Viral Video : ಸಂಬಂಧಗಳನ್ನು ಗಟ್ಟಿಗೊಳಿಸುವುದು ನೆನಪುಗಳೇ. ಬಾಲ್ಯದಲ್ಲಿ ಅಜ್ಜನಿಂದ ಪಡೆದ ಪ್ರೀತಿಯೇ ಅವಳನ್ನು ಹೀಗೆ ಪತ್ರ ಬರೆಯಲು ಪ್ರೇರೇಪಿಸಿರಲು ಸಾಧ್ಯ. ತನ್ನ ಮದುವೆಯ ದಿನ ಮಂಟಪಕ್ಕೆ ಹೋಗುವಾಗ ಅಜ್ಜನೂ ತನ್ನೊಂದಿಗೆ ನಡೆದು ಬರಬೇಕು ಎಂಬ ವಿನಂತಿಪತ್ರವನ್ನು ಮೊಮ್ಮಗಳು ಅಜ್ಜನಿಗೆ ನೀಡಿದ್ದಾಳೆ. ಒಂದು ರೆಸ್ಟೋರೆಂಟ್ನಲ್ಲಿ ಕುಳಿತು ಆ ಪತ್ರವನ್ನು ಓದಿದ ಅಜ್ಜ ಭಾವುಕನಾಗಿ ಬಿಕ್ಕಿದ್ದಾನೆ. ಪಕ್ಕದಲ್ಲಿದ್ದ ಅಜ್ಜಿ ಅಜ್ಜನನ್ನು ಸಮಾಧಾನ ಮಾಡಿದ್ದಾಳೆ. ಈ ವಿಡಿಯೋ ಈಗ ವೈರಲ್ ಆಗಿದೆ. ಒಂದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಈ ವಿಡಿಯೋ ನೋಡಿದ್ದಾರೆ. ಮ್ಯಾಜಿಕಲಿ ನ್ಯೂಸ್ ಇನ್ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
ಬದುಕಿನಲ್ಲಿ ಸಣ್ಣಪುಟ್ಟ ಆಸೆಗಳಿರುತ್ತವೆ. ಪ್ರೀತಿಪಾತ್ರರಿಂದ ಅವು ಪೂರೈಕೆಗೊಂಡರೆ ಬಂಧ ಮತ್ತಷ್ಟು ಗಟ್ಟಿಯಾಗುತ್ತದೆ ಎನ್ನುವುದಕ್ಕೆ ಇಂಥ ವಿಡಿಯೋಗಳು ಸಾಕ್ಷಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ