
Viral: ಈ ವಿಡಿಯೋ ನೋಡಿ. ಈ ಸಂಬಂಧದಲ್ಲಿ ಎಲ್ಲವೂ ಮೌನದಲ್ಲಿ ಅರ್ಥ ಮಾಡಿಕೊಳ್ಳಲ್ಪಡುತ್ತದೆ. ಒಂದು ನೇವರಿಕೆ, ಒಂದು ಆಪ್ತನೋಟ, ಒಂದು ಕಾಳಜಿ, ಒಂದು ಅಪ್ಪುಗೆ… ಅದೆಷ್ಟು ಭರವಸೆ ಇದೆ ಇಲ್ಲಿ. ಸಾವಿರಾರು ವೈರಲ್ ಪೋಸ್ಟ್ಗಳನ್ನು ನೋಡಿದ್ದೀರಿ; ಬೆಕ್ಕು, ನಾಯಿ, ಕೋತಿ ಹೀಗೆ ಅದೆಷ್ಟೋ ಪ್ರಾಣಿಗಳು ಸಾಕಿದವರನ್ನು ಮುದ್ದಿಸಿದ್ದು, ಮೊಂಡಾಟ ಮಾಡಿದ್ದು, ಕೋಪ ಮಾಡಿಕೊಂಡಿದ್ದು, ಪ್ರೀತಿಸಿದ್ದು ಹೀಗೆ. ಅಲ್ಲದೆ ಸಾಕಷ್ಟು ತಳಿಯ ನಾಯಿಗಳ ಬುದ್ಧಿವಂತಿಕೆ ಪ್ರದರ್ಶನ ನೀಡಿದ್ದನ್ನು ನೋಡಿ ಅಚ್ಚರಿ ಪಟ್ಟಿದ್ದೀರಿ. ಆದರೆ ಪ್ರೀತಿ ಎಂದೂ ಜಾಣತನದಿಂದ, ಬುದ್ಧಿವಂತಿಕೆಯಿಂದ ಕೂಡಿರುವುದಿಲ್ಲ. ಅದೊಂದು ಉತ್ಕೃಷ್ಟ ಭಾವ. ಅದಕ್ಕೆ ನೀತಿ ನಿಯಮಗಳಿಲ್ಲ. ಯಾವುದೇ ಗಡಿಗೋಡೆಗಳಿಲ್ಲ. ಈ ಹೆಣ್ಣುಮಗಳನ್ನು ಈ ನಾಯಿಗಳೆಲ್ಲ ಅಪ್ಪಿಕೊಳ್ಳುವುದನ್ನು ನೋಡಿದರೆ ಬಹುಶಃ ಸ್ನೇಹ ಪ್ರೀತಿ ಸಂಬಂಧ ಎಂದರೆ ಏನೆಂದು ಅರ್ಥವಾಗುತ್ತದೆ. ಈ ವಿಡಿಯೋವನ್ನು ಆರ್ಪಿಜಿ ಎಂಟರ್ಪ್ರೈಝಸ್ನ ಅಧ್ಯಕ್ಷ ಹರ್ಷ ಗೋಯೆಂಕಾ ಮರುಹಂಚಿಕೆ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದವರು ಅಜಯ್ ಜೋಯ್ ಎಂಬುವವರು.
‘ಸ್ನೇಹಕ್ಕೆ ಯಾವುದೇ ಲಿಂಗ, ಧರ್ಮ, ವಯಸ್ಸಿನ ಹಂಗಿಲ್ಲ. ಇಬ್ಬರು ವ್ಯಕ್ತಿಗಳ ಮಧ್ಯೆ ಮಾತ್ರ ಸ್ನೇಹವಿರಬೇಕೆಂದಿಲ್ಲ. ಪ್ರಾಣಿಗಳೊಂದಿಗೆ ಹೀಗೆ ಆಪ್ತ ಸಂಬಂಧ ಬೆಳೆಸಬಹುದು. ಈ ಹೆಣ್ಣುಮಗಳನ್ನು ಈ ನಾಯಿಗಳು ಗುಂಪಾಗಿ ಬಂದು ಅಪ್ಪಿಕೊಳ್ಳುವ ದೃಶ್ಯ ನೋಡಿ. ಬಹುಶಃ ಇದೇ ನಿಜವಾದ ಸ್ನೇಹಸಂಬಂಧ’ ಎಂದಿದ್ದಾರೆ ಹರ್ಷ. ಈ ವಿಡಿಇಯೋ 53,000 ವೀಕ್ಷಣೆ ಕಂಡಿದೆ.
ಇಷ್ಟೆಲ್ಲ ನಾಯಿಗಳು ಒಮ್ಮೆಲೆ ಬಂದು ಆ ಹೆಣ್ಣುಮಗಳನ್ನು ಅಪ್ಪಿಕೊಳ್ಳುವುದನ್ನು ನೋಡಿದರೆ ಎಂಥ ಬಾಂಧವ್ಯ ಇರಬೇಕು ಇವರೆಲ್ಲರ ಮಧ್ಯೆ. ಬಾಂಧವ್ಯ ಅನ್ನುವುದು ಕ್ಷಣಾರ್ಧದಲ್ಲಿ ಆಗುವಂಥದ್ದಲ್ಲ. ಬೀಜ ನೆಟ್ಟು ಮರ ಬೆಳೆಸಿದಂತೆ. ಹಾಗೆಯೇ ಈ ಸ್ನೇಹ ಪ್ರೀತಿ ಎನ್ನುವುದಕ್ಕೆ ಅಗಾಧ ತಾಳ್ಮೆ, ಸಹನೆ, ಆದ್ಯತೆ ಎಲ್ಲವೂ ಬೇಕಾಗುತ್ತದೆ. ಅದಿಲ್ಲಿ ಸಾಧ್ಯವಾಗಿದೆ. ಸಾಧ್ಯವಾಗಿದೆ ಎಂದರೆ ಇಲ್ಲಿರುವುದು ನಿಸ್ಪೃಹತೆ.
ಇನ್ನಷ್ಟು ಇಂಥ ವಿಡಿಯೋಗಳನ್ನು ನೋಡಲು ಕ್ಲಿಕ್ ಮಾಡಿ
Published On - 12:46 pm, Mon, 8 August 22