AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೈಕ್​​​ ಸುಟ್ಟು ಮಗನ ಬೈಕ್ ರೇಸಿಂಗ್ ಚಟಕ್ಕೆ ಬ್ರೇಕ್​​ ಹಾಕಿದ ಅಪ್ಪ

"ನನ್ನ ಮಗನನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ಬೈಕ್ ಸುಟ್ಟು ಹಾಕಿದೆ. ಶಾಲೆಗೆ ಹೋಗಲು ಸುಲಭವಾಗಲಿ ಎಂದು ಬೈಕ್​ ಖರೀದಿಸಿದ್ದೆ, ಆದರೆ ಶಾಲೆಗೆ ಹೋಗದೆ ರಾತ್ರಿಯಾದರೂ ಮನೆಗೆ ಬಾರದೆ ಬೈಕ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ. ಆದ್ದರಿಂದ ಬೈಕ್ ನಾಶಪಡಿಸದೆ ತನಗೆ ಬೇರೆ ದಾರಿಯಿರಲಿಲ್ಲ" ಎಂದು ತಂದೆ ಹೇಳಿಕೊಂಡಿರುವುದು ವರದಿಯಾಗಿದೆ.

Viral Video: ಬೈಕ್​​​ ಸುಟ್ಟು ಮಗನ ಬೈಕ್ ರೇಸಿಂಗ್ ಚಟಕ್ಕೆ ಬ್ರೇಕ್​​ ಹಾಕಿದ ಅಪ್ಪ
ಅಕ್ಷತಾ ವರ್ಕಾಡಿ
|

Updated on:Oct 05, 2024 | 6:21 PM

Share

ಮಲೇಷ್ಯಾ: ಬೈಕ್ ರೇಸಿಂಗ್ ಬಗ್ಗೆ ಸಖತ್​​ ಕ್ರೇಜ್​ ಹೊಂದಿದ್ದ ತನ್ನ ಮಗ ಅಪಘಾತಕ್ಕೀಡಾಗಬಹುದೆಂಬ ಭಯದಿಂದ ತಂದೆ ಮಗನ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ಸೆಂಟ್ರಲ್ ಮಲೇಷ್ಯಾದ ಕೌಲಾಲಂಪುರ್ ಬಳಿಯ ಶಾ ಆಲಂ ಎಂಬಲ್ಲಿ ನಡೆದಿದೆ. ತನ್ನ ಮಗನ ಸುರಕ್ಷತೆಗಾಗಿ ಬೈಕ್‌ಗೆ ಬೆಂಕಿ ಹಚ್ಚಿದ್ದು, ಬೈಕ್ ಸುಟ್ಟು ಹಾಕಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ತನ್ನ ಮಗನಿಗೆ ಶಾಲೆಗೆ ಹೋಗಲು ಸುಲಭವಾಗಲಿ ಎಂದು ತಂದೆ ಮೋಟಾರ್ಸೈಕಲ್ ಖರೀದಿಸಿದ್ದರು. ಆದರೆ, ಮಗ ಬೈಕ್ ರೇಸಿಂಗ್ ಚಟಕ್ಕೆ ಬಿದ್ದಾಗ ತಂದೆಗೆ ಭಯ ಶುರುವಾಗಿದೆ . ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಮಗನ ಚಲನವಲನ ಆತನಿಗೆ ಅತೀವ ಆತಂಕವನ್ನುಂಟು ಮಾಡಿತ್ತು. ಮಗ ಶಾಲೆಗೆ ಹೋಗದೆ ರಾತ್ರಿಯಾದರೂ ಮನೆಗೆ ಬಾರದೆ ಬೈಕ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುತ್ತಿರುವುದು ತಂದೆಗೆ ತಿಳಿದಿದೆ. ಈ ಕುರಿತು ಮನೆಯಲ್ಲಿ ತಂದೆ ಮಗನ ನಡುವೆ ಹಲವು ಬಾರಿ ಜಗಳವಾಗಿದೆ. ಆದರೆ ಪ್ರಯೋಜನವಾಗಲಿಲ್ಲ ಎಂಬ ಕಾರಣಕ್ಕೆ ಕೊನೆಯದಾಗಿ ತಂದೆ ಮಗನ ಬೈಕನ್ನು ಸುಟ್ಟು ಹಾಕಿರುವುದಾಗಿ ಸ್ಥಳೀಯ ಮಾಧ್ಯಮ ಸಿನ್ ಚ್ಯೂ ಡೈಲಿ ವರದಿ ಮಾಡಿದೆ.

ನನ್ನ ಮಗನನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ಬೈಕ್ ಸುಟ್ಟು ಹಾಕಿದೆ. ತನ್ನ ಮತ್ತು ಮಗನ ನಡುವಿನ ಸಂಘರ್ಷಕ್ಕೆ ಮೋಟಾರ್‌ಸೈಕಲ್ ಪ್ರಮುಖ ಕಾರಣವಾಗಿದ್ದು, ಅದನ್ನು ನಾಶಪಡಿಸದೆ ತನಗೆ ಬೇರೆ ದಾರಿಯಿರಲಿಲ್ಲ ಎಂದು ತಂದೆ ಹೇಳಿಕೊಂಡಿರುವುದು ವರದಿಯಾಗಿದೆ.

ಇದನ್ನೂ ಓದಿ: ಬೇಕರಿಯ ಸ್ವೀಟ್ ಮೇಲೆ ಮಸ್ತಾಗಿ ಓಡಾಡುತ್ತಿರುವ ಇಲಿ, ಇಲ್ಲಿನ ಸಿಹಿ ತಿಂದ್ರೆ ನರಕ ಗ್ಯಾರಂಟಿ

ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವಿಭಾಗವು ತಂದೆಯ ಕಾರ್ಯವನ್ನು ಸಮರ್ಥಿಸಿಕೊಂಡರೆ, ಇದು ಹಾಗಲ್ಲ ಮತ್ತು ಮಗನನ್ನು ಸರಿಪಡಿಸಬೇಕಾಗಿತ್ತು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ತಂದೆ ಮತ್ತು ಮಗನ ನಡುವಿನ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹಲವರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Sat, 5 October 24

Follow Us
Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್