Viral Video: ಬೇಕರಿಯ ಸ್ವೀಟ್ ಮೇಲೆ ಮಸ್ತಾಗಿ ಓಡಾಡುತ್ತಿರುವ ಇಲಿ, ಇಲ್ಲಿನ ಸಿಹಿ ತಿಂದ್ರೆ ನರಕ ಗ್ಯಾರಂಟಿ
ಬೇಕರಿಯಲ್ಲಿ ಇರಿಸಲಾದ ಸ್ವೀಟ್ ಮೇಲೆ ಇಲಿಯೊಂದು ಮಸ್ತಾಗಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಒಬ್ಬರು "ಇದು ಸಾಕು ಇಲಿ ಆಗಿರಬೇಕು" ಎಂದು ಹಾಸ್ಯಸ್ಪದವಾಗಿ ಬರೆದರೆ, ಮತ್ತೊಬ್ಬರು "ಇಲ್ಲಿನ ಸಿಹಿ ತಿಂದ್ರೆ ನರಕ ಗ್ಯಾರಂಟಿ" ಎಂದು ಕಾಮೆಂಟ್ ಮಾಡಿದ್ದಾರೆ.
ಬೇಕರಿಯಲ್ಲಿ ಇರಿಸಲಾದ ಬಗೆಬಗೆಯ ಸ್ವೀಟ್ಗಳನ್ನು ಕಂಡಾಗ ಏನೇ ಡಯಟ್ ಇದ್ರೂನೂ ಒಂದು ಕ್ಷಣ ಬಾಯಲ್ಲಿ ನಿರೂರುವುದಂತೂ ಖಂಡಿತಾ. ಬಾಯಲ್ಲಿ ಇಟ್ಟಾಗ ಕರಗುವ ಸ್ಟೀಟ್ ಯಾರಿಗೆ ಇಷ್ಟ ಇಲ್ಲ ಹೇಳಿ. ಆದ್ರೆ ಹೊರಗಡೆ ತಿನ್ನುವಾಗ ಒಂದು ಕ್ಷಣ ಅಲ್ಲಿನ ಸ್ವಚ್ಛತೆಯ ಬಗ್ಗೆ ಕಣ್ಣಾಡಿಸುವುದು ಅಗತ್ಯ. ಯಾಕೆಂದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಬೇಕರಿಯಲ್ಲಿ ಇರಿಸಲಾದ ಸ್ವೀಟ್ ಮೇಲೆ ಇಲಿಯೊಂದು ಮಸ್ತಾಗಿ ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ನವಭಾರತ್ ಟೈಮ್ಸ್ ಪೋಸ್ಟ್ ಮಾಡಿದ ಸುದ್ದಿ ವರದಿ ಮತ್ತು ವೀಡಿಯೋ ಪ್ರಕಾರ, ದೆಹಲಿಯ ಭಜನ್ಪುರ ಪ್ರದೇಶದ ಅಗರ್ವಾಲ್ ಸ್ವೀಟ್ಸ್ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
@GagandeepNews ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಗಾಜಿನ ಡಿಸ್ಪ್ಲೇ ಕೇಸ್‌ಗಳಲ್ಲಿ ಇಟ್ಟಿದ್ದ ಸಿಹಿತಿಂಡಿಗಳ ಮೇಲೆ ಇಲಿ ಓಡಾಡುತ್ತಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
काउंटर पर लगी मिठाई में चूहें दौड़ लगा रहे हैं, लोगों की सेहत के साथ बड़ा खेल है, लगातार ऐसे मामले सामने आ रहे हैं आखिर प्रशासन कब इन पर सख्त कार्रवाई करेगा? मामला राजधानी दिल्ली के खजूरी चौक अग्रवाल स्वीट्स का बताया जा रहा है pic.twitter.com/AZveLiNbsX
— Gagandeep Singh (@GagandeepNews) October 4, 2024
ಇದನ್ನೂ ಓದಿ: ವಧುವಿನ ದೃಷ್ಟಿ ತೆಗೆದು ಮದುವೆ ಮಂಟಪಕ್ಕೆ ಕೈ ಹಿಡಿದು ಕರೆದ್ಯೊಯ್ದ ವರ
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ