
Delhi Metro: ಮೆಟ್ರೋ ದಿನೇದಿನೇ ತನ್ನ ಕುಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಜಗಳ, ಹೊಡೆದಾಟಕ್ಕಂತೂ ಲೆಕ್ಕವೇ ಇಲ್ಲ. ಹಾಗೆಯೇ ರೀಲಿಗರ ಹಾವಳಿ. ಡ್ಯಾನ್ಸ್ ಮಾಡುವುದು, ರ್ಯಾಂಪ್ ವಾಕ್ ಮಾಡುವುದು, ಸಾಹಸಗಳನ್ನು ಮಾಡುವುದು ಹೀಗೆ. ಇದೀಗ ಮತ್ತೆ ದೆಹಲಿ ಮೆಟ್ರೋ ಸುದ್ದಿಯಲ್ಲಿದೆ. ಜೋಡಿಯೊಂದು ಪಾನೀಯವನ್ನು (Drinks) ಕುಡಿದು ಪರಸ್ಪರರ ಬಾಯಿಯಲ್ಲಿ ಅದನ್ನು ಉಗಿದುಕೊಂಡಿದೆ. ಇದನ್ನು ಅವರು ರೀಲಿಗಾಗಿಯೇ ಮಾಡಿದ್ದಾರೆ. ಅಸಹ್ಯಕರವಾದ ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವುದಕ್ಕೂ ಒಂದು ಇತಿಮಿತಿ ಬೇಡವಾ ಎನ್ನುತ್ತಿದ್ದಾರೆ.
ಇದನ್ನೂ ಓದಿ : Viral Brain Teaser: 10 ಸೆಕೆಂಡುಗಳಲ್ಲಿ 5 ವ್ಯತ್ಯಾಸಗಳನ್ನು ಗುರುತಿಸಿ
ಅ.10ರಂದು ಈ ವಿಡಿಯೋ ಅನ್ನು X ನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 54,000 ಜನರು ನೋಡಿದ್ದಾರೆ. 1,000 ಜನರು ಲೈಕ್ ಮಾಡಿದ್ದು, ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಮಂಡಿಯೂರಿ ಕುಳಿತ ಯುವಕ ಯುವತಿಗೆ ಕಾರ್ಬೋನೇಟೆಡ್ ಡ್ರಿಂಕ್ಸ್ ಕುಡಿಸುತ್ತಾನೆ. ಆಕೆ ಕುಡಿದುದನ್ನು ಅವನ ಬಾಯಿಗೆ ವಾಪಾಸ್ ಬಿಡುತ್ತಾಳೆ. ನಂತರ ಆತನೂ ಆಕೆಯ ಬಾಯಿಯಲ್ಲಿ ಬಿಡುತ್ತಾನೆ. ಆನಂತರ ಇಬ್ಬರೂ ಮಹಾನ್ ಸಾಧನೆ ಮಾಡಿದೆವೇನೋ ಎಂಬಂತೆ ಆಪ್ತತೆ, ಖುಷಿ ಅನುಭವಿಸುತ್ತಾರೆ.
ಮೆಟ್ರೋದಲ್ಲಿ ತಿನ್ನುವುದು, ಕುಡಿಯುವುದನ್ನು ನಿಷೇಧಿಸಲಾಗಿದೆಯಲ್ಲವೆ ಎಂದು ಕೇಳಿದ್ದಾರೆ ಒಬ್ಬರು. ಇದು ಖಂಡಿತ ದೆಹಲಿ ಮೆಟ್ರೋ ಇರುತ್ತದೆ ಎಂದಿದ್ದಾರೆ ಮತ್ತೊಬ್ಬರು. ಅವರು ವಿಮಲ್ ತಿನ್ನದಿರುವುದು ನಮ್ಮ ಅದೃಷ್ಟ ಎಂದಿದ್ದಾರೆ ಇನ್ನೊಬ್ಬರು. ಮೈಂಡ್ ಬ್ಲೋಯಿಂಗ್! ಎಂದು ವ್ಯಂಗ್ಯವಾಡಿದ್ದಾರೆ ಮಗದೊಬ್ಬರು. ದೆಹಲಿ ಮೆಟ್ರೋ ಬರುಬರುತ್ತ ಹಾದಿ ತಪ್ಪುತ್ತಿದೆ ಎಂದು ಹಲವಾರು ಜನ ಹೇಳಿದ್ದಾರೆ.
ಇದನ್ನೂ ಓದಿ : Viral Video: ಶಿಲ್ಪಾ ಶೆಟ್ಟಿಯ ಈ ಫಿಟ್ನೆಸ್ ಸವಾಲಿಗೆ ನೀವು ಸಿದ್ಧರೇ?
ಪ್ರಯಾಣಿಕರಿಗೆ ಇದರಿಂದ ತೊಂದರೆಯಾಗುತ್ತದೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇವರಿಗಿಲ್ಲವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಅನೇಕರು. ಇವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ ಒಬ್ಬರು. ಇಂಥ ವಿಡಿಯೋಗಳು ನಿತ್ಯವೂ ಹರಿದುಬರುತ್ತಲೇ ಇವೆ. ದೆಹಲಿ ಮೆಟ್ರೋದ ಆಡಳಿತವರ್ಗ ಯಾಕೆ ನಿರ್ಲಕ್ಷ್ಯ ಮಾಡುತ್ತಿದೆಯೋ ಗೊತ್ತಿಲ್ಲ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ