Video: ಹಾಲಿನ ಬಾಟಲಿ ಮಗುವಿನ ಬಾಯಿಗೆ ಇಡೋ ಬದಲು ಕಿವಿಗೆ ಇಟ್ಟ ಮಹಿಳೆ

ಮಕ್ಕಳ ಆರೈಕೆ ಮಾಡುವಾಗ ಎಷ್ಟು ಜಾಗ್ರತೆ ವಹಿಸಿದ್ರೂ ಸಾಲಲ್ಲ. ಸ್ವಲ್ಪ ಎಚ್ಚರ ತಪ್ಪಿದ್ರೂ ಕೂಡ ಎಡವಟ್ಟುಗಳು ಆಗುತ್ತವೆ. ಈ ವಿಡಿಯೋ ನೋಡಿದ್ರೆ ನಿಮಗೆ ಈ ಮಾತು ನಿಜವೆನಿಸುತ್ತದೆ. ಮೈಮರೆತ ತಾಯಿಯೊಬ್ಬಳು ಮಗುವಿಗೆ ಹಾಲು ಕುಡಿಸುವಾಗ ಹಾಲಿನ ಬಾಟಲಿಯನ್ನು ಬಾಯಿಗೆ ಇಡುವ ಬದಲು ಕಿವಿಗೆ ಇಟ್ಟು ಎಡವಟ್ಟು ಮಾಡಿಕೊಂಡಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Video: ಹಾಲಿನ ಬಾಟಲಿ ಮಗುವಿನ ಬಾಯಿಗೆ ಇಡೋ ಬದಲು ಕಿವಿಗೆ ಇಟ್ಟ ಮಹಿಳೆ
ವೈರಲ್‌ ವಿಡಿಯೋ
Image Credit source: Instagram

Updated on: Mar 10, 2026 | 2:51 PM

ಪುಟ್ಟ ಮಕ್ಕಳನ್ನು (little kids) ನೋಡಿಕೊಳ್ಳುವಾಗ ಅವರ ಮೇಲೆ ಎಷ್ಟು ಕಣ್ಣು ಇಟ್ಟಿದ್ದರೂ ಕಡಿಮೆಯೇ. ಪುಟಾಣಿ ಮಕ್ಕಳೇ ಹಾಗೆ, ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳ ವಿಷಯದಲ್ಲಿ ಹೆತ್ತವರು ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಇನ್ನು ಹೆತ್ತವರ ಕೆಲವು ಬೇಜವಾಬ್ದಾರಿತನದಿಂದ ಪುಟಾಣಿಗಳು ಸಮಸ್ಯೆಗೆ ಸಿಲುಕಿ ಕೊಳ್ಳುವುದಿದೆ. ಇದೀಗ ಇಂತಹದ್ದೇ ವಿಡಿಯೋ ವೈರಲ್‌ ಆಗಿದ್ದು,  ಮಹಿಳೆಯೂ ಹಾಲಿನ ಬಾಟಲಿಯನ್ನು ಮಗುವಿನ ಬಾಯಿಗೆ ಇಡೋ ಬದಲು ಕಿವಿಗೆ ಇಟ್ಟಿದ್ದಾಳೆ. ಈ ದೃಶ್ಯ ನೋಡಿದ ನೆಟ್ಟಿಗರು ಈ ಮಹಿಳೆಯ ವಿರುದ್ಧ ಗರಂ ಆಗಿದ್ದಾರೆ.

dr_abhinandan_ tripathi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಡಿಲಲ್ಲಿ ಚಿಕ್ಕ ಮಗುವನ್ನು ಹಿಡಿದುಕೊಂಡು, ಆರಾಮವಾಗಿ ಕುಳಿತುಕೊಂಡಿದ್ದಾಳೆ. ಬಾಟಲಿಯಿಂದ ಮಗುವಿಗೆ ಹಾಲುಣಿಸುತ್ತಿರುವುದನ್ನು ನೋಡಬಹುದು. ಆದರೆ ಇದೇ ವೇಳೆ ಈ ಮಹಿಳೆ ಎಡವಟ್ಟು ಮಾಡಿಕೊಂಡಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಪುಟ್ಟ ಮಗುವಿನ ಬಾಯಿಗೆ ಹಾಲಿನ ಬಾಟಲಿ ಇಡುವುದನ್ನು ಬಿಟ್ಟು ಕಿವಿಗೆ ಇಟ್ಟಿದ್ದಾಳೆ. ಈ ಪುಟ್ಟ ಕಂದಮ್ಮನಿಗೂ ತಾಯಿ ಏನು ಮಾಡುತ್ತಿದ್ದಾಳೆ ಎಂದು ತಿಳಿಯದೇ ಅಳಲು ಶುರು ಮಾಡಿದೆ. ಅದಲ್ಲದೇ ಮಗು ಹಸಿವಿನಿಂದ ಹಾಲಿಗಾಗಿ ಸುತ್ತಲೂ ಹುಡುಕಲು ಪ್ರಾರಂಭಿಸಿದೆ. ಈ ಮಹಿಳೆಯ ಸಂಪೂರ್ಣ ಗಮನವು ತನ್ನ ಮುಂಭಾಗದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಮೇಲಿದೆ.

ಇದನ್ನೂ ಓದಿ: ಪ್ರಶ್ನೆಗೆ ಉತ್ತರ ಹೇಳಂದ್ರೆ ಹೊಟ್ಟೆ ನೋವೆಂದು ಕುಂಟು ನೆಪ ಹೇಳಿದ ಪುಟಾಣಿ, ಮುಂದೇನಾಯ್ತು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮಗುವಿನ ಮೇಲೆ ತಾಯಿಗೆ ಜ್ಞಾನನೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಾಯಿ ಅಂದ್ರೆ ಹೀಗೆ ಇರ್ಬೇಕು ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು,
ಮಗು ಮೇಲೆ ಗಮನ ಕೊಡದೇ ಆ ಕಡೆ ಏನು ನೋಡ್ತಾ ಇದ್ದಿಯಾ ಸುಂದ್ರಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us