ಮಹಿಳೆಯ ಹೊಟ್ಟೆಯೊಳಗಿತ್ತು 2ಕೆಜಿಯಷ್ಟು ತೂಕದ ಕೂದಲಿನ ಮುದ್ದೆ

|

Updated on: Oct 06, 2024 | 2:24 PM

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಹೊಟ್ಟೆಯಿಂದ ವೈದ್ಯರು 2 ಕೆಜಿ ತೂಕದ ಕೂದಲಿನ ಮುದ್ದೆಯನ್ನು ಹೊರಗೆ ತೆಗೆದಿರುವ ಆಶ್ಚರ್ಯಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವೈದ್ಯರು 31 ವರ್ಷದ ಮಹಿಳೆಯ ಹೊಟ್ಟೆಯಿಂದ ಕೂದಲುಗಳನ್ನು ಹೊರತೆಗೆದಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕಳೆದ 15 ವರ್ಷಗಳಿಂದ ಆಕೆ ಕೂದಲು ತಿನ್ನುತ್ತಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹಿಳೆಯ ಹೊಟ್ಟೆಯೊಳಗಿತ್ತು 2ಕೆಜಿಯಷ್ಟು ತೂಕದ ಕೂದಲಿನ ಮುದ್ದೆ
ಶಸ್ತ್ರಚಿಕಿತ್ಸೆ
Image Credit source: BD
Follow us on

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯ ಹೊಟ್ಟೆಯಿಂದ ವೈದ್ಯರು 2 ಕೆಜಿ ತೂಕದ ಕೂದಲಿನ ಮುದ್ದೆಯನ್ನು ಹೊರಗೆ ತೆಗೆದಿರುವ ಆಶ್ಚರ್ಯಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವೈದ್ಯರು 31 ವರ್ಷದ ಮಹಿಳೆಯ ಹೊಟ್ಟೆಯಿಂದ ಕೂದಲುಗಳನ್ನು ಹೊರತೆಗೆದಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕಳೆದ 15 ವರ್ಷಗಳಿಂದ ಆಕೆ ಕೂದಲು ತಿನ್ನುತ್ತಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

ದೀರ್ಘಕಾಲದವರೆಗೆ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದ ರೋಗಿಗೆ ಟ್ರೈಕೊಲೊಟೊಮೇನಿಯಾ ಇದೆ ಎಂದು ಗುರುತಿಸಲಾಯಿತು. ಇದು ಅಪರೂಪದ ಮಾನಸಿಕ ಅಸ್ವಸ್ಥತೆಯಾಗಿದ್ದು, ಈ ಕಾಯಿಲೆಯು ಆಕೆಗೆ ಕೂದಲು ತಿನ್ನುವಂತೆ ಪ್ರಚೋದನೆ ನೀಡುತ್ತಿತ್ತು. ಇದು 25 ವರ್ಷಗಳಲ್ಲಿ ಬರೇಲಿಯಲ್ಲಿ ಟ್ರೈಕೊಲೊಟೊಮೇನಿಯಾದ ಮೊದಲ ಪ್ರಕರಣವಾಗಿದೆ.

ಮಹಿಳೆಯು 16 ವರ್ಷ ವಯಸ್ಸಿನಿಂದಲೂ ಈ ಸ್ಥಿತಿಯೊಂದಿಗೆ ಹೋರಾಡುತ್ತಿದ್ದಳು. ಆಕೆಯ ಹೊಟ್ಟೆಯಲ್ಲಿ ಕೂದಲು ಸಂಗ್ರಹವಾಗುವುದು ಗಮನಾರ್ಹ ಅಡಚಣೆ ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪರಿಹಾರ ಸಿಗಲಿಲ್ಲ.

ಮತ್ತಷ್ಟು ಓದಿ: Viral Video: ವಧುವಿನ ದೃಷ್ಟಿ ತೆಗೆದು ಮದುವೆ ಮಂಟಪಕ್ಕೆ ಕೈ ಹಿಡಿದು ಕರೆದ್ಯೊಯ್ದ ವರ

ಸೆಪ್ಟೆಂಬರ್ 22 ರಂದು ಮಹಿಳೆಯನ್ನು ಬರೇಲಿಯ ಸರ್ಕಾರಿ ಮಹಾರಾಣಾ ಪ್ರತಾಪ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಹಲವು ಪರೀಕ್ಷೆಗಳ ಬಳಿಕ ಹಿರಿಯ ಶಸ್ತ್ರಚಿಕಿತ್ಸಕ ಡಾ.ಎಂ.ಪಿ.ಸಿಂಗ್ ಮತ್ತು ಡಾ.ಅಂಜಲಿ ಸೋನಿ ನೇತೃತ್ವದ ವೈದ್ಯಕೀಯ ತಂಡವು ಶಸ್ತ್ರಚಿಕಿತ್ಸೆ ಅಗತ್ಯ ಎಂದು ನಿರ್ಧರಿಸಿತು.

ಹೊಟ್ಟೆಯಿಂದ ಬೃಹತ್ ಕೂದಲಿನ ಬಂಡಲ್​ನ್ನು ತೆಗೆದುಹಾಕಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ