬಿದ್ದ ಈ ದ್ವೀಪ ಕಳೆದ 50 ವರ್ಷಗಳಿಂದ ಖಾಲಿ ಇದೆ. ಇದರ ಹೆಸರು ಹಾಶಿಮಾ(Hashima) ದ್ವೀಪ ಇದು ಜಪಾನ್​ನ ಕರಾವಳಿಯಲ್ಲಿದೆ. 50 ವರ್ಷಗಳಿಂದ ಕೇವಲ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ ವಿನಃ ಅಲ್ಲಿ ಯಾರೂ ವಾಸವಿಲ್ಲ.

ಇದರ ಮತ್ತೊಂದು ಹೆಸರು ಗುಂಕಂಜಿಮಾ, ಇದರರ್ಥ ಯುದ್ಧನೌಕೆ ದ್ವೀಪ ಎಂದು. ದ್ವೀಪವು ಮೂಲತಃ ಕಲ್ಲಿದ್ದಲು ಗಣಿಗಾರಿಕೆಯ ಸ್ಥಳವಾಗಿ 1800 ರ ದಶಕದಲ್ಲಿ ಸಮೃದ್ಧವಾಗಿದೆ. ಕಲ್ಲಿದ್ದಲಿನ ಸಮೃದ್ಧ ನಿಕ್ಷೇಪಗಳನ್ನು ಇಲ್ಲಿ ಕಂಡುಹಿಡಿಯಲಾಯಿತು.

ಮಿತ್ಸುಬಿಷಿ 1890 ರಲ್ಲಿ ದ್ವೀಪ ಮತ್ತು ಅದರ ಗಣಿಗಳನ್ನು ಖರೀದಿಸಿತು ಮತ್ತು ಕೆಲಸಗಾರರು ಮತ್ತು ಅವರ ಕುಟುಂಬಗಳಿಗೆ ಅಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿತು. ಹೆಚ್ಚಿನ ಜನ ಸಂಖ್ಯೆಯು ಅಲ್ಲಿತ್ತು, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಕೆಲವರು ಸುಸಜ್ಜಿತ ಮನೆಗಳನ್ನೇ ನಿರ್ಮಿಸಿದರು. ಕ್ರಮೇಣವಾಗಿ ಅಲ್ಲಿ ವಾಸಿಸುವವರ ಪರಿಸ್ಥಿತಿ ಗಂಭೀರವಾಗಿತ್ತು. ಗಂಭೀರದ ಉಸಿರಾಟದ ಸಮಸ್ಯೆ ನಕಾಡತೊಡಗಿತ್ತು. ಅಂತಿಮವಾಗಿ ಕಲ್ಲಿದ್ದಲು ನಿಕ್ಷೇಪಗಳು ಖಾಲಿಯಾದವು ಮತ್ತು ಅಲ್ಲಿ ಗಣಿಗಾರಿಕೆ ಇನ್ನು ಮುಂದೆ ಸಾಧ್ಯವಾಗಲಿಲ್ಲ.

ಮತ್ತಷ್ಟು ಓದಿ: Video Viral: ಸೊಳ್ಳೆ ಬ್ಯಾಟ್​ ಬಳಸಿ ಬ್ರೆಡ್ ಟೋಸ್ಟ್‌ ಮಾಡಿದ ಮಹಿಳೆ; ವಿಡಿಯೋ ವೈರಲ್​

ವಿಶ್ವ ಸಮರ 2 ರ ಸಮಯದಲ್ಲಿ, ಚೀನಾದ ಯುದ್ಧ ಕೈದಿಗಳನ್ನು, ಶೋಷಿತ ಕೊರಿಯಾದ ವಲಸಿಗರೊಂದಿಗೆ ಹಶಿಮಾಗೆ ಸಾಗಿಸಲಾಯಿತು ಮತ್ತು ಗಣಿಗಳಲ್ಲಿ ಕ್ರೂರ ಮತ್ತು ಅಮಾನವೀಯ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಒತ್ತಾಯಿಸಲಾಯಿತು. ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು, ಮತ್ತು ಸಾವಿರಾರು ಜನರು ಹಸಿವು ಮತ್ತು ಬಳಲಿಕೆಯಿಂದ ಮೃತಪಟ್ಟರು.

ಇದೀಗ ಮತ್ತೆ ಆ ದ್ವೀಪ ಮರುಜೀವ ಪಡೆದುಕೊಂಡಿದ್ದು 2019ರಿಂದ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ, 2015ರಲ್ಲಿ ಯುನೆಸ್ಕೋ ಪಟ್ಟಿಯಲ್ಲಿ ದ್ವೀಪವನ್ನು ಸೇರಿಸಲಾಯಿತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ